ಕನ್ನಡ ಕಿರುತೆರೆ ಮಾರುಕಟ್ಟೆಯನ್ನು ನಂಬರ್ 1 ಸ್ಥಾನದಲ್ಲಿ ನಿಂತು ಮುನ್ನಡೆಸುತ್ತಿರುವ ಮನರಂಜನಾ ವಾಹಿನಿ ಜೀ ಕನ್ನಡ . ತಮ್ಮ ವಿಶೇಷ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಬದುಕಿಗೆ ಹತ್ತಿರವಾಗಿರುವ ವಾಹಿನಿ ಹಲವಾರು ಮೈಲಿಗಲ್ಲುಗಳನ್ನು ದಾಟಿ ದಾಖಲೆಗಳನ್ನು ನಿರ್ಮಿಸುತ್ತಲೇ ಇರುವುದು ಈಗ ಇತಿಹಾಸ .
ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಚಂದನವನದ ಪುಟ್ಮಲ್ಲಿ ಹಿರಿಯ ನಟಿ ಉಮಾಶ್ರೀ ಅವರನ್ನು ಕಿರುತೆರೆಗೆ ಕರೆತಂದ ಹೆಗ್ಗಳಿಕೆ ಹೊಂದಿರುವ ವಾಹಿನಿ ಈ ಧಾರಾವಾಹಿಯ ಮೊದಲ ಸಂಚಿಕೆಯಿಂದ ಈವರೆಗೂ ಕಥಾ ನಿರೂಪಣಾ ಶೈಲಿಯಲ್ಲಿ ಹಿಡಿತ ಸಾಧಿಸಿ ಜನ ಮೆಚ್ಚುಗೆ ಸಂಪಾದಿಸಿರುವುದಕ್ಕೆ ಸಾಕ್ಷಿಯಾಗಿದೆ ಪ್ರತೀವಾರದ ರೇಟಿಂಗ್ . ಪ್ರತಿದಿನ ರಾತ್ರಿ 7.30 ಕ್ಕೆ ಪ್ರಸಾರವಾಗುವ ಈ ಪುಟ್ಟಕ್ಕನ ಮಕ್ಕಳು ಮನರಂಜನೆಯ ಜೊತೆ ಉತ್ತಮ ಸಂದೇಶ ಕೊಡುತ್ತಿದೆ.
ಅಷ್ಟೇ ಅಲ್ಲದೆ ಆರಂಭದಿಂದ ಇಲ್ಲಿಯವರೆಗೂ ಕನ್ನಡ ಮನರಂಜನಾ ಮಾರುಕಟ್ಟೆಯಲ್ಲಿ ಗರಿಷ್ಠ ರೇಟಿಂಗ್ ಗಳಿಸುವುದರ ಮೂಲಕ ನಂಬರ್ ಧಾರಾವಾಹಿಯಾಗಿ ಮುಂದುವರೆಯುತ್ತಿದೆ. ಇದೀಗ , ಈ ಜನಪ್ರಿಯ ಧಾರಾವಾಹಿ ರೋಚಕ ಘಟ್ಟವನ್ನ ತಲುಪಿದ್ದು ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಕಂಠಿ – ಸ್ನೇಹಾ ಜೋಡಿಯ ಮದುವೆ ಮುರಿದು ಬಿದ್ದಿದ್ದು ವೀಕ್ಷಕರಿಗೆ ಮುಂದಿನ ಕಥೆಯ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ .
ಈ ಧಾರಾವಾಹಿ ಸ್ತ್ರೀಶಕ್ತಿಯ ಪ್ರತಿನಿಧಿಸುತ್ತಿರುವುದು ಇದರ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಪುಟ್ಟಕ್ಕ ಒಂಟಿ ಪೋಷಕಿಯಾಗಿ ಎಲ್ಲಾ ಅಡೆತಡೆಗಳನ್ನು ದಾಟಿ ಮೂವರು ಹೆಣ್ಣು ಮಕ್ಕಳನ್ನು ಇಡೀ ಜಗತ್ತೆ ಹೆಮ್ಮೆ ಪಡುವಂತೆ ಬೆಳೆಸುತ್ತಿರುವುದು ಸ್ತ್ರೀ ಕುಲಕ್ಕೆ ಆದರ್ಶವಾಗಿದೆ .
ಒಬ್ಬ ಧೈರ್ಯಶಾಲಿ ಮನೆಮಗಳಾಗಿ ನಾಯಕಿ ಸ್ನೇಹ , ಇಡೀ ಊರನ್ನೇ ನಡುಗಿಸೋ ಶೂರನಾಗಿ ನಾಯಕ ಕಂಠಿ ತಮ್ಮ ಮುದ್ದಾದ ಅಭಿನಯದ ಮೂಲಕ ಇಡೀ ಕರ್ನಾಟಕದ ಮನೆಮಾತಾಗಿದ್ದಾರೆ .
ಈ ಧಾರಾವಾಹಿಯ ಮುದ್ದಾದ ಜೋಡಿಸ್ನೇಹಾ ಮತ್ತು ಕಂಠಿ ಪ್ರೇಮ ಕತೆಯಲ್ಲಿ ತಿರುವುಗಳನ್ನು ನೀಡುತ್ತಾ ಮದುವೆ ಮುರಿಯುವ ಹಂತದವರೆಗೂ ಕುತೂಹಲಗಳನ್ನು ಕಾಯ್ದಿರಿಸಿಕೊಂಡು ಬಂದಿರುವ ತಂಡ ಮುಂದೇನು ಎನ್ನುವ ವೀಕ್ಷಕರ ಪ್ರಶ್ನೆಗೆ , ಕುತೂಹಲಕ್ಕೆ ಉತ್ತರ ಕೊಡಲು ಸಜ್ಜಾಗಿದೆ.