ಸ್ಟಾರ್ ಸುವರ್ಣ ವಾಹಿನಿಯ ವತಿಯಿಂದ ‘ಲಾಲ್ ಬಾಗ್ ಪುಷ್ಪಪ್ರದರ್ಶನ’ ದಲ್ಲಿ “ಕಾವೇರಿ ಕನ್ನಡ ಮೀಡಿಯಂ” ಧಾರಾವಾಹಿಗೆ ಭರ್ಜರಿ ಪ್ರಮೋಷನ್…!

ಜಾಹೀರಾತುಗಳು
Kaveri Kannada Medium Serial Promotion
Kaveri Kannada Medium Serial Promotion

ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಸ್ವಾತಂತ್ಯ ದಿನಾಚರಣೆಯ ಪ್ರಯುಕ್ತ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಬಾರಿ ಕೆಂಗಲ್ ಹನುಮಂತಯ್ಯ ರವರ ಪ್ರತಿಮೆಯನ್ನು ಹೂವಿನಿಂದ ಮಾಡಲಾಗಿದ್ದು, ಜೊತೆಗೆ ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ನಿರ್ಮಿಸಿರುವ ವಿಧಾನಸೌಧ ಹಾಗು ಶಿವಪುರ ಸತ್ಯಾಗ್ರಹಸೌಧದ ಪುಷ್ಪ ಮಾದರಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಹೀಗಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸದಾಗಿ ಆರಂಭವಾಗಲಿರುವ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯ ಪ್ರಮೋಷನ್ ಅನ್ನು ಭರ್ಜರಿಯಾಗಿ ವಾಹಿನಿಯು ಮಾಡುತ್ತಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಹಾಗು ನೀನಾದೆನಾ ಧಾರಾವಾಹಿಗಳು ಯಶಸ್ವಿಯಾಗಿ ಪ್ರಸಾರವಾಗುತ್ತಿದ್ದು ಈ ಸಾಲಿಗೆ ಶೀಘ್ರದಲ್ಲೇ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿ ಸೇರ್ಪಡೆಯಾಗಲಿದೆ.

ಜಾಹೀರಾತುಗಳು
Kaveri Kannada Medium Serial
Kaveri Kannada Medium Serial

ಈ ಪುಷ್ಪ ಪ್ರದರ್ಶನಕ್ಕೆ ಸ್ಟಾರ್ ಸುವರ್ಣ ವಾಹಿನಿಯ ‘ನಮ್ಮ ಲಚ್ಚಿ’ ಧಾರಾವಾಹಿಯ ಕಲಾವಿದರಾದ ಲಚ್ಚಿ ಹಾಗು ರಿಯಾ ಆಗಮಿಸಿದ್ದು ಪ್ರೇಕ್ಷಕರನ್ನು ಮನರಂಜಿಸಿದರು. ಹಾಗೂ ವಾಹಿನಿಯಲ್ಲಿ ಹೊಸದಾಗಿ ಶುರುವಾಗಿರುವ ಕಾರ್ಯಕ್ರಮಗಳ ಪ್ರೋಮೋಗಳನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದ್ದು ಪುಷ್ಪ ಪ್ರದರ್ಶನಕ್ಕೆ ಬಂದ ಪ್ರೇಕ್ಷಕರು ಹೂವಿನಿಂದ ಅಲಂಕೃತಗೊಂಡ ಶಾಲೆಯ ಕಲಾಕೃತಿಯನ್ನು ನೋಡಿ ಖುಷಿಪಟ್ಟು ಫೋಟೋ ತೆಗಿಯಲು ಮುಗಿಬಿದ್ದಿದ್ದರು. “ಕಾವೇರಿ ಕನ್ನಡ ಮೀಡಿಯಂ” ಧಾರಾವಾಹಿ ಪ್ರಯುಕ್ತ ಕನ್ನಡ ಭಾಷೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಲುವಾಗಿ ‘ಸಿಗ್ನೇಚರ್ ವಾಲ್” ಗಳನ್ನು ಫಿಕ್ಸ್ ಮಾಡಲಾಗಿದ್ದು ಜನರು ತಮ್ಮ ಹಸ್ತಾಕ್ಷರವನ್ನು ಕನ್ನಡದಲ್ಲಿ ಬರೆಯುತ್ತಿದ್ದಾರೆ. ಒಟ್ಟಾರೆ ಆಗಸ್ಟ್ 4 ರಿಂದ ಆಗಸ್ಟ್ 15 ರವರೆಗೆ ಒಟ್ಟು 12 ದಿನಗಳ ಕಾಲ ಈ ಪುಷ್ಪ ಪ್ರದರ್ಶನ ನಡೆಯಲಿದ್ದು ವೀಕೆಂಡ್ ನಲ್ಲಿ ಸ್ಟಾರ್ ಸುವರ್ಣ ವಾಹಿನಿಯ ತಾರೆಗಳು ಆಗಮಿಸಲಿದ್ದಾರೆ.

Leave a Comment