ಆಚಾರ್​ &​ ಕೋ , ಬರ್ತಿದೆ ಫ್ಯಾಮಿಲಿ ಓರಿಯೆಂಟೆಡ್ ಕಾಮಿಡಿ ಎಂಟರ್ಟೈನರ್ ಸಿನಿಮಾ , ಇದೇ ಭಾನುವಾರ ಮಧ್ಯಾಹ್ನ 1 ಗಂಟೆಗೆ

ಜಾಹೀರಾತುಗಳು
Suvarna World Premiere Movie Achar & Co
Suvarna World Premiere Movie Achar & Co

ಕನ್ನಡ ಕಿರುತೆರೆ ಅಭಿಮಾನಿಗಳ ಮನರಂಜನೆಗಾಗಿ ಸದಾಕಾಲ ಹೊಸತನವನ್ನು ನೀಡುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ ‘ಆಚಾರ್​ &​ ಕೋ’ ಸಿನಿಮಾವನ್ನು ಪ್ರಸಾರಮಾಡಲು ಸಜ್ಜಾಗಿದೆ.

‘ಪಿಆರ್​ಕೆ ಪ್ರೊಡಕ್ಷನ್ಸ್​’ ಸಂಸ್ಥೆ ಪುನೀತ್​ ರಾಜ್​ಕುಮಾರ್​ ಅವರ ಕನಸಿನ ಕೂಸು. ಸಂಸ್ಥೆಯ ಆಶಯದಂತೆಯೇ ಈ ಅದ್ಬುತ ಸಿನಿಮಾವನ್ನು ‘ಪಿಆರ್​ಕೆ ಪ್ರೊಡಕ್ಷನ್ಸ್​’ ನಿರ್ಮಿಸಿದೆ. ಇದೊಂದು ರೆಟ್ರೋ ಕಾಲದ ಹಾಗು 1960ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಥೆ. ಒಂದು ಅವಿಭಕ್ತ ಕುಟುಂಬದಲ್ಲಿ ಮನೆ ತುಂಬ ಮಕ್ಕಳು. ಮಕ್ಕಳ ಶಿಕ್ಷಣ, ಉದ್ಯೋಗ, ಮದುವೆಯ ಜವಾಬ್ದಾರಿ ವಹಿಸಿಕೊಂಡ ತಂದೆ ಏಕಾಏಕಿ ನಿಧನರಾದಾಗ ಮನೆಯ ಪರಿಸ್ಥಿತಿ ಹಾಗು ಆ ಕುಟುಂಬದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಎಂಬುದು ಈ ಸಿನಿಮಾದ ಕಥಾ ಹಂದರ. ಎಮೋಷನಲ್ ದೃಶ್ಯಗಳನ್ನು ಹೊಂದಿರುವ ಈ ಚಿತ್ರಕ್ಕೆ ಹಾಸ್ಯವೇ ಮುಖ್ಯ ಜೀವಾಳ.

ಜಾಹೀರಾತುಗಳು

ಇನ್ನು ಈ ಚಿತ್ರದ ಮತ್ತೊಂದು ವಿಶೇಷತೆ ಅಂದ್ರೆ ಸಿನಿಮಾದ ಹೆಚ್ಚಿನ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿದ್ದು ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿಗಳು, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು ಹಾಗು ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ಕಾರ್ಯನಿರ್ವಹಿಸಿದ್ದಾರೆ. ಹಲವು ಹಿರಿಯ-ಕಿರಿಯ ಕಲಾವಿದರ ಸಂಗಮ ಈ ಸಿನಿಮದಲ್ಲಾಗಿದೆ. ಈ ಸಿನಿಮಾದ ‘ಪಿಕಲ್ ಸಾಂಗ್’ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಥಿಯೇಟರ್ ನಲ್ಲಿ ಸದ್ದು ಮಾಡಿದ್ದ ಈ ಸಿನಿಮಾ ಕಿರುತೆರೆಗೆ ಲಗ್ಗೆಯಿಡುತ್ತಿದೆ.

ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ‘ಆಚಾರ್​ &​ ಕೋ’ ಇದೇ ಭಾನುವಾರ ಮಧ್ಯಾಹ್ನ 1 ಗಂಟೆಗೆ ತಪ್ಪದೇ ವೀಕ್ಷಿಸಿ.

Leave a Comment