ಬೊಂಬಾಟ್ ಕಾಫಿ – ಬೊಂಬಾಟ್ ಭೋಜನ ಕಾರ್ಯಕ್ರಮದಿಂದ ಕಾಫಿ ಪ್ರಿಯರಿಗಾಗಿ “ಬೊಂಬಾಟ್ ಕಾಫಿ ” ಲೋಕಾರ್ಪಣೆ…!

ಜಾಹೀರಾತುಗಳು
Bombat Coffee
Bombat Coffee

ಕನ್ನಡಿಗರ ಅಚ್ಚುಮೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಅಡುಗೆ ಷೋ “ಬೊಂಬಾಟ್ ಭೋಜನ”. ಈಗಾಗಲೇ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿ, ಮೂರನೇ ಸೀಸನ್ ನೊಂದಿಗೆ ಮುಂದುವರಿಯುತ್ತಿದೆ. ಈ ಕಾರ್ಯಕ್ರಮದ ಸಾರಥಿಯಾಗಿರುವ ಸಿಹಿ ಕಹಿ ಚಂದ್ರುರವರು ದಿನಕ್ಕೊಂದು ವಿವಿಧ ಶೈಲಿಯ ಕೈರುಚಿಯನ್ನು ಜನರಿಗೆ ತಿಳಿಸುತ್ತಿರುತ್ತಾರೆ. ಈ ರೀತಿಯಲ್ಲಿ ಮಾಡಿರುವ ‘ಸ್ಪೆಷಲ್ ಕಾಫಿ’ಯೊಂದು ಇದೀಗ ಲೋಕಾರ್ಪಣೆಗೊಂಡಿದೆ.

‘ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ಕಾಫಿ ಪ್ರಿಯರಿಗಾಗಿ ಮಾಡಿರುವ “ಬೊಂಬಾಟ್ ಕಾಫಿ”ಯನ್ನು ನಮ್ಮ ಫಿಲ್ಟರ್ ಕಾಫಿ ಎಂಬ ಸಂಸ್ಥೆಯು ಜುಲೈ 1ರಂದು ಶನಿವಾರ ಜಯನಗರದ ಶಾಖೆಯಲ್ಲಿ ಅನಾವರಣಗೊಳಿಸಿದ್ದಾರೆ.ಈ ಕಾರ್ಯಕ್ರಮಕ್ಕೆ ಖ್ಯಾತ ಫುಡ್ ಬ್ಲಾಗರ್ ಕೃಪಾಲ್ ಅಮನ್ ಅವರು ಆಗಮಿಸಿದ್ದರು. ಜೊತೆಗೆ ಸಿಹಿ ಕಹಿ ಚಂದ್ರು ರವರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಜನಸಾಮಾನ್ಯರು ‘ಬೊಂಬಾಟ್ ಕಾಫಿ’ಗೆ ಮನಸೋತಿದ್ದಲ್ಲದೆ, ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಜಾಹೀರಾತುಗಳು

ಈ ಸ್ಪೆಷಲ್ ‘ಬೊಂಬಾಟ್ ಕಾಫಿ’ಯು ‘ನಮ್ಮ ಫಿಲ್ಟರ್ ಕಾಫಿ’ ಸಂಸ್ಥೆಯ ಶಾಖೆಗಳಾದ ಜಯನಗರ, HSR ಹಾಗೂ Old Airport Road ನಲ್ಲಿ ಲಭ್ಯವಿದೆ. ನೀವು ಕಾಫಿ ಪ್ರಿಯರಾಗಿದ್ದರೆ ತಪ್ಪದೇ ಭೇಟಿ ನೀಡಿ ಮನಸಿಗೆ ಮುದ ನೀಡುವ “ಬೊಂಬಾಟ್ ಕಾಫಿ” ಯನ್ನು ಸವಿಯಿರಿ.

Leave a Comment