ಜೀ ಕನ್ನಡ ಚಾನೆಲ್

ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ – ಸೋಮವಾರದಿಂದ ಶುಕ್ರವಾರದವರೆಗೆ ಏಪ್ರಿಲ್ 26 ರಿಂದ 6:00 ಪಿ.ಎಂ

ಜಾಹೀರಾತುಗಳು

ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿ ಪ್ರಸಾರ

Mahanayaka Dr. BR Ambedkar
Mahanayaka Dr. BR Ambedkar

ಶನಿವಾರ ಹಾಗೂ ಭಾನುವಾರ ಪ್ರಸಾರವಾಗುತ್ತಿದ್ದ “ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್” ಪ್ರಸಾರದ ಸಮಯ ಬದಲಾವಣೆಯಾಗಿದೆ. ಶನಿವಾರ ಹಾಗೂ ಭಾನುವಾರ ಮಾತ್ರ ಪ್ರಸಾರವಾಗುತ್ತಿದ್ದ ಈ ಜನಪ್ರಿಯ ಧಾರಾವಾಹಿ ವೀಕ್ಷಕರು ಪ್ರತಿನಿತ್ಯ ವೀಕ್ಷಿಸುವ ಒತ್ತಾಯ ಮಾಡಿದ್ದರಿಂದ ದೈನಂದಿನ ಧಾರಾವಾಹಿಯಾಗಿ ಪರಿವರ್ತಿಸಲಾಹಿದೆ. ಈಗ ಇದು ವಾರಾಂತ್ಯದ ಬದಲಿಗೆ ಪ್ರತಿನಿತ್ಯ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6:00 ಗಂಟೆಗೆ ಪ್ರಸಾರವಾಗಲಿದೆ. ಜುಲೈ 04, 2020 ಕನ್ನಡ ಕಿರುತೆರೆ ಇತಿಹಾಸದಲ್ಲಿ ಒಂದು ಮೈಲಿಗಲ್ಲು “ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್” ಧಾರಾವಾಹಿ ಪ್ರಾರಂಭವಾಗಿದ್ದನ್ನು ಇಡೀ ವೀಕ್ಷಕರು ಸಂಭ್ರಮದಿಂದ ಸ್ವಾಗತಿಸಿದರು. ಈ ಧಾರಾವಾಹಿಯನ್ನು ಜನರು ಒಟ್ಟಾಗಿ ಕೂತು ಎಲ್.ಇ.ಡಿ. ಸ್ಕ್ರೀನ್ ಗಳಲ್ಲಿ ವೀಕ್ಷಿಸಿದ್ದೇ ಅಲ್ಲದೆ ಈ ಧಾರಾವಾಹಿಯ ಶೀರ್ಷಿಕೆ ಗೀತೆ ಸೂಪರ್ ಹಿಟ್ ಆಯಿತು.

ಧಾರಾವಾಹಿ ವೀಕ್ಷಿಸಿ ಎಂಬ ಪೋಸ್ಟರ್ ಗಳನ್ನು ಪ್ರಮುಖ ವೃತ್ತಗಳಲ್ಲಿ ಅಂಟಿಸಿ, ಪುಟ್ಟ ಮಕ್ಕಳು ಟಿ.ವಿ.ಗೆ ಆರತಿ ಬೆಳಗಿದರು. ಧಾರಾವಾಹಿಯಲ್ಲಿ ಅಂಬೇಡ್ಕರ್ ಜನಿಸಿದ ಕ್ಷಣದಲ್ಲಿ ಈಡುಗಾಯಿ ಒಡೆದರು. ಧನ್ಯವಾದ ಸಲ್ಲಿಸಿ ಸಾವಿರಾರು ವಾಟ್ಸಾಪ್ ಸಂದೇಶಗಳನ್ನು ಕಳುಹಿಸಿದರು. ಫೇಸ್ ಬುಕ್ ಪೋಸ್ಟ್ ಗಳನ್ನು ಲಕ್ಷಾಂತರ ಮಂದಿ ವೀಕ್ಷಿಸಿದರು. ಪುಟ್ಟ ಭೀಮರಾವ್ ಅಭಿನಯಕ್ಕೆ ವೀಕ್ಷಕರು ಮಾರು ಹೋಗಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಈ ಧಾರಾವಾಹಿಯ ಬ್ಯಾನರ್ ಹಾಗೂ ಕಟೌಟ್ ಗಳನ್ನು ನಿರ್ಮಿಸಿ ಉತ್ತೇಜಿಸಿದರು.

ಜಾಹೀರಾತುಗಳು

ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಬಾಲ್ಯದಿಂದಲೇ ಅಸ್ಪೃಶ್ಯತೆಯ ಸಂಕಷ್ಟ ಎದುರಿಸಿದರೂ ಕಂಗೆಡದೆ ತಮ್ಮ ವಿದ್ಯಾಭ್ಯಾಸ ಪೂರೈಸಿ ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸುವ, ಅವರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕನಾಗಿ ಬೆಳೆಯುತ್ತಾರೆ. ಸ್ವತಂತ್ರ ಭಾರತದಲ್ಲಿ ಕಾನೂನು ಸಚಿವರಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅವರ ಕೊಡುಗೆ ಅನುಪಮವಾದುದು. ಅವರ ಸೇವೆಯನ್ನು ಗುರುತಿಸಿ 1990ರಲ್ಲಿ ಮರಣೋತ್ತರವಾಗಿ ಅವರಿಗೆ “ಭಾರತ ರತ್ನ” ನೀಡಿ ಪುರಸ್ಕರಿಸಲಾಗಿದೆ.

ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಧಾರಾವಾಹಿಯ ಶೀರ್ಷಿಕೆ ಗೀತೆಯ ಕಾಲರ್ ಟ್ಯೂನ್ ಅನ್ನು ಬಿಡುಗಡೆ ಮಾಡಲಾಗಿದೆ. ಧಾರಾವಾಹಿಯ ಪೋಸ್ಟರ್ ಗಳು ಮಾರುಕಟ್ಟೆಗೆ ಬಂದಿವೆ. ಡಾ.ಅಂಬೇಡ್ಕರ್ ಅವರ ಕುರಿತಾದ ಪತ್ರಿಕಾ ಲೇಖನಗಳನ್ನು ಹಂಚಿಕೊಳ್ಳುತ್ತಿದ್ದು ಹಿಂದೆಂದೂ ಕಾಣದಂತಹ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದೆ. ಅಂಬೇಡ್ಕರ್ ಧಾರಾವಾಹಿ ಪ್ರತಿ ಮನೆ ಮನವನ್ನೂ ಮುಟ್ಟಿದೆ ಮತ್ತು ಇದು ಜನರು ಬರೀ ವೀಕ್ಷಿಸುತ್ತಿರುವ ಧಾರಾವಾಹಿಯಲ್ಲ ಬದಲಾಗಿ ಸಂಭ್ರಮಿಸುತ್ತಿರುವ ಧಾರಾವಾಹಿಯಾಗಿದೆ. ಸಮಾಜದ ಎಲ್ಲ ವಯೋಮಾನದವರು ಹಾಗೂ ವರ್ಗದವರು ಒಟ್ಟಾಗಿ ಸಂಭ್ರಮಿಸಿದ ಧಾರಾವಾಹಿ ಮತ್ತೊಂದಿಲ್ಲ. ಸಾಮಾನ್ಯವಾಗಿ ಧಾರಾವಾಹಿಗಳು ಮಹಿಳೆಯರು ಹಾಗೂ ವೃದ್ಧರನ್ನು ಸೆಳೆಯುತ್ತವೆ. ಆದರೆ ವಯಸ್ಸಿನ ಮಿತಿಗಳಿಲ್ಲದೆ ಮಕ್ಕಳು, ಯುವಜನರು, ಗೃಹಿಣಿಯರು ಹಾಗೂ ನಿವೃತ್ತರನ್ನು ಒಂದೇ ಆಕರ್ಷಣೆ ಪಡೆದಿರುವ ಏಕೈಕ ಧಾರಾವಾಹಿ ಇದಾಗಿದೆ.

Recent Posts

ಬರ್ತಿದೆ ಬ್ರ್ಯಾಂಡ್ ನ್ಯೂ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’.. ಮೇ 19 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ…!

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಗಳ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ 'Huu ಅಂತೀಯಾ...Uhuu…

23 hours ago

ಶೀಮದ್‌ ರಾಮಾಯಣ , ಉದಯ ಟಿವಿಯಲ್ಲಿ ಮೇ 20 ರಿಂದ ಸೋಮವಾರ-ಶನಿವಾರ ಸಂಜೆ 6 ಗಂಟೆಗೆ

ಉದಯ ಟಿವಿ ಶೀಮದ್‌ ರಾಮಾಯಣ ಕನ್ನಡ ಟೆಲಿವಿಷನ್‌ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ…

2 days ago

ಸುವರ್ಣ ಗೃಹಮಂತ್ರಿ ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ

ಸ್ಟಾರ್ ಸುವರ್ಣ - ಸುವರ್ಣ ಗೃಹಮಂತ್ರಿ ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು…

5 days ago

ಜಾನಕಿ ಸಂಸಾರ, ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ಬರ್ತಿದೆ ಹೊಸ ಕಥೆ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

ಸ್ಟಾರ್ ಸುವರ್ಣ - ಜಾನಕಿ ಸಂಸಾರ ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ…

2 weeks ago

ಬೊಂಬಾಟ್ ಭೋಜನ’ದಲ್ಲಿ ಕಾರ್ಮಿಕರ ದಿನಾಚರಣೆ ಸ್ಪೆಷಲ್…ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..!

ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…

2 weeks ago

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

3 weeks ago