ಉದಯ ಟಿವಿ ಶೀಮದ್ ರಾಮಾಯಣ
ಕನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ರಾತ್ರಿ 10:30 ಗಂಟೆಯವರೆಗೆ ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೂರ್ಯವಂಶ, ರಾಧಿಕಾ, ಮೈನಾ, ಸೇವಂತಿ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ. ಉದಯ ಟಿವಿ ಇದೀಗ ʻಶ್ರೀಮದ್ ರಾಮಾಯಣʼ ಧಾರಾವಾಹಿಯನ್ನು ವೀಕ್ಷಕರ ಮುಂದೆ ತರುತ್ತಿದ್ದು, ಅದ್ಭುತ ಕಾವ್ಯವನ್ನು ಹೊಸ ತಲೆಮಾರಿಗೆ ತಲುಪಿಸಲು ಮುಂದಾಗಿದೆ. ಮೇ 20 ರಿಂದ ಸಂಜೆ 6 ಗಂಟೆಗೆ ಶ್ರೀಮದ್ ರಾಮಾಯಣ ಪ್ರಸಾರವಾಗಲಿದೆ.
ರಾಮಯಣ ಭಾರತೀಯ ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ಅದ್ಭುತ ಕಥೆ. ರಾಮನ ಜೀವನ ಬಹುತೇಕ ಭಾರತೀಯರಿಗೆ ಮಾದರಿಯಾಗಿದೆ. ರಾಮನ ರಾಜ್ಯ ಪರಿಪಾಲನೆಯು ಇಂದಿಗೂ ಮಾದರಿಯಾಗಿದ್ದು ರಾಮರಾಜ್ಯ ಅನ್ನುವ ಪದ ಈಗಲೂ ಬಳಸಲಾಗುತ್ತಿದೆ. ರಾಮಾಯಣ ರಾಮನ ಮತ್ತು ಸೀತೆಯ ಪವಿತ್ರ ಪ್ರೇಮ ಕಥೆಯೂ ಸಹ ಆಗಿದ್ದು ಅವರ ಧರ್ಮದ ಪಾಲನೆಯ ಮಾರ್ಗದಲ್ಲಿ ಎದುರಿಸಿದ ಅನೇಕ ಸವಾಲುಗಳು ಕುತೂಹಲಕರ.
ಉದಯ ಟಿವಿ
ಪ್ರಾಚೀನ ಭಾರತದ ಅದ್ಭುತ ಕಾವ್ಯ ʻರಾಮಾಯಣʼವನ್ನು ಹೊಸ ದೃಷ್ಟಿಕೋನದಿಂದ ಪ್ರಸಾರ ಮಾಡಲು ಸಿದ್ಧವಾಗಿರುವ ʻಶ್ರಿಮದ್ ರಾಮಾಯಣʼ ಧಾರಾವಾಹಿಯನ್ನು ಉದಯಟಿವಿ ಹೆಮ್ಮೆಯಿಂದ ವೀಕ್ಷಕರಿಗೆ ಸಮರ್ಪಿಸುತ್ತಿದೆ.
ರಾಮಾಯಣವನ್ನು ಹೊಸ ಆಯಾಮದಿಂದ ತೋರಿಸುವ ಮೂಲಕ ಉದಯ ಟಿವಿ ಪ್ರೇಕ್ಷಕರಿಗೆ ಒಂದು ಆಧುನಿಕ ಮತ್ತು ಸಮಕಾಲೀನ ಅನುಭವವನ್ನು ನೀಡಲು ಹೊರಟಿದೆ. ಸಂಪೂರ್ಣ ನೂತನ ದೃಶ್ಯ ವೈಭವಗಳು ಮತ್ತು ವೈವಿಧ್ಯಮಯ ನಟರ ತಂಡವು ಈ ಪೌರಾಣಿಕ ಪಾತ್ರಗಳಿಗೆ ಹೊಸ ಜೀವ ತುಂಬಲಿದೆ.ಇದು ವೀಕ್ಷಕರಿಗೆ ಒಂದು ಅನನ್ಯ ಅನುಭವವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಶೀಮದ್ ರಾಮಾಯಣ
ವಿಶೇಷ ಆಕರ್ಷಣೆ: ಶ್ರೀಮದ್ ರಾಮಾಯಣ ಧಾರಾವಾಹಿಯ ಪ್ರತಿ ಸಂಚಿಕೆಯ ೨೫೦ ವೀಕ್ಷಕರಿಗೆ ಒಟ್ಟೂ ೨.೫ ಲಕ್ಷ ರೂಪಾಯಿ ನಗದು ಬಹುಮಾನ ಗೆಲ್ಲುವ ಅವಕಾಶವನ್ನು ಉದಯ ಟಿವಿ ಕಲ್ಪಿಸುತ್ತಿದೆ. ಧಾರಾವಾಹಿ ವೀಕ್ಷಿಸಿ ಕೊನೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಮಿಸ್ಡ್ ಕಾಲ್ ಮೂಲಕ ಸರಿ ಉತ್ತರ ನೀಡಿದರೆ ಸಾಕು. ಅದೃಷ್ಟಶಾಲಿ 250 ವೀಕ್ಷಕರಿಗೆ ಪ್ರತಿ ಸಂಚಿಕೆಗೆ ತಲಾ 1000 ರೂ. ನಗದು ಬಹುಮಾನ ಅಂದೇ ಸಂದಾಯವಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ʻಶ್ರೀಮದ್ ರಾಮಾಯಣʼ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.