೧ ಗಂಟೆಯ ಮಹಾಸಂಚಿಕೆಗಳು ಮಹಾಸಂಚಿಕೆ ಮಹಾಮನೋರಂಜನೆ

ಜಾಹೀರಾತುಗಳು

ಕರ್ನಾಟಕದ ಜನರನ್ನ ಮನೋರಂಜಿಸುವಲ್ಲಿ ಸದಾ ಮುಂಚೂಣಿಯಲ್ಲಿರವ ಜೀ ಕನ್ನಡ ವಾಹಿನಿ,ಪ್ರತಿ ಬಾರಿಯು ಹೊಸತನಕ್ಕೆ ಹಾತೊರೆಯುತ,ಹೊಸತೇನನ್ನೋ ಜನರಿಗೆ ತಲುಪಿಸುವಲ್ಲಿ ಸದಾ ಕಾರ್ಯಪ್ರವೃತ್ತವಾಗಿರುತ್ತದೆ.

ಜಾಹೀರಾತುಗಳು
Zee Kannada Sri Krishna Janmashtami
Zee Kannada Sri Krishna Janmashtami

ಸಂಜೆ ೫.೩೦ ಆಯ್ತು ಎಂದರೆ ಮನೆಗಳಲ್ಲಿ ಒಂದು ತರಹದ ಸಂಭ್ರಮ ಮನೆಮಂದಿಯೆಲ್ಲ ತಮ್ಮ ಕೆಲಸ ಮುಗಿಸಿ ಟಿವಿ ಮುಂದೆ ಹಾಜರಾಗಿಬಿಡುತ್ತಾರೆ. ಯಾಕಂದ್ರೆ ಝೀ ಕನ್ನಡ ತನ್ನ ಮನೋರಂಜನೆಯ ಕೆಲಸವನ್ನ ಶುರುಮಾಡುವ ಸಮಯವದು.ಇಂತಹ ಝೀ ಕನ್ನಡ ಈ ಬಾರಿ ತನ್ನ ಪ್ರಿಯ ವೀಕ್ಷಕರಿಗಾಗಿ ಅವರ ಮನೆಮನ ಮೆಚ್ಚಿದ ೫ ಧಾರಾವಾಹಿಗಳ ಮಹಾಸಂಚಿಕಯನ್ನ ಪ್ರಸಾರಮಾಡಲು ನಿರ್ಧರಿಸಿದೆ, ಈ ಪ್ರಯತ್ನವು ಇದೇ ಸೋಮವಾರದಿಂದ ಶುರುವಾಗಿದ್ದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಾಡಲಾಗುತ್ತಿರುವ ಈ ಹೊಸ ಪ್ರಯತ್ನ ಈ ವಾರವೆಲ್ಲ ಜನರನ್ನ ಮನೋರಂಜಿಸೋದಂತು ಗ್ಯಾರಂಟಿ.ಸೋಮವಾರ ಸಂಜೆ ೫.೩೦ರಿಂದ ೭.೩೦ರ ತನಕ ಒಂಟಿ ಮನಸ್ಸುಗಳ ಪ್ರೇಮಕಾವ್ಯ ಅಮೃತಧಾರೆ ಧಾರವಾಹಿಯನ್ನ ಪ್ರಸಾರ ಮಾಡುವ ಮುಖಾಂತರ ಈ ಪ್ರಕ್ರಿಯೆ ಚಾಲನೆಗೊಂಡಿದ್ದು ಪುಟ್ಟಕ್ಕನಮಕ್ಕಳು ಮಂಗಳವಾರ ರಾತ್ರಿ ೭.೩೦ರಿಂದ ೮.೩೦ರ ತನಕ ಪ್ರಸಾರವಾಗಲಿದೆ ಇದೇ ಸರಣಿಯಲ್ಲಿ ಬರುವ ಶ್ರೀರಸ್ತು ಶುಭಮಸ್ತು ಬುಧವಾರ ರಾತ್ರಿ ೮.೩೦ ರಿಂದ ೯.೩೦ರ ತನಕ ಪ್ರಸಾರವಾದರೆ,ಸೀತಾರಾಮ ಗುರುವಾರ ರಾತ್ರಿ ೯.೩೦ರಿಂದ ೧೦.೩೦ತನಕ ಪ್ರಸಾರಗೊಳ್ಳಲ್ಲಿದ್ದು ,ಭೂಮಿಗೆ ಬಂದ ಭಗವಂತ ಶುಕ್ರವಾರ ರಾತ್ರಿ ೧೦ರಿಂದ ೧೧ಕ್ಕೆ ಪ್ರಸಾರವಾಗುವ ಮುಖಾಂತರ ಈ ವಿಶೇಷ ೧ಗಂಟೆಗಳ ಮಹಾಸಂಚಿಕೆ ಎಂಬ ಮಹಾಮನೋರಂಜನೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ, ಪ್ರತಿದಿನ ನಾಳೆ ಏನಾಗಬಹುದು ಎಂದು ಕಾಯುವ ವೀಕ್ಷಕರನ್ನ ಮನೋರಂಜಿಸುವ ಜೊತೆಗೆ ಅವರ ಕುತೂಹಲಕ್ಕೆ ತೆರೆಎಳೆಯುವ ಈ ಸಣ್ಣ ಪ್ರಯತ್ನ ಝೀ ಕನ್ನಡ ತನ್ನ ಅಭಿಮಾನಿಗಳಿಗಾಗಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಕೊಡುತ್ತಿರುವ ವಿಶೇಷ ಉಡುಗೊರೆ ಎನ್ನಬಹುದು.

Leave a Comment