ಬೊಂಬಾಟ್ ಭೋಜನ ಕಾರ್ಯಕ್ರಮದಿಂದ ಸ್ಪೆಷಲ್ ಡಿಶ್ “ಬೊಂಬಾಟ್ ಹಲ್ವಾ” ಲೋಕಾರ್ಪಣೆ…!

ಜಾಹೀರಾತುಗಳು
Bombat Halwa
Bombat Halwa from Bombat Bhojana

ಕನ್ನಡಿಗರ ಅಚ್ಚುಮೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಅಡುಗೆ ಷೋ “ಬೊಂಬಾಟ್ ಭೋಜನ”. ಈಗಾಗಲೇ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿ, ಮೂರನೇ ಸೀಸನ್ ನೊಂದಿಗೆ ಮುಂದುವರಿಯುತ್ತಿದೆ. ಈ ಕಾರ್ಯಕ್ರಮದ ಸಾರಥಿಯಾಗಿರುವ ಸಿಹಿ ಕಹಿ ಚಂದ್ರುರವರು ದಿನಕ್ಕೊಂದು ವಿವಿಧ ಶೈಲಿಯ ವಿಭಿನ್ನ ರುಚಿಯುಳ್ಳ ಅಡುಗೆಯನ್ನು ಮಾಡಿ ಜನರಿಗೆ ತಿಳಿಸುತ್ತಿರುತ್ತಾರೆ. ಈ ರೀತಿಯಲ್ಲಿ ಮಾಡಿರುವ ಒಂದು ಸ್ಪೆಷಲ್ ಡಿಶ್ ಇದೀಗ ಕರ್ನಾಟಕದಾದ್ಯಂತ ಲೋಕಾರ್ಪಣೆಗೊಂಡಿದೆ.

‘ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ಬಟಾಣಿಯಿಂದ ತಯಾರಿಸಲಾಗಿರುವ “ಬೊಂಬಾಟ್ ಹಲ್ವಾ”ವನ್ನು ಇಂಡಿಯಾ ಸ್ವೀಟ್ ಹೌಸ್ ಎಂಬ ಸಂಸ್ಥೆಯು ಮೇ 27ರಂದು ಶನಿವಾರ ಜೆ.ಪಿ ನಗರದ ಶಾಖೆಯಲ್ಲಿ ಅನಾವರಣಗೊಳಿಸಿದ್ದಾರೆ. ಈ ಕಾರ್ಯಕ್ರಮದ ಅಥಿತಿಯಾಗಿ ಹೊಸದಾಗಿ ಶುರುವಾಗಿರುವ “ನೀನಾದೆನಾ” ಧಾರಾವಾಹಿಯ ನಾಯಕ ದಿಲೀಪ್ ಶೆಟ್ಟಿ ಹಾಗು ನಾಯಕಿ ಖುಷಿ ಶಿವು ಆಗಮಿಸಿದ್ದರು. ಜೊತೆಗೆ ಸಿಹಿ ಕಹಿ ಚಂದ್ರು ರವರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಜನಸಾಮಾನ್ಯರು ‘ಬೊಂಬಾಟ್ ಹಲ್ವದ’ ರುಚಿಗೆ ಮನಸೋತಿದ್ದಲ್ಲದೆ, ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಜಾಹೀರಾತುಗಳು

ನೀವು ಸಿಹಿ ತಿಂಡಿ ಪ್ರಿಯರಾಗಿದ್ದರೆ ತಪ್ಪದೇ ನಿಮ್ಮ ಹತ್ತಿರದ ‘ಇಂಡಿಯಾ ಸ್ವೀಟ್ ಹೌಸ್’ ಗೆ ಭೇಟಿ ನೀಡಿ ಒಟ್ಟು 15 ಶಾಖೆಗಳಲ್ಲಿ ‘ಬೊಂಬಾ

Leave a Comment