ಮಹರ್ಷಿ ವಾಣಿ ಇದು 9 ವರ್ಷಗಳನ್ನು ಆಚರಿಸುತ್ತಿದೆ – ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ 8 ರಿಂದ 9.30

ಜಾಹೀರಾತುಗಳು
Maharshi Vaani Show on Zee Kannada
Maharshi Vaani Show on Zee Kannada

ನಿರಂತರವಾಗಿ ಕಾಡುವ ನೋವುಗಳಿಗೆ ಒಂದಿಷ್ಟು ಸಾಂತ್ವನ, ನಂಬಿಕೆ , ದೃಢ ಸಂಕಲ್ಪ, ಕಷ್ಟಗಳನ್ನು ಸಹಿಸುವ ಮನಸ್ಸಿಗೆ ಭರವಸೆಯ ಹಾದಿಯಾದ ಮಹರ್ಷಿವಾಣಿಗೆ 9 ವರ್ಷದ ಸಾರ್ಥಕ ಹೆಜ್ಜೆ. ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ 8 ರಿಂದ 9.3೦ ರ ವರೆಗೆ ಪ್ರಸಾರವಾಗುವ ಮಹರ್ಷಿವಾಣೀ ನೊಂದವರ ನೋವಿಗೆ ಧ್ವನಿಯಾಗಿ , ನಮ್ಮ ಆಚಾರ , ವಿಚಾರಗಳ ಪ್ರತಿಧ್ವನಿಯಾಗಿದೆ.

ಪರಿಸರದಲ್ಲಿ ಸಿಗುವ ಸುಲಭ ಪದಾರ್ಥಗಳ ಮುಖಾಂತರ ವಿಶೇಷ ತಂತ್ರಸಾರ, ಪೂಜಾ ವಿಧಾನ.ಸಮಸ್ಯೆಗಳ ನಿರ್ವಹಣೆಗೆ ಬೇಕಾದ ಮನೋಧೈರ್ಯ ಸನಾತನ ಧರ್ಮದ ತಳಹದಿಯ ಮೇಲೆ ಆಚಾರ , ವಿಚಾರಗಳ ಮೂಲಕ ಪ್ರತಿ ನಿತ್ಯ ಸಂಸ್ಕಾರದ , ಅರಿವಿನ ಪಾಠ.

ಜಾತಕ ,ಗ್ರಹಗಳ ದೋಷಗಳ ಭಯವನ್ನ,,,, ಬದಿಗಿಟ್ಟು ದೃಢ ಸಂಕಲ್ಪ ಮತ್ತು ಮನೋಧೈರ್ಯದಿಂದ ಬದುಕಿನ ಸವಾಲುಗಳನ್ನು ಎದುರಿಸಬೇಕೆಂಬುದು ಮಹರ್ಷಿಯ ಮಹಾಮಂತ್ರ.ಮಹರ್ಷಿ ಯ ಈ ಸುದೀರ್ಘ ಹಾದಿಗೆ ಜೊತೆಯಲ್ಲಿ ಸಾಗಿ ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಸಾಗುತ್ತಾ ಗುರೂಜಿಯವರ ಶ್ರಮಕ್ಕೆ ಜೊತೆಯಾದವರು ಅವರ ಸುಪುತ್ರ ಶ್ರೀನಿವಾಸ್‌ ಶರ್ಮ.

ಶ್ರೀನಿವಾಸ್‌ ಶರ್ಮರವರು ಪ್ರಾರಂಭಿಸಿದ ಮನೋಗತ ಪ್ರಶ್ನಾತಂತ್ರ ಕ್ಕೆ ಒಂದೂ ವರೆ ವರ್ಷದ ಯಶಸ್ಸಿನ ಹಾದಿ.ತಂದೆಯವರು ಹಾಕಿ ಕೊಟ್ಟ ಮಾರ್ಗದಲ್ಲಿ ಶ್ರೀನಿವಾಸ್‌ ಶರ್ಮ ಕಷ್ಟಗಳನ್ನು ಪರಿಹರಿಸುವ ಕಾಯಕದಲ್ಲಿ ಸದಾ ಪರಿಶ್ರಮ ಪಡುತ್ತಾ ಬಂದಿದ್ದಾರೆ. ಪ್ರತಿ ಭಾನುವಾರದ ಮಹರ್ಷಿವಾಣಿ ಕಾರ್ಯಕ್ರದಲ್ಲಿ ವಿಭಿನ್ನವಾದ , ಸರಳವಾದ ತಂತ್ರಸಾರಗಳ ಮೂಲಕ ಸಾರ್ವತ್ರಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ.
ಉತ್ತರ ವನಸಿರಿಯ ಮೂಲಕ ಜನರ ಸಮಸ್ಯೆಗಳಿಗೆ ಸರಳ ಪರಿಹಾರ ಮಾರ್ಗ.

ವೀಕ್ಷಕರು ಮತ್ತು ಗುರೂಜಿಯವರ ಬಾಂಧವ್ಯ ನೇರ ಪ್ರಸಾರಕ್ಕೆ ಮಾತ್ರ ಸೀಮಿತವಾಗದೆ ನಾಡಿನೆಲ್ಲೆಡೆ ಮೂಲೆ ಮೂಲೆಗೂ ಮಹರ್ಷಿಯಾತ್ರೆ ನಿರಂತರ ಸಾಗುತ್ತಾ ಬಂದಿದೆ. ಒಂಬತ್ತು ವರ್ಷದ ಈ ಹಾದಿಯಲ್ಲಿ ಮೂರು ಸಾವಿರ ಸಂಚಿಕೆಗಳು,ನಾಡಿನ ಉದ್ದಗಲಕ್ಕೂ ಸಾಗಿದ ಮಹರ್ಷಿಯಾತ್ರೆಯ ಎಂಟು ನೂರು ಸಾರ್ವಜನಿಕ ಕಾರ್ಯಕ್ರಮಗಳು.ನಾಡಿನ ಗಡಿ ದಾಟಿ ಉತ್ತರ ಭಾರತದ ಪ್ರಸಿದ್ದ ಕ್ಷೇತ್ರಗಳ ದರ್ಶನ. ಬೆಂಗಳೂರಿನಿಂದ ಮೂರು ಸಾವಿರ ಕಿಲೋ ಮೀಟರ್‌ ದೂರ ಸಾಗಿ ಉತ್ತರಖಂಡ್‌ ನ ತುಂಗನಾಥ್‌ , ಹರಿದ್ವಾರ್‌ ಕ್ಷೇತರ್ಗಳಲ್ಲಿ ವಿಶೇಷ ಪೂಜೆ.ಮಹಾರಾಷ್ಟ್ರದ ಪ್ರಸಿದ್ದ ಕ್ಷೇತ್ರವಾದ ಕೊಲ್ಹಾಪುರ್‌ ನ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ವಿಶೇಷ ಅನುಷ್ಟಾನ , ಪ್ರಾರ್ಥನೆ.

ಜಾಹೀರಾತುಗಳು

ಗುರುಬಲಕ್ಕಾಗಿ ಗುರು ಪ್ರಾರ್ಥನೆ,. ಮಹಾರಾಷ್ಟ್ರದ ಶಿರಡಿ ಸಾಯಿಬಾಬಾರ ಪುಣ್ಯಕ್ಷೇತ್ರ ದರ್ಶನಮಾಡಿಸಿದ್ದು ಒಂಬತ್ತು ವರ್ಷದ ಹಾದಯಲ್ಲಿ ಮಹತ್ವದ ಮೈಲಿಗಲ್ಲು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನಿರಂತರ ಸಾರ್ವಜನಿಕ ಕಾರ್ಯಕ್ರಮಗಳು ಅಪಾರ ಜನಸ್ತೋಮದ ನಡುವೆ ಮಹರ್ಷಿಯಾತ್ರೆ.ಕರಾವಳಿ, ಮಲೆನಾಡಿನ ಭಾಗದ ಸುಪ್ರಸಿದ್ದ ಕ್ಷೇತ್ರಗಳ ದರ್ಶನ. ವೈವಿಧ್ಯಮಯ ದೈವ ಆರಾಧನೆಯ ಮೂಲಕ ನಾಡಿನ ಶಕ್ತಿ ಕೇಂದ್ರಗಳ ಪರಿಚಯ.

ದೇಶದ ಗಡಿ ದಾಟಿ ದೂರದ ದುಬೈನಲ್ಲಿ ನಡೆದ ಕನ್ನಡ ಹಬ್ಬದಲ್ಲಿ ಗುರೂಜಿಯರು ಅತಿಥಿಯಾಗಿ ಭಾಗವಹಿಸಿದ್ದು ಮಹರ್ಷಿವಾಣಿಯ ಒಂಬತ್ತು ವರ್ಷಕ್ಕೆ ಹೆಮ್ಮೆಯ ಗರಿ.ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ, ಕನ್ನಡ ನಾಡು ನುಡಿಯ ವಿಚಾರ ಬಂದಾಗ ಸದಾ ಸಾತ್ವಿಕ ಹೋರಾಟ , ಬೆಂಬಲ ನೀಡುತ್ತ ಬಂದಿರುವ ಗುರೂಜಿ, ಗೋ ಸಂರಕ್ಷಣೆಯ ಬಗ್ಗೆ ವರ್ಷ ಪೂರ್ತಿ ಕಾಳಜಿ ವಹಿಸಿತ್ತಾ ಬಂದಿದ್ದಾರೆ.ದೇಶ ಕಾಯುವ ಯೋಧ , ಅನ್ನ ನೀಡುವ ಅನ್ನದಾತರ ಬಗ್ಗೆಯಂತು ಗುರೂಜಿಯವರದು ನಿತ್ಯ ಪ್ರಾರ್ಥನೆಯಾಗಿದೆ.

ಈ ಒಂಬತ್ತು ವರ್ಷಗಳ ಸುದೀರ್ಘ ಹಾದಿಯಲ್ಲಿ ಜನರಿಗೆ ಸಾಂತ್ವನ ತುಂಬುತ್ತಾ ಭವಿಷ್ಯದ ಬಗ್ಗೆ ಧೈರ್ಯ ತುಂಬುತ್ತಾ ಬಂದಿದ್ದಾರೆ. ಸಾಮನ್ಯರ ನಡುವೆ ಶ್ರೀ ಸಾಮಾನ್ಯರಾಗಿ ಬೆರೆತು ಹೋಗಿದ್ಧಾರೆ. ಸಮಸ್ಯೆಗಳನ್ನು ಎದುರಿಸಿ , ಮನೋಧೈರ್ಯ ತುಂಬಿ, ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಕಟ್ಟುಪಾಡುಗಳ ನಡುವೆ ಜೀವನ ನಡೆಸಬೇಕೆಂಬ ವಿಚಾರ ತುಂಬಿ ಧಾರ್ಮಿಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಒಂಬತ್ತು ವರ್ಷಗಳು ಅನ್ನೋದು ಒಂದು ಮೈಲಿಗಲ್ಲು ಅಷ್ಟೆ. ನಮ್ಮ ಸಂಪ್ರದಾಯ ಆಚಾರ ವಿಚಾರಗಳ ಜೊತೆಗೆ ಬದುಕಿನ ಬಗ್ಗೆ ಭರವಸೆ ತುಂಬೋದು ಮಹರ್ಷಿವಾಣಿಯ ಕರ್ತವ್ಯ.ಒಂಬತ್ತು ವರ್ಷ ಅನ್ನೋದು ಮಹರ್ಷೀವಾಣಿ ಮತ್ತು ವೀಕ್ಷಕ ಮಹಾಪ್ರಭುಗಳ ಅಕ್ಕರೆಯ ಬಾಂಧವ್ಯಕ್ಕೆ ಧನ್ಯವಾದ ಅರ್ಪಿಸುವ ದಿನವಷ್ಟೆ. ಪ್ರತಿ ದಿನ ನಿಮ್ಮ ನೋವುಗಳಿಗೆ ಸ್ಪಂದಿಸಬೇಕಾದ ಮಹತ್ತರ ಹೊಣೆಗಾರಿಕೆ ಮಹರ್ಷಿವಾಣಿಗೆ ಇದೆ. ದಿನ ನಿತ್ಯ ಮನೆ ಮನಗಳಿಗೆ ದೈವಿಕ ಪ್ರೇರಣೇ ತುಂಬುವ ಮಹತ್ವದ ಉದ್ದೇಶವಿದೆ. ಮಹತ್ತಿಗೇರಿದ ಮಹರ್ಷಿವಾಣಿ ಡಾ. ಮಹರ್ಷಿ ಆನಂದ್‌ಗುರೂಜಿಯವರ

Leave a Comment