ಬೆಳಕಿನ ಹಬ್ಬಕ್ಕೆ ನಗುವಿನ ರಸದೌತಣ ನೀಡಲು ಸ್ಟಾರ್ ಸುವರ್ಣ ಹೊತ್ತು ತರ್ತಿದೆ ‘ದೀಪಾವಳಿ ನಗೆ ಉತ್ಸವ’…ಇದೇ ಭಾನುವಾರ ರಾತ್ರಿ 7 ಗಂಟೆಗೆ

ಜಾಹೀರಾತುಗಳು

ದೀಪಾವಳಿ ನಗೆ ಉತ್ಸವ – ಬೆಳಕಿನ ಹಬ್ಬಕ್ಕೆ ನಗುವಿನ ರಸದೌತಣ ನೀಡಲು ಸ್ಟಾರ್ ಸುವರ್ಣ ಹೊತ್ತು ತರ್ತಿದೆ ಇದೇ ಭಾನುವಾರ

Star Suvarna Diwali Programs
Star Suvarna Diwali Programs

ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಬೆಳಕಿನ ಹಬ್ಬದ ಪ್ರಯುಕ್ತ ತನ್ನ ವೀಕ್ಷಕರಿಗೆ ನಗುವಿನ ರಸದೌತಣ ನೀಡಲು ಸಜ್ಜಾಗಿದೆ ಅದೇ “ದೀಪಾವಳಿ ನಗೆ ಉತ್ಸವ”. ಪ್ರಸ್ತುತ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳು, ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಹೀಗಾಗಿ ಮನೆ ಮಂದಿಯೆಲ್ಲಾ ಒಟ್ಟಾಗಿ ಆಚರಿಸುವ ದೀಪಾವಳಿಯ ಸುಸಂದರ್ಭದಲ್ಲಿ ಇನ್ನಷ್ಟು ಮನರಂಜನೆ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ.

ದೀಪಾವಳಿ ನಗೆ ಉತ್ಸವ

ಹಬ್ಬದ ಸಂಭ್ರಮವಿರುವ ಈ ವೇದಿಕೆಯಲ್ಲಿ ಹಾಸ್ಯಕಲಾವಿದರಾದ ಮಿತ್ರ ಹಾಗು ತಬಲಾ ನಾಣಿ ನಗೆ ಚಟಾಕಿಯ ಕಾಮಿಡಿ ಪಟಾಕಿಯನ್ನು ಸಿಡಿಸಿದ್ದಾರೆ. ಜೊತೆಗೆ ಕಾಮಿಡಿ ಗ್ಯಾಂಗ್ಸ್ ಖ್ಯಾತಿಯ ಸ್ಪರ್ಧಿಗಳು ಒಂದಷ್ಟು ಹಾಸ್ಯ ಸ್ಕಿಟ್ ಪ್ರದರ್ಶಿಸಿದ್ದು ವೀಕ್ಷಕರು ನಕ್ಕು ಸುಸ್ತಾಗೋದಂತು ಖಚಿತ. ತರ್ಲೆ ತುಂಟಾಟದ ಜೊತೆ ಮಸ್ತ್ ಹೆಜ್ಜೆ ಹಾಕಿದ್ದಾರೆ ವೀಕ್ಷಕರ ಅಚ್ಚುಮೆಚ್ಚಿನ ನಟಿ ಶುಭ ಪೂಂಜಾ. ಇನ್ನು ಸ್ಟಾರ್ ಸುವರ್ಣದ ಮೋಸ್ಟ್ ಪಾಪ್ಯುಲರ್ ಜೋಡಿ ವಿಕ್ರಮ್ ಮತ್ತು ವೇದಾಳ ಡಾನ್ಸ್ ಪಡ್ಡೆ ಹುಡುಗರ ನಿದ್ದೆ ಕದಿಯೋದಂತೂ ಖಂಡಿತ.

ಜಾಹೀರಾತುಗಳು

ಕನ್ನಡ ಕಿರುತೆರೆಯಲ್ಲಿ ಇದೇ ಮೊಟ್ಟಮೊದಲ ಬಾರಿಗೆ ನಟಿ ಚೈತ್ರ ಜೆ ಆಚಾರ್ ‘ದೀಪಾವಳಿ ನಗೆ ಉತ್ಸವ’ ವೇದಿಕೆಯಲ್ಲಿ ಅದ್ಬುತ ಡಾನ್ಸ್ ಪರ್ಫಾರ್ಮೆನ್ಸ್ ನೀಡಿದ್ದಾರೆ. ಜೊತೆಗೆ ಸತೀಶ್ ನೀನಾಸಂ, ಅದಿತಿ ಪ್ರಭುದೇವ್, ದಿವ್ಯ ಉರುಡುಗ, ಅರವಿಂದ್ ಕೆ ಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆಯ ರಸದೌತಣ ನೀಡಿದ್ದಾರೆ.

ಈ ದೀಪಾವಳಿ ಹಬ್ಬಕ್ಕೆ ಮಸ್ತಿಯ ರಸದೂಟವನ್ನು ಉಣಬಡಿಸಲು ಬರ್ತಿದೆ ‘ದೀಪಾವಳಿ ನಗೆ ಉತ್ಸವ’ ಇದೇ ಭಾನುವಾರ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.

Leave a Comment