ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಜಾಹೀರಾತುಗಳು

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್

Salaar Movie On TV
Salaar Movie On TV

ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು ನೀಡುತ್ತಾ ಬಂದಿದೆ. ವಿಶ್ವ-ವಿಖ್ಯಾತಿ ಪಡೆದ ಕಾಂತಾರ, ಹೊಯ್ಸಳ, ಜೇಮ್ಸ್ ನಂತಹ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ಪ್ರಸಾರ ಮಾಡಿ ಪ್ರೇಕ್ಷಕರ ಮನಗೆದ್ದ ಸುವರ್ಣ ವಾಹಿನಿಯಲ್ಲಿ ಇದೀಗ 2023ರ ಬ್ಲಾಕ್ ಬಸ್ಟರ್ ಹಿಟ್ “ಸಲಾರ್” ಸಿನಿಮಾ ಪ್ರಸಾರವಾಗಲಿದೆ. ಜೊತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿಯು ನೀಡುತ್ತಿದೆ.

ರೆಬಲ್ ಸ್ಟಾರ್ ಪ್ರಭಾಸ್ ಅಭಿನಯದ ‘ಸಲಾರ್’ ಸಿನಿಮಾವು ಬಾಕ್ಸ್ ಆಫೀಸ್​ನಲ್ಲಿ 700 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಇದೀಗ ಈ ಸಿನಿಮಾವು ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಸುವರ್ಣ ವರ್ಲ್ಡ್ ಪ್ರೀಮಿಯರ್ ಆಗುತ್ತಿದ್ದು. ಈ ಸಿನಿಮಾದಲ್ಲಿ ವೀಕ್ಷಕರಿಗೆ ಪ್ರಭಾಸ್ ಅವರ ಲುಕ್ ಜೊತೆಗೆ ಸಿನಿಮಾದಲ್ಲಿ ಬಳಸಲಾಗಿದ್ದ ಬೈಕ್ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿ ಮಾಡಿತ್ತು. ಇದೀಗ ಆ ಬೈಕ್ ಗೆಲ್ಲೋ ಅವಕಾಶವನ್ನು ನೋಡುಗರಿಗೆ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯು ನೀಡುತ್ತಿದೆ. ‘ಸಲಾರ್’ ಸಿನಿಮಾ ನೋಡ್ತಾ ನೋಡ್ತಾ, ಅಲ್ಲಿ ಕೇಳೊ ಪ್ರಶ್ನೆಗಳಿಗೆ ಆದಷ್ಟು ಬೇಗ ಸರಿಯಾದ ಉತ್ತರ ಕೊಟ್ರೆ, ಅದೃಷ್ಟಶಾಲಿ ವಿಜೇತರಿಗೆ ‘ಸಲಾರ್’ ನಲ್ಲಿ ಪ್ರಭಾಸ್ ಬಳಸಿರೋ ಬೈಕ್ ಬಹುಮಾನವಾಗಿ ಸಿಗಲಿದೆ.

ಜಾಹೀರಾತುಗಳು

ಕನ್ನಡದ ಹೆಸರಾಂತ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾವನ್ನು ನಿರ್ದೇಶಿಸಿದ್ದು, ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ನಿರ್ಮಿಸಿದೆ. ಇನ್ನು ಈ ಸಿನಿಮಾದ ಹಾಡುಗಳು ಅದ್ಭುತ ರೀತಿಯಲ್ಲಿ ಮೂಡಿ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿತ್ತು.

ಬರ್ತಿದೆ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ “ಸಲಾರ್” ಇದೇ ಭಾನುವಾರ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ತಪ್ಪದೇ ವೀಕ್ಷಿಸಿ ಮಿಸ್ಸ್ ಮಾಡದೆ ಕಾಂಟೆಸ್ಟ್ ನಲ್ಲಿ ಭಾಗವಹಿಸಿ.

Leave a Comment