ಕಿರುತೆರೆಯಲ್ಲು ಸ್ಟಾರ್‍ಗಳನ್ನು ಹುಟ್ಟುಹಾಕಬಹುದು ಎಂದು ತೋರಿಸಿಕೊಟ್ಟ ಕರುನಾಡಿನ ಹೆಮ್ಮೆಯ ವಾಹಿನಿ ಝೀ ಕನ್ನಡ ಈಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ,ಸದಾ ತಾನು ತರುವ ಸದಾಬಿರುಚಿಯ ಕಾರ್ಯಕ್ರಮಗಳ ಮುಖಾಂತರ ಕನ್ನಡಿಗರನ್ನ ಸತತ 17 ವರ್ಷಗಳಿಂದ ಮನೋರಂಜಿಸುತ್ತ ಬಂದಿರುವ ಝೀ ಕನ್ನಡ ವಾಹಿನಿಯ ಮತ್ತೊಂದು ಹೊಚ್ಚ ಹೊಸ ರಿಯಾಲಿಟಿ ಶೋ ಈಗ ಕನ್ನಡಿಗರ ಮುಂದೆ ಬರಲು ಸಕಲ ತಯಾರಿಯೊಂದಿಗೆ ಸಿದ್ದವಾಗಿದೆ.
ಮದುವೆ ವಯಸ್ಸಿಗೆ ಬಂದಿರುವ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿÀ ಎದುರಾಗುತ್ತಿರುವ ನಿಜ ತೊಂದರೆಗಳನ್ನ ಆಧಾರವಾಗಿಟ್ಟುಕೊಂಡು ಹಣೆದಿರುವ ಈ ಕಾರ್ಯಕ್ರಮದಲ್ಲಿ, ಕರ್ನಾಟಕದ ಕಿರುತೆರೆಯ ಆಯ್ದ ಬ್ಯಾಚುಲರ್ಸ್‍ಗಳನ್ನ ಒಂದೆಡೆ ಸೇರಿಸಿ ಅವರನ್ನ ಬ್ಯಾಚುಲರ್ ಲೈಫಿನಿಂದ ಮದುವೆಗೆ ಎಲಿಜಿಬಲ್ ಮಾಡುವ ಪ್ರಯತ್ನದ ಈ ಹೊಸ ರಿಯಾಲಿಟಿ ಶೋನೆ””ಭರ್ಜರಿ ಬ್ಯಾಚುಲರ್ಸ್” ಹತ್ತು ಎಲಿಜಿಬಲ್ ಬ್ಯಾಚುಲರ್ಸ್‍ಗಳ ಕನಸುಗಳನ್ನ ನಿಜರೂಪಕ್ಕೆ ತರುತ್ತಾ ಅವರ ಆಸೆಗಳ ಅಖಾಡದಲ್ಲಿ ಅವರ ಗಟ್ಟಿತನವನ್ನ ಕರುನಾಡಿಗೆ ತೋರಿಸುತ್ತಾ ಒಬ್ಬ ಬ್ಯಾಚುಲರ್ ಮದುವೆಗೆ ಎಲಿಜಿಬಲ್ ಆಗಲು ಏನೆಲ್ಲ ಮಾಡಬೇಕು ಅನ್ನೋದನ್ನ ಕರುನಾಡಿಗೆ ಸಾರುವÀ ಈ ರಿಯಾಲಿಟಿ ಶೋನ ನಿರೂಪಣ ಜವಾಬ್ದಾರಿಯನ್ನ ಹೊತ್ತಿರೋದು ಕೂಲ್ ಕೂಲ್ ಅಕುಲ್ ಬಾಲಾಜಿ,ವಿಭಿನ್ನ ಮ್ಯಾನರೀಸಂ ಜೊತೆ ಸಖತ್ ಮಾತುಗಳ ಮೂಲಕ ಮನೋರಂಜನೆ ನೀಡೋಕೆ ರೆಡಿಯಾಗಿರುವ ಅಕುಲ್ ಬಾಲಾಜಿ ಬಹಳ ದಿನಗಳ ನಂತರ ಮತ್ತೆ ಝೀ ಕನ್ನಡಕ್ಕೆ ವಾಪಸ್ಸಾಗುತ್ತಿರೋದು ಮತ್ತೊಂದು ಹೈಲೈಟ್.
ಕರ್ನಾಟಕಕ್ಕೆ ಪ್ರೇಮ ಪಾಠ ಹೇಳಿಕೊಟ್ಟ,ಟೀನೇಜರ್ಸ್‍ಗಳಿಗಾಗೆ ಪ್ರೇಮಲೋಕ ಸೃಷ್ಟಿಸಿದ ಕರುನಾಡಿನ ರಣಧೀರ ಕ್ರೇಜಿ ಸ್ಟಾರ್ ರವಿಚಂದ್ರನ್ ಈ ಶೋನಲ್ಲಿ ಲವ್ ಗುರು ಆಗಿ ಪಡ್ಡೆ ಹುಡುಗರನ್ನ ತಿದ್ದಿತೀಡುವ ಕೆಲಸ ಮಾಡಿದ್ರೆ,ಡಿಂಪಲ್ ಕ್ವೀನ್ ರಚಿತಾರಾಮ್ ಬ್ಯಾಚುಲರ್ಸ್ ಪಾಲಿನ ಡ್ರೀಮ್ ಗರ್ಲ್ ಆಗಿ ಕಾಣಿಸಿಕೊಳ್ಳುವ ಮುಖಾಂತರ ತೀರ್ಪುಗಾರರು ಖುರ್ಚಿಯ ಗತ್ತನ್ನ ಹೆಚ್ಚುಮಾಡಿದ್ದಾರೆ. ಹತ್ತು ಬ್ಯಾಚುಲರ್ಸ್ಗಳ ಇಷ್ಟ ಕಷ್ಟಗಳ ನಡುವೆ ಹಣೆದಿರುವ ಈ ರಿಯಾಲಿಟಿ ಶೋಗೆ ರಾಗ ಸಂಯೋಜನೆ ಮಾಡಿರೋದು ಕರುನಾಡಿನ ರಾಕ್ ಸ್ಟಾರ್ ಚಂದನ್ ಶೆಟ್ಟಿ.ಟೀನೇಜ್ ಹುಡುಗರ ಪಲ್ಸ್ ರೇಟ್£ ಯಾವಾಗಲು ಜಾಸ್ತಿ ಮಾಡೋ ಹಾಡುಗಳನ್ನ ಕೊಟ್ಟು ಕನ್ನಡಿಗರ ಸದಾ ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಚಂದನ್ ಶೆಟ್ಟಿಯವರ ರಾಗ ಸಂಯೋಜನೆಗೆ ಹಳೆಬೇವರ್ಸೀ ಸಾಂಗ್ ಖ್ಯಾತಿಯ ರಾಕೇಶ್ ಸಿ.ಏ ಸಾಹಿತ್ಯದ ಈ ಸಾಂಗಿನಲ್ಲಿ ಬ್ಯಾಚುಲರ್ಸ್‍ಗಳ ಆಸೆ,ಕನಸುಇಷ್ಟ,ಕಷ್ಟ,ತುಮುಲ ಮತ್ತು ತೊಳಲಾಟ ಎಲ್ಲವು ಎದ್ದು ಕಾಣುತ್ತದೆ,ಈಗಾಗಲೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಮಾಡಿರುವ ಈ ಟೈಟಲ್ ಸಾಂಗಿಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿರೋ ನಮ್ಮ ಬ್ಯಾಚುಲರ್ಸ್‍ಗಳ ಬಯೋ ಡಾಟ ಹಿನ್ನೇನು ಕನ್ನಡಿಗರ ಮುಂದೆ ಇದೇ ಜೂನ್ 24 ಶನಿವಾರ ರಾತ್ರಿ 9.00ಕ್ಕೆ ಝೀ ಕನ್ನಡ ವಾಹಿನಿಯ ಮುಖಾಂತರ ನಿಮ್ಮ ಮನೆಗೆ ಬರಲಿದೆ.
ವೀಕೆಂಡ್ ಅಂದ್ರೆ ಝೀ ಕನ್ನಡ ಅನ್ನುವ ಹಾಗೆ ಮಾಡಿರುವ ಕರುನಾಡಿನ ಜನತೆಯ ಮುಂದೆ ಮತ್ತೊಂದು ರಿಯಾಲಿಟಿ ಶೋನ ತರುವ ಪ್ರಯತ್ನ ನಮ್ಮದು,ಸತತ 4 ವರ್ಷಗಳಿಂದ ನಮ್ಮನ್ನ ನಂ.1 ಸ್ಥಾನದಲ್ಲಿ ಇಟ್ಟಿರುವ ನಿಮ್ಮಗಳ ಮುಂದೆ ವೀಕೆಂಡ್ ವಿತ್ ರಮೇಶ ಸೀಸನ್ 4ರ ಅಭೂತಪೂರ್ವ ಯಶಸ್ಸಿನ ಬಳಿಕ ಮತ್ತೊಂದು ಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್‍ನ ನಿಮ್ಮ ಮುಂದೆ ತರೋ ತಯಾರಿ ಮಾಡಿದ್ದೇವೆ.ಸಮಾಜದಲ್ಲಿ ಬ್ಯಾಚುಲರ್ಸ್‍ಗಳು ಅನುಭವಿಸೋ ತೊಂದರೆಗಳನ್ನ ಆಧಾರವಾಗಿ ಇಟ್ಟುಕೊಂಡು ಅದಕ್ಕೆ ಒಂದಿಷ್ಟು ಮನೋರಂಜನೆ ಸೇರಿಸುತ್ತಾ ಬ್ಯಾಚುಲರ್ಸ್‍ಗಳ ಸಮಸ್ಯೆಗಳನ್ನ ನಿಮ್ಮ ಮುಂದೆ ಇಡೋ ಪ್ರಯತ್ನವೇ ಈ ಭರ್ಜರಿ ಬ್ಯಾಚುರಲ್ಸ್. ಸದಾ ಹೊಸತನಕ್ಕೆ ತಮ್ಮ ಬೆಂಬಲ ಸೂಚಿಸೋ ಕರುನಾಡು ಝೀ ವಾಹಿನಿಯ ಭರ್ಜರಿ ಬ್ಯಾಚುಲರ್ಸ್‍ಗಳನ್ನು ಕೂಡ ಭರ್ಜರಿ ಗೆಲುವು ಕೊಡಿಸುತ್ತಾರೆ ಅನ್ನೋದು ಈ ಬ್ಯಾಚುಲರ್ಸ್ ಟೀಂನ ನಂಬಿಕೆ.