ಸ್ಟಾರ್ ಸುವರ್ಣ

ಸ್ಟಾರ್ ಸುವರ್ಣ ಅರ್ಪಿಸುತ್ತಿದೆ ದೇಶ ಗೆದ್ದ ಗೃಹಿಣಿಯ ಕಥೆ “ಅನುಪಮ” | ಮಾರ್ಚ್ 6 ರಿಂದ ಮಧ್ಯಾಹ್ನ 1 ಗಂಟೆಗೆ

ಜಾಹೀರಾತುಗಳು
Anupama Serial Star Suvarna
Anupama Serial Star Suvarna

ಕನ್ನಡದ ಜನಪ್ರಿಯ ವಾಹಿನಿ ‘ಸ್ಟಾರ್ ಸುವರ್ಣ’ ಪ್ರೇಕ್ಷಕರಿಗಾಗಿ ಹೊತ್ತು ತರ್ತಿದೆ ಸಾಮಾನ್ಯ ಗೃಹಿಣಿಯ ಅಸಾಮಾನ್ಯ ಕಥೆ “ಅನುಪಮ”. ವಿಭಿನ್ನ ಕಥಾ ಹಂದರವುಳ್ಳ ನಮ್ಮಲಚ್ಚಿ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ಜೇನುಗೂಡು, ಕಥೆಯೊಂದು ಶುರುವಾಗಿದೆ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡಿರುವ ಸ್ಟಾರ್ ಸುವರ್ಣ ಇದೀಗ ಇಡೀ ದೇಶದ ಹೃದಯ ಗೆದ್ದ ಗೃಹಿಣಿಯ ಕಥೆಯನ್ನು ಹೇಳಲು ಮುಂದಾಗಿದೆ.

ಮಧ್ಯ ವಯಸ್ಕ ಮಹಿಳೆ ಅನುಪಮ. ಸದಾ ಮನೆಯವರ ಬಗ್ಗೆ ಕಾಳಜಿ, ಕುಟುಂಬದವರ ಇಷ್ಟ-ಕಷ್ಟ, ಬೇಕು-ಬೇಡಗಳನ್ನು ಅರ್ಥ ಮಾಡಿಕೊಂಡು ಮನೆಯ ಗೃಹಲಕ್ಷ್ಮಿಯಂತಿರುವ ಈಕೆಗೆ ಮದುವೆಯಾಗಿ ಎರಡು ದಶಕಗಳ ಮೇಲಾಗಿದೆ. ತಾಯಿ, ಹೆಂಡತಿ. ಮಗಳು, ಸೊಸೆ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸುವ ಈಕೆಗೆ 3 ಮಕ್ಕಳು, ಗಂಡನಿಗೆ ಈಕೆ ಓದಿಲ್ಲ, ಹಳೆಯ ಕಾಲದವಳು ಎಂಬ ತಾತ್ಸಾರ. ಮನೆಯಲ್ಲಿ ಏನೇ ತಪ್ಪುಗಳಾದರು ಅತ್ತೆ ದೂಷಿಸುವುದು ಈಕೆಯನ್ನೇ. ಶರವೇಗದಲ್ಲಿ ಬದಲಾಗುತ್ತಿರುವ ಕಾಲ, ಆಧುನಿಕ ಯುಗಕ್ಕೆ ಹೊಂದಿಕೊಂಡಿರುವ ಕುಟುಂಬದಲ್ಲಿ ಅನುಪಮ ಯಾವ ರೀತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡು, ಸಂತೋಷ ಕಂಡುಕೊಳ್ಳುತ್ತಾಳೆ ಎಂಬುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಜಾಹೀರಾತುಗಳು

ದೇಶದ ನಂ.1 ಧಾರವಾಹಿ ಎಂಬ ಪಟ್ಟವನ್ನು ಅಲಂಕರಿಸಿರುವ “ಅನುಪಮ” ಇದೀಗ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕನ್ನಡದಲ್ಲಿ ಬರ್ತಿರೋದಕ್ಕೆ ಪ್ರೇಕ್ಷಕರು ಖುಷಿ ಪಡುತ್ತಿದ್ದಾರೆ. ಹೊಚ್ಚ ಹೊಸ ಧಾರಾವಾಹಿ “ಅನುಪಮ” ನಿಮ್ಮ ಮಧ್ಯಾಹ್ನದ ಮನರಂಜನೆಯಲ್ಲಿ ಇದೇ ಮಾರ್ಚ್ 6 ರಿಂದ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

ಬದಲಾದ ಸಮಯದಲ್ಲಿ ಬರ್ತಿದೆ “ಅನುರಾಗ ಅರಳಿತು” ಮಾರ್ಚ್ 6 ರಿಂದ ಮಧ್ಯಾಹ್ನ 2 ಗಂಟೆಗೆ.

Recent Posts

ಜೀ ಕನ್ನಡದಲ್ಲಿ ‘ಬ್ರಹ್ಮಗಂಟು’ ಇದೇ ಜೂನ್ 17 ರಿಂದ ರಾತ್ರಿ 10 ಗಂಟೆಗೆ! ಋಣಕೂ ಗುಣಕೂ ಅಂದದ ನಂಟು!

ಧಾರಾವಾಹಿ ಬ್ರಹ್ಮಗಂಟು - ಜೀ ಕನ್ನಡ ಚಾನೆಲ್ ಹೊಸತನಕ್ಕೆ ಇನ್ನೊಂದು ಹೆಸರು ಜೀ಼ ಕನ್ನಡ. ಈಗ ತನ್ನ ವೀಕ್ಷಕರಿಗಾಗಿ ಹೊಸ…

7 hours ago

ಬರ್ತಿದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ “ಯುವ” ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶ… ಇದೇ ಭಾನುವಾರ ರಾತ್ರಿ 7 ಗಂಟೆಗೆ

ಸ್ಟಾರ್ ಸುವರ್ಣ - ಯುವ ಕನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ…

1 day ago

ದುಷ್ಟ ಶಕ್ತಿಗಳ ಸಂಹಾರದ ಪಯಣದಲ್ಲಿ ಬಾಲ್ಯದಿಂದ ತಾರುಣ್ಯದ ಕಡೆಗೆ ರೇಣುಕಾ-ಯಲ್ಲಮ್ಮ….ಇದೇ ಸೋಮವಾರದಿಂದ ರಾತ್ರಿ 8.30 ಕ್ಕೆ..!

ಸ್ಟಾರ್ ಸುವರ್ಣ - ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ,…

3 weeks ago

ಬರ್ತಿದೆ ಬ್ರ್ಯಾಂಡ್ ನ್ಯೂ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’.. ಮೇ 19 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ…!

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಗಳ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ 'Huu ಅಂತೀಯಾ...Uhuu…

1 month ago

ಶೀಮದ್‌ ರಾಮಾಯಣ , ಉದಯ ಟಿವಿಯಲ್ಲಿ ಮೇ 20 ರಿಂದ ಸೋಮವಾರ-ಶನಿವಾರ ಸಂಜೆ 6 ಗಂಟೆಗೆ

ಉದಯ ಟಿವಿ ಶೀಮದ್‌ ರಾಮಾಯಣ ಕನ್ನಡ ಟೆಲಿವಿಷನ್‌ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ…

1 month ago

ಸುವರ್ಣ ಗೃಹಮಂತ್ರಿ ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ

ಸ್ಟಾರ್ ಸುವರ್ಣ - ಸುವರ್ಣ ಗೃಹಮಂತ್ರಿ ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು…

1 month ago