ಜೀ ಕನ್ನಡ ಚಾನೆಲ್

ಸತ್ಯ ಧಾರಾವಾಹಿ 100ರ ಕಂತಿನ ಮೈಲಿಗಲ್ಲು – ಜೀ ಕನ್ನಡದಲ್ಲಿ

ಜಾಹೀರಾತುಗಳು
Satya Serial 100 Episodes at Zee Kannada
Satya Serial 100 Episodes at Zee Kannada

ಜೀ ಕನ್ನಡದಲ್ಲಿ ಪ್ರಾರಂಭದಿಂದಲೇ ಅಪಾರ ನಿರೀಕ್ಷೆ ಹುಟ್ಟಿಸಿದ, ಹೆಣ್ಣುಮಕ್ಕಳು ಅಡುಗೆಮನೆಗೆ ಸೀಮಿತವಾಗಿಲ್ಲ, ಅವರು ಸಮಾಜದಲ್ಲಿ ಧೈರ್ಯವಾಗಿ ತಮಗೆ ಬೇಕಾದ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಎತ್ತಿ ತೋರಿಸಿದ ಪಾತ್ರ “ಸತ್ಯ” ಧಾರಾವಾಹಿಯ ಪಾತ್ರ. ಇಂದಿನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಮಾರ್ಗದರ್ಶಿಯಾದ ಪಾತ್ರ ಇದು. ಈಗ ಯಶಸ್ವಿಯಾಗಿ ನೂರು ಕಂತುಗಳನ್ನು ಪೂರೈಸಿದೆ. ಜನರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಪಾತ್ರ ಇದಾಗಿದೆ.

ಸತ್ಯ ಧಾರಾವಾಹಿಯ ಎಲ್ಲ ಪಾತ್ರಗಳೂ ವೀಕ್ಷಕರ ಮೆಚ್ಚುಗೆ ಪಡೆದಿದೆ. ಸಿನಿಮಾ ರೀತಿಯಲ್ಲಿ ಪ್ರೋಮೋಗಳನ್ನು ಬಿಡುಗಡೆ ಮಾಡಿದ ಸತ್ಯ ಧಾರಾವಾಹಿ ಸಿನಿಮಾದಂತೆಯೇ ಒಂದು ಕಲ್ಟ್ ಸೃಷ್ಟಿಸಿದೆ. ರಾತ್ರಿ 9 ಗಂಟೆಗೆ ಗಂಡಸರು ಸುದ್ದಿ ನೋಡಲು ಬಯಸುತ್ತಾರೆ. ಆದರೆ ಅದನ್ನು ಮೀರಿ ಎಲ್ಲರೂ “ಸತ್ಯ”ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ಬರೀ ಮಹಿಳಾ ವೀಕ್ಷಕರೇ ಅಲ್ಲದೆ ಪುರುಷರೂ ಇಷ್ಟಪಟ್ಟು ನೋಡುತ್ತಿರುವ ಧಾರಾವಾಹಿ “ಸತ್ಯ”. ಜೀ ಕನ್ನಡದ ಬ್ರಾಂಡ್ ಧ್ಯೇಯ “ಬಯಸಿದ ಬಾಗಿಲು ತೆಗೆಯೋಣ”ದಂತೆ ಈ ಧಾರಾವಾಹಿ ಮಹಿಳಾ ಸಬಲೀಕರಣದ ಬಾಗಿಲುಗಳನ್ನು ತೆರೆದಿದೆ. ಸತ್ಯಳ ಟಾಮ್ ಬಾಯ್ ಪಾತ್ರ, ಆಕೆಯ ದಿಟ್ಟತನ ಎಲ್ಲರನ್ನೂ ಗೆದ್ದಿದೆ.

ಜಾಹೀರಾತುಗಳು

ಈ ಧಾರಾವಾಹಿಯ ಯಶಸ್ವಿ ನೂರನೇ ಕಂತಿನ ಕುರಿತು ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, “ಜೀ ಕನ್ನಡದ ಎಲ್ಲ ಫಿಕ್ಷನ್ ಹಾಗೂ ನಾನ್-ಫಿಕ್ಷನ್ ಕಾರ್ಯಕ್ರಮಗಳನ್ನು ವೀಕ್ಷಕರು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಇದೀಗ ಮಹಿಳೆಯರಿಗೆ ಪ್ರೇರಕಶಕ್ತಿಯಾಗಿರುವ “ಸತ್ಯ” ಧಾರಾವಾಹಿ ನೂರು ಕಂತಿನ ಮೈಲಿಗಲ್ಲು ಮುಟ್ಟಿರುವುದು ಅವರ ಅಭೂತಪೂರ್ವ ಪ್ರೀತಿಗೆ ದ್ಯೋತಕವಾಗಿದೆ. ಜೀ ಕನ್ನಡ ವೀಕ್ಷಕರನ್ನು ರಂಜಿಸುವ ಮತ್ತಷ್ಟು ವಿನೂತನ ಕಾರ್ಯಕ್ರಮಗಳನ್ನು ನಾವು ನೀಡಲು ಇದು ಪ್ರೇರಣೆ ನೀಡಿದೆ” ಎಂದರು.

ಈ ಧಾರಾವಾಹಿಯನ್ನು ಪ್ರಖ್ಯಾತ ನಿರ್ಮಾಣ ಸಂಸ್ಥೆ ಆರ್.ಆರ್.ಆರ್. ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ. ನಿರ್ದೇಶನ ಸ್ವಪ್ನಾ ಕೃಷ್ಣ ಅವರದು. ಗೌತಮಿ ಜಾದವ್, ಸಾಗರ್, ಹಿರಿಯ ನಟ ಶ್ರೀನಿವಾಸಮೂರ್ತಿ, ಅಭಿಜಿತ್ , ತ್ರಿವೇಣಿ ನಟಿಸಿದ್ದಾರೆ.

Recent Posts

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

17 hours ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

1 week ago

ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯಲ್ಲಿ ‘ವರಲಕ್ಷ್ಮಿ ಕಲ್ಯಾಣ’ , ಮಹಾ ತಿರುವುಗಳುಳ್ಳ ಸಂಚಿಕೆಗಳು ಇದೇ ಸೋಮ-ಶನಿ ಸಂಜೆ 6.30 ಕ್ಕೆ.

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯು…

2 weeks ago

ಶ್ರೀ ಬ್ರಾಹ್ಮೀ ಹೊಸ ಕಥೆಯ ಶ್ರಾವಣಿ ಸುಬ್ರಮಣ್ಯ ಜೀ಼ ಕನ್ನಡದಲ್ಲಿ ಶುಭಾರಂಭ ಮಾರ್ಚ್‌ 18ರಿಂದ ಮಹಾಮನೋರಂಜನೆಗೆ ಮುನ್ನುಡಿ

ಮನೋರಂಜನೆಯ ಮಾತು ಬಂದಾಗಲೆಲ್ಲ ಎಲ್ಲಾ ಮನೆಯ ಟಿವಿಯು ಟ್ಯೂನ್‌ ಆಗೋದೇ ಜೀ಼ ಕನ್ನಡಕ್ಕೆ. ಕರುನಾಡನ್ನ ದಶಕಗಳಿಂದ ಮನೋರಂಜಿಸುತ್ತ ಬಂದಿರುವ ಜೀ಼…

4 weeks ago

ಸೂರ್ಯವಂಶ – ಧಾರಾವಾಹಿ ಮಾರ್ಚ್ 11 ರಿಂದ ಸೋಮ-ಶನಿವಾರ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಉದಯ ಟಿವಿ - ಸೂರ್ಯವಂಶ ಕನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ…

1 month ago

ನಾರಿ ಕುಲಕ್ಕೆ ನಮಿಸಿದ ಜೀ಼ ಸ್ತ್ರೀ ಅವಾರ್ಡ್ – ಜೀ ಕನ್ನಡ ಚಾನೆಲ್

ಜೀ ಕನ್ನಡ ಚಾನೆಲ್ - ನಾರಿ ಕುಲಕ್ಕೆ ನಮಿಸಿದ ಜೀ಼ ಸ್ತ್ರೀ ಅವಾರ್ಡ್ ಹೆಮ್ಮೆಯ ಕನ್ನಡಿಗ, ಜೀ಼ ಕುಟುಂಬದಂತಹ ಪ್ರತಿಷ್ಟಿತ…

1 month ago