ಕಾವೇರಿ ಕನ್ನಡ ಮೀಡಿಯಂ – ಕನ್ನಡದ ಕಂಪನ್ನು ಪಸರಿಸಲು ಬರ್ತಿದೆ ಹೊಚ್ಚ ಹೊಸ ಧಾರಾವಾಹಿ – ಆಗಸ್ಟ್ 28 ರಿಂದ ರಾತ್ರಿ 7.30 ಕ್ಕೆ.

ಜಾಹೀರಾತುಗಳು

ಕನ್ನಡದ ಕಂಪನ್ನು ಪಸರಿಸಲು ಬರ್ತಿದೆ ಹೊಚ್ಚ ಹೊಸ ಧಾರಾವಾಹಿ ಕಾವೇರಿ ಕನ್ನಡ ಮೀಡಿಯಂ

ಕಾವೇರಿ ಕನ್ನಡ ಮೀಡಿಯಂ
Kaveri Kannada Medium | Star Suvarna

ಪ್ರೇಕ್ಷಕರನ್ನು ಸದಾಕಾಲ ಹೊಸತನದೊಂದಿಗೆ ರಂಜಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಲಿದೆ ಹೊಚ್ಚ ಹೊಸ ವಿನೂತನ ಧಾರಾವಾಹಿ “ಕಾವೇರಿ ಕನ್ನಡ ಮೀಡಿಯಂ”. ಹೆಸರೇ ಹೇಳೋ ತರ ಇದು ಕನ್ನಡದ ಕಂಪು ತುಂಬಿರೋ ಸೀರಿಯಲ್ ಅಂತಾನೆ ಹೇಳಬಹುದು. ಕನ್ನಡ ಬರೀ ಭಾಷೆ ಅಲ್ಲ ಬದುಕು ಅಂತ ನಂಬಿರೋ ಊರಿನಲ್ಲಿ ಹುಟ್ಟಿರೋ ಕಾವೇರಿ ಅನ್ನೋ ಹೆಣ್ಣು ಮಗಳು ವೃತ್ತಿಯಲ್ಲಿ ಶಿಕ್ಷಕಿ, ಅಪ್ಪ ಕಟ್ಟಿರೋ ಕನ್ನಡ ಶಾಲೆಯನ್ನು ಕಾಪಾಡೋದಕ್ಕಾಗಿ ಹಾಗು ಅದರ ಅಭಿವೃದ್ದಿಗಾಗಿ ಸದಾಕಾಲ ಹೋರಾಡೋಳು.

ಇನ್ನು ಕಥಾ ನಾಯಕ ಅಗಸ್ತ್ಯ ಇಂಡಿಯಾದಲ್ಲೇ ಒನ್ ಆಫ್ ದಿ ಬೆಸ್ಟ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಓನರ್ ಈತನಿಗೆ ಆತನ ಶಾಲೆ ಅಭಿವೃದ್ಧಿ ಆಗ್ಬೇಕು ಅಷ್ಟೇ ವಿನಹ ಬೇರೆಯಾವುದು ಆತನ ಲೆಕ್ಕಕ್ಕೆ ಬರಲ್ಲ. ಆದರೆ ಕನ್ನಡ ಶಾಲೆಯನ್ನು ಉಳಿಸೋ ಸಲುವಾಗಿ ಅಗಸ್ತ್ಯ ನೀಡಿರುವ ಸವಾಲನ್ನು ಸ್ವೀಕರಿಸಿ, ಕಾವೇರಿ 6 ತಿಂಗಳುಗಳ ಕಾಲ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾಳೆ ? ಇವರಿಬ್ಬರ ಉದ್ದೇಶ ಒಂದೇ ಆಗಿದ್ದರು ಅನುಸರಿಸೋ ದಾರಿಗಳು ಮಾತ್ರ ಬೇರೆ ಬೇರೆ, ಈ ಕವಲು ದಾರಿಗಳು ಹೇಗೆ ಒಂದಾಗ್ತವೆ ಅನ್ನೋದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಜಾಹೀರಾತುಗಳು

ಇನ್ನು ಈ ಸೀರಿಯಲ್ ನ ನಾಯಕನಾಗಿ ‘ಮತ್ತೆ ವಸಂತ’ ಧಾರವಾಹಿ ಖ್ಯಾತಿಯ ರಕ್ಷಿತ್ ಹಾಗು ನಾಯಕಿಯಾಗಿ ಪ್ರಿಯ ಜೆ ಆಚಾರ್ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ಮತ್ತೊಂದು ವಿಶೇಷತೆ ಅಂದರೆ ಸರಿ ಸುಮಾರು 30 ವರ್ಷಗಳ ಹಿಂದೆ ಕನ್ನಡ ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿ ಮಹಾಲಕ್ಷ್ಮಿಯವರು ಇದೇ ಮೊಟ್ಟ ಮೊದಲ ಬಾರಿಗೆ ಸ್ಟಾರ್ ಸುವರ್ಣದ ಮೂಲಕ ‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ವರ್ಷಗಳ ಬಳಿಕ ನಟನೆಯ ಮೂಲಕ ಮಹಾಲಕ್ಷ್ಮಿಯವರನ್ನು ಕನ್ನಡ ಕಿರುತೆರೆಗೆ ಪರಿಚಯಿಸಲು ಸ್ಟಾರ್ ಸುವರ್ಣ ವಾಹಿನಿ ಹೆಮ್ಮೆ ಪಡುತ್ತದೆ. ಕರ್ನಾಟಕದ ಸುಂದರ ತಾಣಗಳಾದ ದಕ್ಷಿಣ ಕನ್ನಡ ಹಾಗು ಆಗುಂಬೆಯಲ್ಲಿ ಈ ಧಾರವಾಹಿಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಅದ್ಬುತ ತಾರಾಬಳಗವನ್ನು ಈ ಧಾರಾವಾಹಿ ಹೊಂದಿದೆ.

ಶುರುವಾಗ್ತಿದೆ ಮಾತೃಭಾಷೆ ಕನ್ನಡವನ್ನು ಉಸಿರಾಗಿಸಿಕೊಂಡವಳ ಕತೆ “ಕಾವೇರಿ ಕನ್ನಡ ಮೀಡಿಯಂ” ಇದೇ ಆಗಸ್ಟ್ 28 ರಿಂದ ರಾತ್ರಿ 7.30 ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ

Leave a Comment