ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ “ಬೊಂಬಾಟ್ ಭೋಜನ”ದಲ್ಲಿ ಈ ಬುಧವಾರ ‘ಕಾರ್ಮಿಕರ ದಿನಾಚರಣೆ’ಯ ಪ್ರಯುಕ್ತ ಪೌರ ಕಾರ್ಮಿಕರಿಗಾಗಿ ವಿಶೇಷ ಸಂಚಿಕೆಯನ್ನು ಪ್ರಸಾರ ಮಾಡಲಾಗುತ್ತಿದೆ.
ಮೇ 1 ರಂದು ವಿಶ್ವದಾದ್ಯಂತ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸುವರ್ಣ ವಾಹಿನಿಯು ‘ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ವಿಭಿನ್ನ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಅವರ ಕೆಲಸವನ್ನು ಗುರುತಿಸಿ ಗೌರವಾರ್ಪಣೆಯೊಂದಿಗೆ ವಂದಿಸಲಾಗಿದೆ. ಹಾಗು ನಳ ಮಹಾರಾಜ ಸಿಹಿ ಕಹಿ ಚಂದ್ರು ರವರು ತಮ್ಮ ಕೈಯ್ಯಾರೆ ಮಾಡಿರುವ ‘ಸ್ಟ್ರಾಬೆರಿ ಹಲ್ವ’ವನ್ನು ಆಗಮಿಸಿರುವ ಪೌರ ಕಾರ್ಮಿಕರಿಗೆ ಉಣ ಬಡಿಸಿದ್ದಾರೆ.
ಈ ವಿಶೇಷ ಸಂಚಿಕೆಯು ‘ಬೊಂಬಾಟ್ ಭೋಜನದಲ್ಲಿ’ ಇದೇ ಬುಧವಾರ(1/5/2024) ಮಧ್ಯಾಹ್ನ 12 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.