ಜಗಧಾತ್ರಿ – ಆಗಸ್ಟ್ 21 ರಿಂದ ಜೀ ತೆಲುಗು ವಾಹಿನಿಯಲ್ಲಿ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7:3೦ ಕ್ಕೆ ಪ್ರಾರಂಭವಾಗಲಿದೆ

ಜಾಹೀರಾತುಗಳು

ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7:3೦ ಕ್ಕೆ ಪ್ರಾರಂಭವಾಗಲಿದೆ – ಜಗಧಾತ್ರಿ

ಆಗಸ್ಟ್ 21 ರಿಂದ ಜೀ ತೆಲುಗು ವಾಹಿನಿಯಲ್ಲಿ ‘ಜಗಧಾತ್ರಿ’ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7:3೦ ಕ್ಕೆ ಪ್ರಾರಂಭವಾಗಲಿದೆ. ಈಗಾಗಲೇ ಜೀ ವಾಹಿನಿಯಲ್ಲಿ ಹಿಟ್ ಧಾರಾವಾಹಿಗಳು ಪ್ರಸಾರ ಆಗುತ್ತಿವೆ. ಈ ಸಾಲಿಗೆ ‘ಜಗಧಾತ್ರಿ’ ಸೇರ್ಪಡೆ. ದೀಪ್ತಿ ಮಾನೆ, ದರ್ಶ್ ಚಂದ್ರಪ್ಪ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ‘ಜಗಧಾತ್ರಿ’ ಈ ತಿಂಗಳ 21 ರಿಂದ ಪ್ರತಿದಿನ ಸಂಜೆ 7.30ಕ್ಕೆ ಪ್ರಸಾರವಾಗಲಿದೆ.

Jagadhatri Serial Zee Telugu
Jagadhatri Serial Zee Telugu

ಧಾರಾವಾಹಿ ಕಥೆ ಏನು? – ಜಗಧಾತ್ರಿ

‘ಜಗಧಾತ್ರಿ’ ಪಾತ್ರದ ಸುತ್ತವೇ ಕತೆ ಸಾಗುತ್ತದೆ. ಜಗಧಾತ್ರಿ ದೇವಿ ರೀತಿಯಲ್ಲಿ ಜಗಧಾತ್ರಿ ಎನ್ನುವ ಹುಡುಗಿಯೊಬ್ಬಳು ಇಡೀ ಮನೆಯನ್ನು ಮುನ್ನಡೆಸುತ್ತಾಳೆ, ಅಷ್ಟೇ ಅಲ್ಲದೆ ಅಂಧರ, ಕಿವುಡರ ಶಾಲೆ ನಡೆಸುತ್ತಾಳೆ. ಜಗಧಾತ್ರಿ ಗಟ್ಟಿಗಿತ್ತಿ, ಸ್ವಾವಲಂಬಿ. ಅಷ್ಟೇ ಅಲ್ಲದೆ ಮನೆಯಲ್ಲಿ ಹಿರಿ ಮಗಳು. ಆ ಶಾಲೆಗೋಸ್ಕರ ಇಡೀ ಜೀವನವನ್ನು ಮುಡಿಪಾಗಿಟ್ಟುಕೊಂಡ ಜಗಧಾತ್ರಿ ಸುತ್ತವೇ ಈ ಧಾರಾವಾಹಿ ಕತೆ ಸಾಗುತ್ತದೆ. ಇದನ್ನು ಅವಳ ಮಲತಾಯಿ ನಿಷ್ಕಾ ಪ್ರಯೋಜನ ಪಡೆದುಕೊಳ್ಳುತ್ತಾಳೆ. ಜಗಧಾತ್ರಿ ಅಜ್ಜಿ, ತಂದೆ ಅವಳಿಗೆ ಬೆಂಬಲ ನೀಡುತ್ತಾರೆ. ಆದರೆ ಜಗಧಾತ್ರಿ ಅಪರಾಧ ಪ್ರಕರಣಗಳನ್ನು ಪರಿಹರಿಸುವಲ್ಲಿ ಪರಿಣತಿ ಹೊಂದಿರುವ ರಹಸ್ಯ ಗುಪ್ತಚರ ಅಧಿಕಾರಿ ಆಗಿರೋದು ಮನೆಯವರಿಗೂ ಕೂಡ ಗೊತ್ತಿಲ್ಲ. ತಾಯಿಯ ಮುಗ್ಧತೆಯನ್ನು ಹೊರಗೆ ತರಬೇಕು ಎನ್ನೋದು ಜಗಧಾತ್ರಿಯ ಆಸೆ.

ಜೀ ಕನ್ನಡ ಚಾನೆಲ್

ಮನೆಯವರ ಹೊರತಾಗಿ ಜಗಧಾತ್ರಿಗೆ ಅವಳ ಗೆಳೆಯ ಕೇದರ್ ಕೂಡ ಬೆಂಬಲ ನೀಡುತ್ತಿದ್ದಾನೆ. ಕೇದರ್ ಪಾತ್ರವನ್ನು ನಟ ದರ್ಶ್ ಚಂದ್ರಪ್ಪ ನಿಭಾಯಿಸುತ್ತಿದ್ದಾರೆ. ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ಇನ್ನೊಂದು ಕಡೆ ತನ್ನ ತಾಯಿಯ ಮುಗ್ಧತೆಯನ್ನು ಹೊರತರಲು ಜಗಧಾತ್ರಿ ಸಫಲಳಾಗುತ್ತಾಳಾ ಎಂಬ ಪ್ರಶ್ನೆ ಎದ್ದಿದೆ.

ಜಾಹೀರಾತುಗಳು

ಈ ಧಾರಾವಾಹಿಯಲ್ಲಿ ಆಕ್ಷನ್, ಫ್ಯಾಮಿಲಿ ಡ್ರಾಮಾ, ಅನಿರೀಕ್ಷಿತ ಬೆಳವಣಿಗೆಗಳು ಕಥೆಯನ್ನು ಇನ್ನಷ್ಟು ಕುತೂಹಲದಿಂದ ಇರುವಂತೆ ಮಾಡುತ್ತವೆ. ಈ ಧಾರಾವಾಹಿಯಲ್ಲಿ ಗಟ್ಟಿ ಮಹಿಳೆಯ ಕಥೆ ಇದ್ದು, ನಟಿ ಪ್ರೀತಿ ಶ್ರೀನಿವಾಸ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಧಾರಾವಾಹಿಗೆ ರಾಮ್-ಲಕ್ಷ್ಮಣ್ ಅವರು ಫೈಟ್ ಕಂಪೋಸ್ ಮಾಡಿದ್ದಾರೆ. ಲಕ್ಷ್ಮೀ ಮೇಘನಾ ಅವರು ಈ ಧಾರಾವಾಹಿಯ ಹಾಡನ್ನು ಹಾಡಿದ್ದು ಕಮ್ರನ್ ಅವರು ಸಂಗೀತ ಸಂಯೋಜನೆ ಮಾಡಿದ್ದರು.

ದೀಪ್ತಿ ಮಾನೆ ಈ ಧಾರಾವಾಹಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, “ನಾನು ಜಗಧಾತ್ರಿ ಧಾರಾವಾಹಿಗೋಸ್ಕರ ಎಷ್ಟು ಥ್ರಿಲ್ ಆಗಿದ್ದೇನೆ ಅಂತ ಹೇಳೋಕೆ ಆಗದು. ಇದರಿಂದ ನನ್ನ ನಟನೆ ಮೇಲಿನ ಒಲವು ಹೆಚ್ಚಾಗುವುದು. ನನ್ನ ಪಾತ್ರ ತುಂಬ ಸ್ಟ್ರಾಂಗ್ ಆಗಿದೆ. ಈ ಧಾರಾವಾಹಿಯಲ್ಲಿ ಎಲ್ಲ ರೀತಿಯ ಭಾವನೆಗಳು ವ್ಯಕ್ತವಾಗುತ್ತವೆ. ಇದರಿಂದ ಕಲಾವಿದನ ಕನಸು ನನಸಾಗುತ್ತದೆ” ಎಂದು ಹೇಳಿದ್ದಾರೆ.

Leave a Comment