ಜೊತೆ ಜೊತೆಯಲಿ – ಜೀ ಕನ್ನಡದ ಅದ್ಧೂರಿ ಧಾರಾವಾಹಿ 400ರ ಸಂಭ್ರಮ

ಜಾಹೀರಾತುಗಳು

ಜೀ ಕನ್ನಡದ ಅದ್ಧೂರಿ ಧಾರಾವಾಹಿ ಜೊತೆ ಜೊತೆಯಲಿ 400ರ ಸಂಭ್ರಮ

400 Episodes of Jothe Jotheyali
400 Episodes of Jothe Jotheyali

ಜೀ಼ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ “ಜೊತೆ ಜೊತೆಯಲಿ” 400 ಕಂತುಗಳ ದಾಖಲೆ ಪ್ರಸಾರ ಕಂಡಿದ್ದು ಅಭೂತಪೂರ್ವ ಯಶಸ್ಸು ಸಾಧಿಸಿದೆ. ಟೈಟಲ್ ಸಾಂಗ್ ಕೂಡಾ 2.4 ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿದ್ದು ಯಾವುದೇ ಧಾರಾವಾಹಿಯ ಟೈಟಲ್ ಸಾಂಗ್ ಗಿಂತಲೂ ದಾಖಲೆ ಸೃಷ್ಟಿಸಿದೆ. ಕರ್ನಾಟಕದ ನಗರ ಹಾಗೂ ಗ್ರಾಮೀಣ ಪ್ರದೇಶದ ವೀಕ್ಷಕರನ್ನೂ ಒಂದೇ ರೀತಿಯಲ್ಲಿ ಸೆಳೆದ ಈ ಧಾರಾವಾಹಿಯು ವಯಸ್ಸು, ಜೀವನಶೈಲಿ ಹಾಗೂ ಅಂತಸ್ತಿನಲ್ಲಿ ಆಕಾಶ ಹಾಗೂ ಭೂಮಿಯಷ್ಟು ಅಂತರವಿರುವ ನಾಯಕ, ನಾಯಕಿಯರ ಪ್ರೇಮಕಥೆ ಎಲ್ಲರ ಮನ ಗೆದ್ದಿದೆ.

ಕನ್ನಡ ಕಿರುತೆರೆಯಲ್ಲಿಯೇ ಮಹತ್ವದ ಮೈಲಿಗಲ್ಲುಗಳನ್ನು ಈ ಧಾರಾವಾಹಿ ತಲುಪಿದೆ. ಮೊಟ್ಟಮೊದಲ ಬಾರಿಗೆ ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್ ನಲ್ಲಿ ಈ ಧಾರಾವಾಹಿಯ ಅದ್ಧೂರಿ ಟ್ರೈಲರ್ ಬಿಡುಗಡೆಯಿಂದಲೇ ಅಪಾರ ಕುತೂಹಲ, ಜನಪ್ರಿಯತೆ ಪಡೆದ ಈ ಧಾರಾವಾಹಿಯ ಕಥೆಯೂ ವಿನೂತನವಾಗಿದ್ದು ತಕ್ಷಣವೇ ವೀಕ್ಷಕರನ್ನು ಸೆಳೆಯಿತು.

ಹೆಚ್ಚು ಜನಪ್ರಿಯ ಟಿವಿ ಧಾರಾವಾಹಿ

ಮಧ್ಯವಯಸ್ಕ ಯಶಸ್ವಿ ಉದ್ಯಮಿ ಆರ್ಯವರ್ಧನ್, ಅನು ಸಿರಿಮನೆ ಪ್ರೇಮಕಥನ ಧಾರಾವಾಹಿಗಳ ಒಂದು ಹೊಸ ಪ್ರಕಾರ ಸೃಷ್ಟಿಸಿತು. ಆರ್ಯವರ್ಧನ್ ಆಗಿ ಅನಿರುದ್ಧ ಜಟ್ಕರ್ ಸಿನಿಮಾಗಿಂತ ಹೆಚ್ಚು ಜನಪ್ರಿಯರಾದರು. ಅನು ಸಿರಿಮನೆಯಾಗಿ ಮೇಘಾ ಶೆಟ್ಟಿ ಮನೆ ಮನೆ ಮಾತಾದರು. ಈ ಇಬ್ಬರ ಜೋಡಿಯೂ ಕನ್ನಡ ಕಿರುತೆರೆ ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಇವರಿಬ್ಬರ ಪ್ರೇಮಕಥೆ ಶುರುವಾಗಿ ಹಲವು ಅಡ್ಡಿ ಆತಂಕಗಳನ್ನು ಎದುರಿಸಿ ಗೆಲ್ಲುತ್ತದೆ. ಈಗ ಆರ್ಯವರ್ಧನ್ ಮದುವೆಯಾಗಲು ಅನು ಸಿರಿಮನೆ ಒಪ್ಪಿದ್ದಾಳೆ. ಆದರೆ ಅವರ ಮದುವೆ ಸುಸೂತ್ರವಾಗುತ್ತಿಲ್ಲ. ಮುಂದೇನು ನಡೆಯುತ್ತದೆ ಎನ್ನುವುದು ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಮೈಲಿಗಲ್ಲಿನ ದಾಖಲೆಗಳನ್ನು ಸೃಷ್ಟಿಸಿದ ಈ ಜನಪ್ರಿಯ ಧಾರಾವಾಹಿ 400 ಕಂತುಗಳು ತಲುಪಿದರೂ ಕಿಂಚಿತ್ತೂ ಜನಪ್ರಿಯತೆ ಕುಂದಿಲ್ಲ.

ಜಾಹೀರಾತುಗಳು

ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಅನಿರುದ್ಧ ಜಟ್ಕರ್ ಹಾಗೂ ಮೇಘಾ ಶೆಟ್ಟಿ ಜೋಡಿ ಮನೆ ಮನೆ ಮಾತಾಗಿದೆ. ಈ ಇಬ್ಬರದು ಅಪರೂಪದ ಜೋಡಿ. ವಯಸ್ಸು, ಅಂತಸ್ತು, ಜೀವನಶೈಲಿ ಎಲ್ಲದರಲ್ಲೂ ಆಕಾಶ ಭೂಮಿಯಷ್ಟು ಅಂತರವಿದ್ದರೂ ಅವರಿಬ್ಬರ ನಡುವೆ ಚಿಗುರುವ ಪ್ರೇಮಕಥೆ ಎಲ್ಲರಿಗೂ ಇಷ್ಟವಾಗಿದೆ. ಕನ್ನಡ ಕಿರುತೆರೆಯಲ್ಲಿ ಹೊಸಬಗೆಯ ಪ್ರೇಮಕಥೆಗಳನ್ನು ಬರೆಯುವಂತೆ ಈ ಧಾರಾವಾಹಿ ಪ್ರೇರೇಪಿಸಿದೆ.

ಡೌನ್ಲೋಡ್ ಜಿ ೫ ಆಪ್ಪ್

ಆರೂರು ಜಗದೀಶ್ ನಿರ್ದೇಶನದ ಈ ಧಾರಾವಾಹಿಯಲ್ಲಿ ನಟಿ ವಿಜಯಲಕ್ಷ್ಮಿ ಸಿಂಗ್ ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ಶಾರದಾ ದೇವಿಯಾಗಿ ನಟಿಸಿದ್ದಾರೆ. ಅವರು ಆರ್ಯವರ್ಧನ್ ತಾಯಿಯಾಗಿ ಪಾತ್ರದ ಘನತೆಯನ್ನು ಹೆಚ್ಚಿಸಿದ್ದಾರೆ. ಜೊತೆ ಜೊತೆಯಲಿ ದ್ವಿಶತಕ ತಲುಪಿದ ಕುರಿತು ಜೀ಼ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, “ಕನ್ನಡ ಕಿರುತೆರೆ ವಾಹಿನಿಗಳಲ್ಲಿಯೇ ಜೊತೆ ಜೊತೆಯಲಿ ಧಾರಾವಾಹಿ ಹೊಸ ದಾಖಲೆ ಬರೆದಿದೆ. ಇದೀಗ 400 ಕಂತುಗಳನ್ನು ತಲುಪಿರುವುದು ಅದರ ಅಭೂತಪೂರ್ವ ಯಶಸ್ಸಿಗೆ ಸಾಕ್ಷಿಯಾಗಿದೆ. ಜೀ಼ ಕನ್ನಡ ವೀಕ್ಷಕರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಅದಕ್ಕೆ ವೀಕ್ಷಕರೂ ಸದಾ ಸ್ಪಂದಿಸುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ಯಶಸ್ಸು ನಮಗೆ ಮತ್ತಷ್ಟು ಅಂತಹುದೇ ಕಾರ್ಯಕ್ರಮಗಳನ್ನು ರೂಪಿಸಲು ಸ್ಫೂರ್ತಿ ತಂದಿದೆ”ಎಂದರು.

Zee Kannada Channel
Zee Kannada Channel

Leave a Comment