ಜೀ ಕನ್ನಡ ಚಾನೆಲ್

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಜಾಹೀರಾತುಗಳು
Comedy Khiladigalu Premier League
Comedy Khiladigalu Premier League

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ ಅವತಾರದಲ್ಲಿ ಪ್ರೇಕ್ಷಕರು ಮುಂದೆ ಬರಲಿದೆ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಹೆಸರಿನಲ್ಲಿ ವೀಕೆಂಡಲ್ಲಿ ನಗುವಿನ ಟಾನಿಕ್‌ ನೀಡೋಕೆ ಸಿದ್ದವಾಗಿರುವ ಈ ಶೋನಲ್ಲಿ ನಗುವಿನ ಮಹಾಯುದ್ದ ನಡೆಯೋದಿದೆ.

ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಈಗಾಲೇ ಸಾಕಷ್ಟು ಹಾಸ್ಯ ಕಲಾವಿದರನ್ನ ಕನ್ನಡ ಚಿತ್ರರಂಗಕ್ಕೆ ನೀಡಿರುವ ಜೀ಼ ಕನ್ನಡ ವಾಹಿನಿ, ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಮೂಲಕ ಮನೋರಂಜನೆಯನ್ನ ಮತ್ತಷ್ಟು ಹೆಚ್ಚು ಮಾಡವುದರ ಜೊತೆಗೆ ಮತ್ತಷ್ಟು ಹಾಸ್ಯ ಕಲಾವಿದರನ್ನ ಕರುನಾಡಿಗೆ ಪರಿಚಯಿಸುವ ಕೆಲಸ ಮಾಡಲಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಜನರ ಮನಸ್ಸನ್ನ ಗೆದ್ದು, ಲಕ್ಷಾಂತರ ವೀಕ್ಷಕಣೆ ಕಂಡಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಪ್ರೋಮೋ, ಕಾರ್ಯಕ್ರಮದ ಬಗ್ಗೆ ಇರುವ ಕುತೂಹಲವನ್ನ ಹಿನ್ನಷ್ಟು ಹೆಚ್ಚು ಮಾಡಿದೆ. ತಮ್ಮ ಮಾತುಗಳ ಮೂಲಕ ಜನರನ್ನ ಮಂತ್ರ ಮುಗ್ದರನ್ನಾಗಿ ಮಾಡಿದ ಕರ್ನಾಟಕದ ಶ್ರೇಷ್ಟ ನಿರೂಪಕರುಗಳಾದ ಅನುಶ್ರೀ,ಮಾಸ್ಟರ್‌ ಆನಂದ್‌,ಅಕುಲ್‌,ಶ್ವೇತಾ ಚಂಗಪ್ಪ ಮತ್ತು ಕುರಿಪ್ರತಾಪ್‌ ಈ ಶೋನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.

ಈ ಕಾರ್ಯಕ್ರಮ ಮುಖ್ಯ ಆರ್ಕಷಣೆಗಳಲ್ಲಿ ಒಂದಾಗಿರುವ ನವರಸ ನಾಯಕ ಜಗ್ಗೇಶ್ ಈಗಾಗಲೇ ಜನರ ತಲೆಯಲ್ಲಿ ಹೊಸ ಯೋಚನಯೊಂದನ್ನ ಪ್ರೋಮೋ ಮೂಲಕ ಬಿಟ್ಟಿದ್ದು, ಇಲ್ಲಿ ನಗಿಸ್ತಾರೆ ನಗಬಾರದು ಅಂತ ಹೇಳುವ ಮೂಲಕ ಕಾರ್ಯಕ್ರಮದ ಬಗ್ಗೆ ಜನರಿಗಿರುವ ಕುತೂಹಲವನ್ನ ಮತ್ತಷ್ಟು ಜಾಸ್ತಿ ಮಾಡಿದ್ದಾರೆ.

ಜಾಹೀರಾತುಗಳು

ಶೋನ ಹೆಸರೇ ಹೇಳುವಂತೆ ಇಲ್ಲಿ ನಗುವಿನ ಲೀಗ್‌ ಮ್ಯಾಚ್‌ ನಡೆಯಲ್ಲಿದ್ದು ಇಲ್ಲಿ ಟೀ ಟ್ವಂಟಿ ಮ್ಯಾಚುಗಳಲ್ಲಿ ಇರುವಂತೆ ತಂಡಗಳು ,ಮಾಲೀಕರು,ಕ್ಯಾಪ್ಟನ್‌ಗಳು ಇದ್ದು ಕ್ರಿಕೇಟಿಗರನ್ನ ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಳ್ಳುವಂತೆ ಇಲ್ಲೂ ಕೂಡ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ಕಲಾವಿದರನ್ನ ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುವ ಕೆಲಸ ನಡೆಯಲಿದ್ದು, ಇಲ್ಲಿ ಐದು ತಂಡಗಳು ಒಂದು ಟ್ರೋಫಿಗಾಗಿ ಹಣಾಹಣಿ ನಡೆಸಲಿದೆ.

ಕಾರ್ಯಕ್ರಮದ ಬಗ್ಗೆ ಸಣ್ಣ ಸುಳಿವೊಂದನ್ನ ಬಿಟ್ಟುಕೊಟ್ಟಿರುವ ಜೀ಼ ಕನ್ನಡ ವಾಹಿನಿಯ ಪ್ರಕಾರ, ಈ ಶೋನಲ್ಲಿ ತಂಡವಾಗಿ ಪ್ರರ್ದಶನ ನೀಡುವ ಕಲಾವಿದರಿಗೆ ವೀಕೆಂಡಿನಲ್ಲಿ ಅವರ ಪ್ರರ್ದಶನ ಆಧಾರದ ಮೇಲೆ ಪ್ರತಿವಾರ ಒಂದು ಲಕ್ಷಮೌಲ್ಯದ ನಗದು ಬಹುಮಾನವನ್ನ ಗೆಲ್ಲುವ ಅವಕಾಶವನ್ನ ಈ ಕಾರ್ಯಕ್ರಮದಲ್ಲಿ ನೀಡಲಾಗಿದ್ದು ಇದು ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್ನ ವಿಶೇಷತೆಗಳಲ್ಲಿ ಒಂದಾಗಿದೆ.

ಪಂಚ ಪಾಂಡವರಂತೆ ಇರುವ ಐದು ನಿರೂಪಕರು ಇಲ್ಲಿ ಹೊಸ ಜವಾಬ್ದಾರಿಯನ್ನ ಹೊತ್ತಿರುವ ಕಾರಣ ಹೊಸ ನಿರೂಪಕರನ್ನ ಈ ಕಾರ್ಯಕ್ರಮದ ಮೂಲಕ ಜೀ಼ಕನ್ನಡ ವಾಹಿನಿ ತೆರೆಗೆ ತರುವ ಪ್ರಯತ್ನ ಮಾಡಲಿದ್ದು, ಯಾರು ಆ ಹೊಸ ನಿರೂಪಕರು ಎಂಬ ಪ್ರಶ್ನಗೆ ಉತ್ತರವನ್ನ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9.00ಕ್ಕೆ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್ನ ಮೊದಲ ಸಂಚಿಕೆ ನೀಡಲಿದೆ.

Recent Posts

ಜೀ ಕನ್ನಡದಲ್ಲಿ ‘ಬ್ರಹ್ಮಗಂಟು’ ಇದೇ ಜೂನ್ 17 ರಿಂದ ರಾತ್ರಿ 10 ಗಂಟೆಗೆ! ಋಣಕೂ ಗುಣಕೂ ಅಂದದ ನಂಟು!

ಧಾರಾವಾಹಿ ಬ್ರಹ್ಮಗಂಟು - ಜೀ ಕನ್ನಡ ಚಾನೆಲ್ ಹೊಸತನಕ್ಕೆ ಇನ್ನೊಂದು ಹೆಸರು ಜೀ಼ ಕನ್ನಡ. ಈಗ ತನ್ನ ವೀಕ್ಷಕರಿಗಾಗಿ ಹೊಸ…

6 hours ago

ಬರ್ತಿದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ “ಯುವ” ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶ… ಇದೇ ಭಾನುವಾರ ರಾತ್ರಿ 7 ಗಂಟೆಗೆ

ಸ್ಟಾರ್ ಸುವರ್ಣ - ಯುವ ಕನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ…

1 day ago

ದುಷ್ಟ ಶಕ್ತಿಗಳ ಸಂಹಾರದ ಪಯಣದಲ್ಲಿ ಬಾಲ್ಯದಿಂದ ತಾರುಣ್ಯದ ಕಡೆಗೆ ರೇಣುಕಾ-ಯಲ್ಲಮ್ಮ….ಇದೇ ಸೋಮವಾರದಿಂದ ರಾತ್ರಿ 8.30 ಕ್ಕೆ..!

ಸ್ಟಾರ್ ಸುವರ್ಣ - ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ,…

3 weeks ago

ಬರ್ತಿದೆ ಬ್ರ್ಯಾಂಡ್ ನ್ಯೂ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’.. ಮೇ 19 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ…!

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಗಳ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ 'Huu ಅಂತೀಯಾ...Uhuu…

1 month ago

ಶೀಮದ್‌ ರಾಮಾಯಣ , ಉದಯ ಟಿವಿಯಲ್ಲಿ ಮೇ 20 ರಿಂದ ಸೋಮವಾರ-ಶನಿವಾರ ಸಂಜೆ 6 ಗಂಟೆಗೆ

ಉದಯ ಟಿವಿ ಶೀಮದ್‌ ರಾಮಾಯಣ ಕನ್ನಡ ಟೆಲಿವಿಷನ್‌ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ…

1 month ago

ಸುವರ್ಣ ಗೃಹಮಂತ್ರಿ ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ

ಸ್ಟಾರ್ ಸುವರ್ಣ - ಸುವರ್ಣ ಗೃಹಮಂತ್ರಿ ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು…

1 month ago