ಅಣ್ಣ- ತಂಗಿ ಧಾರಾವಾಹಿಯಲ್ಲಿ ದೇವಿಯ ರೂಪದಲ್ಲಿ ಅನುಪ್ರಭಾಕರ ಸೋಮವಾರದಿಂದ ಶನಿವಾರ ಸಂಜೆ ೭ಕ್ಕ

ಜಾಹೀರಾತುಗಳು
Anu Prabhakar in Annna Tangi Serial
Anu Prabhakar in Annna Tangi Serial

ನಾಡೆಲ್ಲಾ “ಸರ್ವಂ ಶಕ್ತಿಮಯಂ” ಆಗಿ ಎಲ್ಲರೂ ವೈಭವದಿಂದ, ವಿಜ್ರಂಭಣೆಯಿಂದ ವರ್ಣರಂಜಿತವಾಗಿ ಆಚರಿಸುವ ಹಬ್ಬವೇ ದಸರಾ ಹಬ್ಬ. ನಮ್ಮ ಕರ್ನಾಟಕದಲ್ಲಿ ಮೈಸೂರು ಸಂಸ್ಥಾನದ ಭವ್ಯ ಪರಂಪರೆಯ ವೈಶಿಷ್ಟ್ಯವೂ ಹೊಸೆದುಕೊಂಡಿರುವ ಈ ಹಬ್ಬ ನಮ್ಮ ಕನ್ನಡ ನಾಡಿನ ಹೆಮ್ಮೆಯೂ ಹೌದು ಹೆಗ್ಗಳಿಕೆಯೂ ಹೌದು, ವರ್ಣರಂಜಿತವಾಗಿರುವ ನವರಾತ್ರಿಯ ಈ ವಿಶೇಷ ದಿನಗಳಲ್ಲಿ ದೇವಿಯ ಅನುಗ್ರಹಕ್ಕೆ ಪಾತ್ರರಾಗಲು ದೇವಿಯನ್ನು ಪ್ರತಿದಿನವೂ ಒಂದೊಂದು ಬಣ್ಣದಲ್ಲಿ, ಒಂದೊಂದು ರೂಪದಲ್ಲಿ ಅಲಂಕರಿಸಿ, ಆರಾಧಿಸಿ ಸಾರ್ಥಕತೆಯನ್ನು ಅನುಭವಿಸುವ ಹಬ್ಬವೇ ದಸರಾ ನವರಾತ್ರಿ.

ಈ ಶುಭಸಂದರ್ಭದಲ್ಲಿ ಉದಯ ಟಿವಿಯಲ್ಲಿ ಸಂಜೆ 7.00 ಕ್ಕೆ ಪ್ರಸಾರವಾಗುವ ಅಣ್ಣತಂಗಿ ಧಾರಾವಾಹಿಯ ತಂಡದವರು ಈ ವರ್ಣರಂಜಿತ ನವರಾತ್ರಿ ಹಬ್ಬಕ್ಕೆ ವಿಶೇಷತೆಯ ರೋಚಕ ಪಟ್ಟಿಯನ್ನೇ ಹೊತ್ತು ತರುತ್ತಿದ್ದಾರೆ. ಅಣ್ಣತಂಗಿಯ ಬಾಂಧವ್ಯ ಹಾಗೂ ಭಾವುಕತೆಯ ಹೆಗ್ಗಳಿಕೆಯ ಸುತ್ತ ಹೆಣೆದಿರುವ ಈ ಕೌಟುಂಬಿಕ ಧಾರಾವಾಹಿ ಇತ್ತೀಚೆಗಷ್ಟೇ 600 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿದೆ..ಆತ್ಮೀಯತೆ, ಸ್ನೇಹಸೌರಭದ ಕಥಾಹಂದರದ ಅಣ್ಣತಂಗಿ ಧಾರಾವಾಹಿ ರೋಚಕ ಹಾಗೂ ಅರ್ಥಪೂರ್ಣ ತಿರುವುಗಳೊಂದಿಗೆ ನಿಮ್ಮನ್ನು ರಂಜಿಸುತ್ತಾ ಸಾರ್ಥಕತೆಯನ್ನು ಹೊಂದುತ್ತಿದೆ.

ಈ ಧಾರಾವಾಹಿ ತಂಡದವರು ಈ ನವರಾತ್ರಿ ಹಬ್ಬಕ್ಕೆ ವಿಶೇಷ ಅತಿಥಿಯೊಂದಿಗೆ ವಿಶೇಷ ಸಂಚಿಕೆಯೊಂದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಶ್ರೀಮತಿ ಅನುಪ್ರಭಾಕರ್‌ರವರು ಅಣ್ಣತಂಗಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೇವಿ ಪಾತ್ರದಲ್ಲಿ ಶ್ರೀಮತಿ ಅನುಪ್ರಭಾಕರ್ ರವರು ಅಣ್ಣತಂಗಿಯ ಬದುಕಿನಲ್ಲಿ ಎದುರಿಸುತ್ತಿರುವ ಕತ್ತಲನ್ನು ಹೋಗಲಾಡಿಸಿ ಬೆಳಕು ಚೆಲ್ಲುವ ಚಿಲುಮೆಯಾಗಲಿದ್ದಾರೆ.

ಜಾಹೀರಾತುಗಳು

ಈ ಧಾರಾವಾಹಿಯ ಇತ್ತೀಚಿನ ಸಂಚಿಕೆಗಳಲ್ಲಿ ತುಳಸಿ ತನ್ನ ಮಗುವನ್ನು ಕಳೆದುಕೊಳ್ಳುತ್ತಾಳೆ. ಮನಸ್ಸಿಲ್ಲದ ಮದುವೆಗೆ ಅಣ್ಣ ಕಾಲಿಡುತ್ತಾನೆ. ಹಂತಹಂತದಲ್ಲೂ ದುಷ್ಟರ ದ್ವೇಷಕ್ಕೆ ತುತ್ತಾಗುವ ಇವರ ಜೀವನ ಮುಳ್ಳಿನ ಹಾದಿಯಾಗಿರುತ್ತದೆ. ಆಗ ಮೊರೆಹೊಕ್ಕ ಮನದೊಡತಿ ದೇವಿಯ ಪ್ರವೇಶವಾಗುತ್ತದೆ. ಸಂಕಷ್ಟಗಳಿಗೆ ಪೂರ್ಣವಿರಾಮ ದೊರೆಯುತ್ತದೆಯಾ…? ಚೆಂದದ ಚೆಲುವೆ ಅನುಪ್ರಭಾಕರ್ ದೇವಿಯಾಗಿ ಧಾರಾವಾಹಿಗೆ ಕೊಡುತ್ತಿರುವ ಮೆರುಗಾದರೂ ಏನು… ? ಇವೆಲ್ಲಕ್ಕೂ ಈ ವಿಶೇಷ ಸಂಚಿಕೆಗಳು ಉತ್ತರಿಸಲಿದೆ.

ಅನು ಪ್ರಭಾಕರ್‌ ತಮ್ಮ ಅನಿಸಿಕೆಯನ್ನು ಹಂಚಿಕೊಂಡದ್ದು ಹೀಗೆ – “ನನಗೆ ಬಹಳ ಖುಷಿ ಯಾಗಿದೆ ಈ ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಬರುತ್ತಿರೋದಕ್ಕೆ , ಈ ಧಾರಾವಾಹಿ ಸೆಟ್ ಒಂದು ರೀತಿ ಕುಟುಂಬದಂತೆ ಇತ್ತು”ಕೆ.ಎಮ್ ಚೈತನ್ಯ ಮತ್ತು ಹರಿದಾಸ್ ಈ ಧಾರಾವಾಹಿಯ ನಿರ್ಮಾಪಕರಾಗಿದ್ದು, ಮಧುಸಾಗರ ಅಖಿಲಾ, ಅನ್ವಿತಾ, ಪ್ರಜ್ವಲ್ ಹಾಗೂ ಇನ್ನಿತರ ಅನೇಕ ಪ್ರತಿಭಾನ್ವಿತರ ದಂಡೇ ಧಾರಾವಾಹಿಯಲ್ಲಿದೆ.

ಮನ ಮಿಡಿಯುವಂತಹ ಸನ್ನವೇಶಗಳಲ್ಲಿ ಮೊರೆಹೊಕ್ಕ ಮನದೊಡತಿ ದೇವಿಯ ಪ್ರವೇಶ ಅಣ್-ತಂಗಿ ಧಾರಾವಾಹಿ ಸೋಮವಾರದಿಂದ ಶನಿವಾರ ಸಂಜೆ ೭ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತದೆ.

Leave a Comment