ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಜಾಹೀರಾತುಗಳು
Bombat Bojana Ugadi Special
Bombat Bojana Ugadi Special

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ “ಬೊಂಬಾಟ್ ಭೋಜನ”ದಲ್ಲಿ ಇದೀಗ ನವ ಸಂವತ್ಸರದ ಮೊದಲ ಹಬ್ಬ ‘ಯುಗಾದಿ’ಯ ಸಂಭ್ರಮಾಚರಣೆ ಬೊಂಬಾಟ್ ಆಗಿ ನಡೆಯುತ್ತಿದೆ.

ಸಿಹಿ ಕಹಿ ಚಂದ್ರು ರವರ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಈ ಶೋ, ಮನೆ ಮಂದಿಗೆ ರುಚಿಕರವಾದ ಅಡುಗೆಯನ್ನು ಮಾಡಿ ಬಡಿಸುವಲ್ಲಿ ವೀಕ್ಷಕರಿಗೆ ಸಹಾಯಕವಾಗಿದೆ. ಪ್ರಸ್ತುತ 4 ನೇ ಆವೃತ್ತಿಯೊಂದಿಗೆ ಮುಂದುವರಿಯುತ್ತಿರುವ ‘ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ಈ ಬಾರಿ ವರ್ಷದ ಮೊದಲ ಹಬ್ಬ ಯುಗಾದಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ವಾರವಿಡೀ ಸ್ಯಾಂಡಲ್ ವುಡ್ ತಾರೆಗಳು ಆಗಮಿಸಲಿದ್ದಾರೆ.

ಜಾಹೀರಾತುಗಳು

ಬೇವು ಬೆಲ್ಲದ ಸವಿ ಹಂಚಲು ಇದೇ ಏಪ್ರಿಲ್ 8 ರಂದು ಸೋಮವಾರ ನಟ ಸತೀಶ್ ನೀನಾಸಂ, ಮಂಗಳವಾರ ನಟಿ ನಿಶ್ವಿಕಾ ನಾಯ್ಡು ಹಾಗು ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು, ಬುಧವಾರ ನಟ ದಿಗಂತ್, ಗುರುವಾರ ಶಿವರಾಜ್ ಕೆ ಆರ್ ಪೇಟೆ, ಶುಕ್ರವಾರ ಕಿರುತೆರೆ ನಟ ಕಿರಣ್ ರಾಜ್ ಹಾಗು ಶನಿವಾರ ‘ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು’ ಸಿನಿಮಾ ಖ್ಯಾತಿಯ ದಡ್ಡ ಪ್ರವೀಣ ಆಗಮಿಸುತ್ತಿದ್ದಾರೆ. ಹೀಗಾಗಿ ವಾರಪೂರ್ತಿ ಮಧ್ಯಾಹ್ನ ವೀಕ್ಷಕರಿಗೆ ಬೊಂಬಾಟ್ ಮನರಂಜನೆ ಸಿಗಲಿದೆ.

ಯುಗಾದಿಯ ಪ್ರಯುಕ್ತ ‘ಬೊಂಬಾಟ್ ಭೋಜನ’ದಲ್ಲಿ ಬರ್ತಿದೆ ಹಬ್ಬದ ವಿಶೇಷ ಸಂಚಿಕೆಗಳು ಏಪ್ರಿಲ್ 8 ರಿಂದ ಏಪ್ರಿಲ್ 14 ರವರೆಗೆ ಸೋಮ-ಶನಿವಾರ ಮಧ್ಯಾಹ್ನ12 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.

Leave a Comment