ಸುವರ್ಣ ಸಂಭ್ರಮ – ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಹಿಟ್ ಕಥೆಗಳ ಇದೇ ಜೂನ್ 4 ರಂದು ಸಂಜೆ 6 ಗಂಟೆಗೆ..!

ಜಾಹೀರಾತುಗಳು

ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಹಿಟ್ ಕಥೆಗಳ “ಸುವರ್ಣ ಸಂಭ್ರಮ” ಇದೇ ಜೂನ್ 4 ರಂದು ಸಂಜೆ 6 ಗಂಟೆಗೆ..!

Suvarna Sambharam
Suvarna Sambharam

ಕನ್ನಡ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಜಾ ನೀಡುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಇದೀಗ ಹಬ್ಬದ ವಾತಾವರಣ ಸೃಷ್ಟಿಯಾಗಲಿದ್ದು, ಒಂದೇ ವೇದಿಕೆಯಲ್ಲಿ ಎರಡು ಸೂಪರ್ ಹಿಟ್ ಧಾರಾವಾಹಿಗಳ ಸಮ್ಮಿಲನವಾಗಲಿದೆ. ವಾಹಿನಿಯ ಜನಪ್ರಿಯ ಧಾರಾವಾಹಿಗಳಾದ ‘ಕಥೆಯೊಂದು ಶುರುವಾಗಿದೆ’ ಹಾಗು ‘ನಮ್ಮ ಲಚ್ಚಿ’ ಧಾರವಾಹಿ ತಂಡದವರು ಒಟ್ಟಾಗಿ ವೀಕ್ಷಕರನ್ನು ರಂಜಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿರೋದು ಖ್ಯಾತ ನಿರೂಪಕಿ ಅನುಪಮ ಗೌಡ.

ಈಗಾಗಲೇ ನೂರಕ್ಕೂ ಅಧಿಕ ಸಂಚಿಕೆಗಳನ್ನು ಪೂರೈಸಿರುವ ಎರಡು ಧಾರಾವಾಹಿಗಳ ಕಲಾವಿದರೆಲ್ಲಾ ಒಂದಾಗಿ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ. ಕೃತಿ ಹಾಗು ಯುವರಾಜ್ ಜೋಡಿಯ ಡಾನ್ಸ್ ಗೆ ಪ್ರೇಕ್ಷಕರು ಮನಸೋಲೋದಂತೂ ಪಕ್ಕ. ಇನ್ನು ತಾಯಿಯನ್ನು ಕಳೆದುಕೊಂಡಿರುವ ಲಚ್ಚಿಗೆ ಈ ವೇದಿಕೆಯಲ್ಲಿ ತಾಯಿಯ ಅಕ್ಕರೆ ದೊರಕಲಿದೆ. ಪುಷ್ಪ, ಶಾಂತಲಾ ಹಾಗು ಮಾತಂಗಿ ಒಂದಾಗಿ ಹಾಕಿರುವ ಸ್ಟೆಪ್ಸ್ ಅಂತೂ ಅತ್ಯದ್ಭುತ.

ಜಾಹೀರಾತುಗಳು

ಪ್ರೇಕ್ಷಕರ ಅಚ್ಚುಮೆಚ್ಚಿನ 20 ಕಲಾವಿದರು ಒಂದೇ ವೇದಿಕೆಯಲ್ಲಿ ಮೋಜು ಮಸ್ತಿಯೊಂದಿಗೆ ಕುಣಿದು ಕುಪ್ಪಳಿಸಲಿದ್ದಾರೆ. ಹಿಂದೆಂದೂ ಹೇಳಿರದ ಮನದಾಳದ ಮಾತುಗಳನ್ನು ಈ ವೇದಿಕೆಯಲ್ಲಿ ಮೊದಲ ಬಾರಿಗೆ ತಾಯಂದಿರು ಹಂಚಿಕೊಂಡಿದ್ದು, ತಾಯಿಯ ಪ್ರೀತಿ ವಾತ್ಸಲ್ಯದ ಅಪ್ಪುಗೆಗೆ ಭಾವುಕರಾದ ನಟ-ನಟಿಯರು. ಫಸ್ಟ್ ಟೈಮ್ ಇನ್ ದಿ ಹಿಸ್ಟರಿ ವಿಜಯ್ ಸೂರ್ಯ ಹಾಗು ನೇಹಾ ಗೌಡ ಮೈನವಿರೇಳಿಸುವ ಸುಂದರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮಸ್ತ್ ಮಜಾ ಕೊಡುವ ಆಟಗಳನ್ನು ಆಡಿ ನಕ್ಕು ನಗಿಸಲಿದ್ದಾರೆ ನಿಮ್ಮ ನೆಚ್ಚಿನ ತಾರೆಗಳು. ಹಿಂದಿನಿಂದಲೂ ಹೊಸತನದ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಸುವರ್ಣ ವಾಹಿನಿಯು “ಸುವರ್ಣ ಸಂಭ್ರಮ” ಕಾರ್ಯಕ್ರಮದ ಮೂಲಕ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗೋದಂತು ಖಚಿತ.

ಮನರಂಜನೆಯ ಹಬ್ಬದೂಟ ಬಡಿಸಲು ಬರ್ತಿದೆ “ಸುವರ್ಣ ಸಂಭ್ರಮ” ನಮ್ಮ ಲಚ್ಚಿ ಜೊತೆ ಕಥೆಯೊಂದು ಶುರುವಾಗಿದೆ ಇದೇ ಜೂನ್ 4 ರಂದು ಸಂಜೆ 6 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ. ಹೊಸತನಕ್ಕೆ ಇನ್ನೊಂದು ಹೆಸರು “ಸ್ಟಾರ್ ಸುವರ್ಣ”.

Leave a Comment