ಜೀ ಪಿಚ್ಚರ್ ಗೆ 3ನೇ ವಾರ್ಷಿಕೋತ್ಸವದ ಶುಭಾಶಯ

ಜಾಹೀರಾತುಗಳು
Zee Picchar 3rd Anniversary
Zee Picchar 3rd Anniversary

ಜೀ ಪಿಚ್ಚರ್ , ಕನ್ನಡ ಪಿಚ್ಚರ್ ಪ್ರಪಂಚಕ್ಕೆ 3 ವರ್ಷದ ಹಿಂದೆ ಕಾಲಿಟ್ಟು ಇಂದು ತನ್ನ ಯಶಸ್ಸಿನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ವಾಹಿನಿ. ಕಿರುತೆರೆಯ ನಂಬರ್ 1 ಮನರಂಜನಾ ವಾಹಿನಿ ಜೀ ಕನ್ನಡದ ಭಾಗವಾಗಿರುವ ಜೀ ಪಿಚ್ಚರ್ 3ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ .

ಹಲವು ಪೈಪೋಟಿಗಳ ನಡುವೆ ಅತಿ ಕಡಿಮೆ ಅವಧಿಯಲ್ಲೇ ವೀಕ್ಷಕರಿಗೆ ಹತ್ತಿರವಾಗಿರುವ ವಾಹಿನಿ ವಿಭಿನ್ನ , ವಿಶಿಷ್ಟ ಸಿನಿಮಾಗಳ ಮೂಲಕ ಹಿಟ್ ದಿನದ ಫೀಲಿಂಗ್ ನೀಡುತ್ತಿದೆ ಎನ್ನುವುದು ಕನ್ನಡಿಗರ ಅಭಿಪ್ರಾಯವಾಗಿದೆ .

ದಿನದಿಂದ ದಿನಕ್ಕೆ ಅತಿಹೆಚ್ಚು ಜಿಆರ್ ಪಿ ಗಳಿಸುತ್ತಿರುವ ಜೀ ಪಿಚ್ಚರ್ ನಂಬರ್ 1 ಸ್ಥಾನದತ್ತ ಹೆಜ್ಜೆ ಇಡುತ್ತಿದೆ. ಕೇವಲ ಸಿನಿಮಾಗಷ್ಟೇ ಸೀಮಿತವಾಗಿರದ ವಾಹಿನಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನೇತೃತ್ವದಲ್ಲಿ ನಡೆದ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಮೆಂಟ್ ನೇರ ಪ್ರಸಾರ ಮಾಡುವುದರೊಂದಿಗೆ ಚಿತ್ರರಂಗದೊಂದಿಗೆ ತನಗಿರುವ ನಂಟನ್ನು ಗಟ್ಟಿಗೊಳಿಸಿಕೊಂಡಿದೆ .

ಜಾಹೀರಾತುಗಳು

ಅಷ್ಟೇ ಅಲ್ಲದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮುಖಾಂತರ ಸಿನಿರಸಿಕರ ಗಮನ ಸೆಳೆಯುತ್ತಿದೆ ಮತ್ತು ಅತ್ಯುತ್ತಮ ಗುಣಮಟ್ಟದ ಡಬ್ಬಿಂಗ್ ಸಿನಿಮಾಗಳನ್ನು ಪ್ರಸಾರ ಮಾಡುತ್ತಲೇ ನೋಡುಗರಿಗೆ ಹಿಟ್ ದಿನದ ಫೀಲಿಂಗ್ ನೀಡುವಲ್ಲಿ ಯಶಸ್ವಿಯಾಗಿದೆ.

ಈ ಅಭೂತಪೂರ್ವ ಯಶಸ್ಸು ನೀಡಿರುವ ಕನ್ನಡಿಗರು ಸಿನಿಮಾ ಪ್ರೇಮಿಗಳಿಗೆ ಈ ಮೂಲಕ ಧನ್ಯವಾದ ತಿಳಿಸುತ್ತಿದ್ದು ಇದೀಗ ವಾಹಿನಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು ಸನ್ ಡೈರೆಕ್ಟ್ ಎಲ್ ಸಿ ಎನ್ ನಂಬರ್ 280 ನಲ್ಲೂ ಲಭ್ಯವಿದೆ. ಇನ್ನು ಮುಂದೆ ಅದೇ ಪ್ರೀತಿ , ವಿಶ್ವಾಸದಿಂದ ಹಾರೈಸುತ್ತಾರೆ ಎಂದು ವಾಹಿನಿಯ ಆಶಯ ವ್ಯಕ್ತಪಡಿಸಿದೆ. ವೀಕ್ಷಕರ ಪರವಾಗಿ ಜೀ ಪಿಚ್ಚರ್ ಗೆ 3ನೇ ವಾರ್ಷಿಕೋತ್ಸವ ಶುಭಾಶಯಗಳು.

Leave a Comment