ಸುವರ್ಣ ಸೂಪರ್ ಸ್ಟಾರ್ – 800 ಸಂಚಿಕೆಗಳ ಸಂಭ್ರಮದಲ್ಲಿ ಜನಪ್ರಿಯ ರಿಯಾಲಿಟಿ ಶೋ “ಸುವರ್ಣ ಸೂಪರ್ ಸ್ಟಾರ್”..!

ಜಾಹೀರಾತುಗಳು
Super Star 800 Episodes
Super Star 800 Episodes

ಕನ್ನಡದ ಜನಪ್ರಿಯ ಮನರಂಜನಾ ವಾಹಿನಿ ‘ಸ್ಟಾರ್ ಸುವರ್ಣ’ದಲ್ಲಿ ಮೂಡಿ ಬರುತ್ತಿರುವ ಮಹಿಳೆಯರ ಅಚ್ಚು ಮೆಚ್ಚಿನ ರಿಯಾಲಿಟಿ ಶೋ “ಸುವರ್ಣ ಸೂಪರ್ ಸ್ಟಾರ್” ಗೆ ಇದೀಗ 800 ಸಂಚಿಕೆಗಳ ಸಂಭ್ರಮ. ಕರ್ನಾಟಕದ ಮೂಲೆ ಮೂಲೆಯ ಮಹಿಳೆಯರ ಬದುಕನ್ನು ಸಂಭ್ರಮಿಸಲು ಶುರುವಾದ ಮಹಾವೇದಿಕೆ “ಸುವರ್ಣ ಸೂಪರ್ ಸ್ಟಾರ್”. ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದು ಖ್ಯಾತ ನಟಿ, ನಿರೂಪಕಿ ಶಾಲಿನಿ. ವರ್ಷಗಳ ಬಳಿಕ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿ ಮೂಲಕ ಶಾಲಿನಿ ಅವರು ಸುವರ್ಣ ಸೂಪರ್ ಸ್ಟಾರ್ ನಲ್ಲಿ ಕಾಣಿಸಿಕೊಂಡಾಗ ಪ್ರೇಕ್ಷಕರು ಖುಷಿ ಪಟ್ಟಿದ್ದರು.

ಇನ್ನು ಕಾರ್ಯಕ್ರಮದ ಮತ್ತೊಂದು ಜನಪ್ರಿಯ ಆಕರ್ಷಣೆ ಪ್ರತಿ ದಿನವೂ ಶಾಲಿನಿ ಧರಿಸುವ ವಿಶಿಷ್ಟವಾಗಿ ವಿಭಿನ್ನವಾಗಿ ಡಿಸೈನ್ ಮಾಡಿದ ಬ್ಲೌಸ್ ಗಳು, ಇದಕ್ಕೆ ಅಭಿಮಾನಿ ವರ್ಗವಿದೆ. ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಿಯಾಲಿಟಿ ಶೋವೊಂದು ನಿರಂತರವಾಗಿ ಪ್ರೇಕ್ಷಕರನ್ನು ರಂಜಿಸುತ್ತಾ 800 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿರುವುದು.

ಮಹಿಳೆಯರಿಗಾಗಿ ಮಾತ್ರ ಸೃಷ್ಟಿಸಿದ ಮಹಾವೇದಿಕೆ ‘ಸುವರ್ಣ ಸೂಪರ್ ಸ್ಟಾರ್’ ಗೆ 2400ಕ್ಕೂ ಹೆಚ್ಚು ಮಹಿಳೆಯರು ಆಗಮಿಸಿದ್ದಾರೆ. ಯಾವುದೇ ಪ್ರತಿಭೆಗೆ ಮಾತ್ರ ವೇದಿಕೆಯಾಗದೆ, ಪ್ರತಿ ಮನೆಯ ಸಾಮಾನ್ಯ ಹೆಣ್ಣು ಮಕ್ಕಳ ಅಸಾಮಾನ್ಯ ಶಕ್ತಿಯನ್ನ ಕರ್ನಾಟಕಕ್ಕೆ ಪರಿಚಯಿಸುವ ಮಹಾವೇದಿಕೆ ಸುವರ್ಣ ಸೂಪರ್ ಸ್ಟಾರ್. ಈ ವೇದಿಕೆಯಲ್ಲಿ ಪ್ರತಿ ಹೆಣ್ಣನ್ನು ಸೂಪರ್ ಸ್ಟಾರ್ ಎಂದು ಮೆರೆಸುತ್ತ, ಅವರ ಬದುಕಿನ ಕಥೆಗಳನ್ನ ಹಂಚಿಕೊಂಡು, ತಮ್ಮಲ್ಲಿರುವ ನೋವು ನಲಿವುಗಳನ್ನು ಹಂಚಿಕೊಂಡು ತಮ್ಮ ಬದುಕನ್ನ ಸಂಭ್ರಮಿಸಿದ್ದಾರೆ.

ಜಾಹೀರಾತುಗಳು

ಇದರ ಜೊತೆಗೆ ಬರುವ ಎಲ್ಲ ಸೂಪರ್ ಸ್ಟಾರ್ ಗಳಿಗೆ ವಿಶೇಷವಾಗಿ LED ಟಿವಿ, ವಾಷಿಂಗ್ ಮಷೀನ್, ಫ್ರಿಡ್ಜ್, ಓವೆನ್, ಮಿಕ್ಸರ್ ಗ್ರೈಂಡರ್, ರೇಷ್ಮೆ ಸೀರೆ ಹೀಗೆ ಎಲ್ಲ ಗೃಹೋಪಯೋಗಿ ವಸ್ತುಗಳನ್ನ ಬಹುಮಾನವಾಗಿ ನೀಡುವುದರ ಜೊತೆಗೆ ಸೂಪರ್ ಮಾರ್ಕೆಟನ್ನೇ ಲೂಟಿ ಮಾಡಲು ಬಿಡುವುದು ಕಾರ್ಯಕ್ರಮದ ವೈಶಿಷ್ಟ್ಯ. ಸುವರ್ಣ ಸೂಪರ್ ಸ್ಟಾರ್ ನಲ್ಲಿ ಭಾಗವಹಿಸುವುದೇ ಹೆಮ್ಮೆ ಹಿರಿಮೆ ಹೆಗ್ಗಳಿಕೆ ಎಂಬುದು ಪ್ರತಿ ಹೆಣ್ಣು ಮಕ್ಕಳ ಆಸೆ ಆಶಯ. ಕರ್ನಾಟಕದಿಂದಷ್ಟೇ ಅಲ್ಲದೆ ಹೊರ ರಾಜ್ಯಗಳಿಂದ, ಅಮೇರಿಕಾ ಹಾಗು ಆಸ್ಟ್ರೇಲಿಯಾದಿಂದ ಕೂಡ ಸೂಪರ್ ಸ್ಟಾರ್ ಗಳು ಆಗಮಿಸಿರುವುದು ಸುವರ್ಣ ಸೂಪರ್ ಸ್ಟಾರ್ ಖ್ಯಾತಿಗೆ ಸಾಕ್ಷಿ.

ಜೊತೆಗೆ ಕಿರುತೆರೆ ಕಲಾವಿದರು, ಬೆಳ್ಳಿತೆರೆ ಕಲಾವಿದರು ಆಗಮಿಸಿ ವೇದಿಕೆಯಲ್ಲಿ ಮನರಂಜಿಸಿದ್ದಾರೆ. ಎಷ್ಟೋ ಮಹಿಳೆಯರ ಕಷ್ಟಕ್ಕೆ ಈ ವೇದಿಕೆ ಸ್ಪಂದಿಸಿ, ಅವರಿಗೆ ಸಹಾಯ ಮಾಡಿ ನೊಂದಿರುವ ಜೀವಕ್ಕೆ ಹೆಗಲಾಗಿದೆ. ‘ಸ್ಟಾರ್ ಸುವರ್ಣ’ ವಾಹಿನಿಯ ಕೀರ್ತಿ ಪತಾಕೆಯನ್ನು ಇನ್ನಷ್ಟು ಎತ್ತರಕ್ಕೆ ಹಾರಿಸಿದೆ “ಸುವರ್ಣ ಸೂಪರ್ ಸ್ಟಾರ್” .800 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಲು ಕಾರಣಕರ್ತರಾದ ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ತಪ್ಪದೇ ವೀಕ್ಷಸಿ “ಸುವರ್ಣ ಸೂಪರ್ ಸ್ಟಾರ್” ಸಂಜೆ 5 ಗಂಟೆಗೆ ನಿಮ್ಮ ನೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ.

Leave a Comment