ಭರ್ಜರಿ ಬ್ಯಾಚುಲರ್ಸ ಗ್ರಾಂಡ್ ಫಿನಾಲೆ ಇದೇ ಭಾನುವಾರ ಸಂಜೆ 7 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ

ಜಾಹೀರಾತುಗಳು
Winners of Bharjari Bachelors
Winners of Bharjari Bachelors

ಭರ್ಜರಿ ಬ್ಯಾಚುಲರ್ಸ್ ಭರ್ಜರಿಯಾಗಿ ಮುಗಿಯಿತು ಬ್ಯಾಚುಲರ್ಸ ಜೀವನದ ಫೈನಲ್ ಟೆಸ್ಟ್ ಇದೇ ಭಾನುವಾರ ಬ್ಯಾಚುಲರ್ಸ ಎಲಿಜಬಲಿಟಿ ಟೆಸ್ಟ್. ಕಳೆದ 4 ತಿಂಗಳುಗಳಿಂದ ಬ್ಯಾಚುಲರ್ಸಗಳ ಜೀವನವನ್ನ ನ್ಯಾಚುರಲ್ ಆಗಿ ತೋರಿಸಿ ಅವರನ್ನ ಎಲಿಜಿಬಲ್ ಬ್ಯಾಚುಲರ್ ಮಾಡೋ ಪ್ರಯತ್ನವನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದ ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಶೋ ಕಿರುತೆರೆಯ ವಿಭಿನ್ನ ಪ್ರಯತ್ನಗಳಲ್ಲಿ ಒಂದು.

ಕನ್ನಡ ಕಿರುತೆರೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿ,ಗುರುತಿಸಿಕೊಂಡಿರುವ 10 ಯುವಕರನ್ನ ಒಂದೆಡೆ ಸೇರಿಸಿ ಅವರಿಗೆ ಮಾರ್ಗದರ್ಶನ ಮಾಡಲು ಏಂಜಲ್ಸಗಳನ್ನ ಮೆಂಟರ್‌ಗಳಾಗಿ ನೀಡಿ, ಬ್ಯಾಚುಲರ್ಸಗಳನ್ನ ಪ್ರತಿ ಹಂತದಲ್ಲು ಮಾರ್ಗದರ್ಶನ ಮಾಡುವ ಕೆಲಸವನ್ನ ಈ ಕಾರ್ಯಕ್ರಮದಲ್ಲಿ ಮಾಡಲಾಯಿತು.

ಬ್ಯಾಚುಲರ್ಸಗಳ ಜೀವನವನ್ನ ಹಾಸ್ಯದ ಲೇಪನದೊಂದಿಗೆ ವಿಭಿನ್ನ ಟಾಸ್ಕುಗಳನ್ನ ನೀಡಿ ಅದನ್ನ ಮಾನಿಟರ್ ಮಾಡುವ ಜವಾಬ್ದಾರಿಯನ್ನ ಹೊತ್ತವರು ಕರುನಾಡಿನ ಕ್ರೇಜಿ ಸ್ಟಾರ್ ರವಿಚಂದ್ರನ್.ಪಡ್ಡೆಗಳ ಹಾಟ್ ಫೇವರೆಟ್ ರಚಿತಾರಾಮ್ ಹುಡುಗರು ಲಯ ತಪ್ಪಿದ್ದಾಗ ಕಿವಿಹಿಂಡುವ ಟೀಚರ್ ಆಗಿ ಕಾಣಿಸಿಕೊಂಡು ಶಿಸ್ತಿನ ಚಾಟಿಬೀಸಿ ಹುಡುಗರನ್ನ ಹದ್ದುಬಸ್ತಿನಲ್ಲಿ ಇಡುವ ಕೆಲಸವನ್ನ ಮಾಡಿದರು.ನಿರೂಪಕ ಅಕುಲ್ ಬಾಲಾಜಿ ನಿರೂಪಣೆಯ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸಿದರು.

ಪ್ರತಿಬಾರಿ ಬ್ಯಾಚುಲರ್ಸಗಳ ಸಾರ್ಮಥ್ಯವನ್ನ ಓರೆಗೆ ಹಚ್ಚಲು ಕೊಡುತ್ತಿದ್ದ ವಿಭಿನ್ನ ಟಾಸ್ಕುಗಳನ್ನ ಈ ಬಾರಿ ನಿರ್ವಹಿಸಲು ಆಯ್ದುಕೊಂಡಿದ್ದು ಮಲೇಷ್ಯವನ್ನ, ಸುಮಾರು 50 ಕ್ಕು ಹೆಚ್ಚು ತಂತ್ರಜ್ಞರು 10 ಜೋಡಿಗಳನ್ನ ಒಳಗೊಂಡ ದೊಡ್ಡ ತಂಡ ವಿದೇಶಿನೆಲದಲ್ಲಿ ಟಾಸ್ಕ್ ಒಂದನ್ನ ರೂಪಿಸಿ ಅದನ್ನ ಪೂರ್ಣಗೊಳಿಸುವ ಜವಾಬ್ದಾರಿಯನ್ನ ಬ್ಯಾಚುಲರ್ಸ್ ಮತ್ತು ಏಂಜಲ್ಸ್ ಗಳಿಗೆ ನೀಡಿ, ಇಡೀ ಸಂಚಿಕೆಯನ್ನ ಯಶಸ್ವಿಯಾಗಿ ಮುಗಿಸಿಬಂದ ಹೆಗ್ಗಳಿಕೆಯನ್ನ ಈ ಶೋ ಹೊಂದಿದೆ.
ಕಾರ್ಯಕ್ರಮ ಶುರುವಾದಾಗಿನಿಂದಲೂ ಒಂದಲ್ಲ ಒಂದು ವಿಶೇಷತೆಗಳೊಂದಿಗೆ ಸುದ್ದಿ ಮಾಡಿದ ಈ ರಿಯಾಲಿಟಿ ಶೋ, ವಿದೇಶಿ ನೆಲದಲ್ಲಿ ತನ್ನ ಸಂಚಿಕೆಯನ್ನ ಚಿತ್ರೀಕರಿಸಿದ ಮೊದಲ ಕನ್ನಡದ ವಾಹಿನಿ ಎಂಬ ಹೆಗ್ಗಳಿಕೆಯನ್ನ ಈ ರಿಯಾಲಿಟಿ ಶೋನ ಮೂಲಕ ಜೀ಼ ಕನ್ನಡ ತನ್ನ ಮುಡಿಗೆ ಏರಿಸಿಕೊಂಡಿತು.

ಜಾಹೀರಾತುಗಳು

ಬೇಕೆ ಬೇಕು ನಮಗು ಬೇಕು ಅಂತ ಸಿಂಗಲ್ಸ್ ಆಗಿ ವೇದಿಕೆಯನ್ನ ಹತ್ತಿದ ಪ್ರತಿ ಬ್ಯಾಚುಲರ್ಸ್ ಹುಡುಗರ ಜೀವನದಲ್ಲಿ ಹೆಣ್ಣೊಬ್ಬಳು ಪ್ರವೇಶ ಮಾಡಿದ್ರೆ ಏನೆಲ್ಲ ಆಗಬಹುದು ಎಂಬುದನ್ನ ಟಾಸ್ಕ್ ರೂಪದಲ್ಲಿ ನಿರ್ವಹಿಸಿ ಬ್ಯಾಚುಲರ್ಸಗಳು ಸೈ ಎನಿಸಿಕೊಂಡರು,ತಂದೆತಾಯಿಯ ಕನಸನ್ನ ಸಾಕಾರ ಮಾಡಲು ವೇದಿಕೆ ಹತ್ತಿದ ಅದೆಷ್ಟೂ ಹುಡುಗರ ಜೀವನದ ನೈಜತೆಯನ್ನ ಈ ಶೋ ಕನ್ನಡಿಗರ ಮುಂದೆ ತೆರೆದಿಟ್ಟಿತು,ಏಂಜಲ್ಸ್ ಗಳ ಮನಸ್ಸನ್ನ ಗೆಲ್ಲಲೂ ಬ್ಯಾಚುಲರ್ಸ ‍ ಹುಡುಗರು ಮಾಡಿದ ಟಾಸ್ಕ ಅವರು ತೆಗೆದುಕೊಂಡ ರಿಸ್ಕನ್ನ ಬರೀ ಏಂಜಲ್ಸ್ ಮೆಚ್ಚಿದ್ದು ಮಾತ್ರವಲ್ಲದೆ ಇಡೀ ಕರುನಾಡೆ ಮೆಚ್ಚುವಂತಾಯಿತು. ನಟನೆಯ ಮೂಲಕ ಹೆಸರು ಮಾಡಿದ್ದ ಬ್ಯಾಚುಲರ್ಸಗಳ ನೈಜ ಜೀವನವನ್ನ ಕಂಡ ಕರುನಾಡು ಸಾಮಾಜಿಕ ಜಾಲತಾಣಗಳಲ್ಲಿ ಅವರ ಪ್ಯಾನ್ ಪೇಜುಗಳನ್ನ ಶುರುಮಾಡಿಕೊಂಡು ಅವರನ್ನ ಬೆಂಬಲಿಸಲು ನಿಂತದ್ದು ಈಗ ಇತಿಹಾಸ. ಹೊಸ ಪ್ರಯೋಗವೆಂಬಂತೆ ಬಂದ ಈ ರಿಯಾಲಿಟಿ ಶೋ ಆರಂಭದಿಂದಲು ತನ್ನ ಸ್ಲಾಟ್ ಲೀಡರ್ ಪಟ್ಟ ಬಿಟ್ಟುಕೊಡದೆ ಮುನ್ನುಗಿ ಯಶಸ್ವಿಯಾಗಿ ಫಿನಾಲೆ ಹಂತವನ್ನ ತಲುಪಿದೆ.

ಸಿಂಗಲ್ ಆಗಿ ಬಂದ ಬ್ಯಾಚುಲರ್ ಜೋಡಿಯಾಗಿ ಶೋನಿಂದ ಹೊರಬಂದ ಘಟನೆಗೆ ಸಾಕ್ಷಿಯಾಯಿತು ಭರ್ಜರಿ ಬ್ಯಾಚುಲರ್ಸ ವೇದಿಕೆ ಸ್ಪರ್ಧಿಯಾಗಿ ಶೋನ ಪ್ರವೇಶ ಮಾಡಿದ 10 ಜನ ಯುವಕರ ಪೈಕಿ ಸ್ಫರ್ಧಿರ್ಯೋವ ಅಧೀಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಮುನ್ನುಡಿಯನ್ನ ಈ ವೇದಿಕೆಯಲ್ಲಿ ಬರೆಯಲಾಯಿತು.ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥಕ್ಕೆ ಜೀ಼ ಕನ್ನಡದ ಭರ್ಜರಿ ಬ್ಯಾಚುಲರ್ಸ್ ಗ್ರಾಂಡ್ ಫಿನಾಲೆ ವೇದಿಕೆ ಸಾಕ್ಷಿಯಾಯಿತು.ಆ ಸ್ಫರ್ಧಿಯಾರು ? ಅವರ ಕೈಹಿಡಿದ ಆ ಹುಡುಗಿಯಾರು ?ಎಂಬ ಪ್ರಶ್ನೆಗೆ ಉತ್ತರ ಗ್ರಾಂಡ್ ಫಿನಾಲೆ ಸಂಚಿಕೆಯಲ್ಲಿ ದೊರೆಯಲಿದೆ.

ಬ್ಯಾಚುಲರ್ಸ್ ಜೀವನದಲ್ಲಿ ಏನೆಲ್ಲ ಏಳುಬೀಳುಗಳನ್ನ ನೋಡಬಹುದೋ ಅವೆಲ್ಲವನ್ನ ಟಾಸ್ಕ ರೂಪದಲ್ಲಿ ಯಶಸ್ವಿಯಾಗಿ ಪೂರೈಸಿದ ಬ್ಯಾಚುರ‍್ಸ್ಗಳಲ್ಲಿ ಒಬ್ಬರಿಗೆ ಭರ್ಜರಿ ಬ್ಯಾಚುಲರ್ಸ್ ಸೀಸನ್-1 ರಪಟ್ಟ ದೊರೆಯಲ್ಲಿದ್ದು, ಈಗಾಗಲೇ ತಮ್ಮದೆ ಆದ ಅಭಿಮಾನಿ ಬಳಗ ಹೊಂದಿರುವ ಬ್ಯಾಚುಲರ್ಸ್ ಗಳಲ್ಲಿ ಯಾರಿಗೆ ಈ ಪಟ್ಟ ದೊರೆಯಲಿದೆ ಎಂಬ ಪ್ರಶ್ನೆಗೆ ಉತ್ತರ ಇದೇ ಭಾನುವಾರ ಸಂಜೆ 7 ಗಂಟೆಗೆ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗ್ರಾಂಡ್ ಫಿನಾಲೆ ಸಂಚಿಕೆ ನೀಡಲಿದೆ ತಪ್ಪದೇ ವೀಕ್ಷಿಸಿ.

Leave a Comment