ಮನೋರಂಜನೆಯ ಮಾತು ಬಂದಾಗಲೆಲ್ಲ ಎಲ್ಲಾ ಮನೆಯ ಟಿವಿಯು ಟ್ಯೂನ್ ಆಗೋದೇ ಜೀ಼ ಕನ್ನಡಕ್ಕೆ. ಕರುನಾಡನ್ನ ದಶಕಗಳಿಂದ ಮನೋರಂಜಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿ, ಮನೋರಂಜನೆಯನ್ನ ಬಯಸಿ ಬರುವ ವೀಕ್ಷಕರನ್ನ ಎಂದು ನಿರಾಸೆ ಮಾಡಿಲ್ಲ. ಈ ಮಾತಿಗೆ ಪೂರಕವೆಂಬಂತೆ ಇದೇ ಮಾರ್ಚ್ 18ರ ಸೋಮವಾರದಿಂದ ಮಹಾಸೋಮವಾರದ,ಮಹಾಮನೋರಂಜನೆಯನ್ನ ಕರುನಾಡಿಗೆ ನೀಡಲು ಸಿದ್ದವಾಗಿದೆ.
ಕಳೆದ ಒಂದೇ ವರ್ಷ 3 ಸೀರಿಯಲ್ಲುಗಳನ್ನ ಲಾಂಚ್ ಮಾಡಿ ಅದನ್ನ ಹಿಟ್ ಲೀಸ್ಟಿಗೆ ಸೇರಿಸಿರುವ ಜೀ಼ ಕನ್ನಡ ವಾಹಿನಿ, ಈ ವರ್ಷದ ಮೊದಲ ಭಾಗದಲ್ಲೆ ಮತ್ತೊಂದು ಹೊಸ ಕಥೆಯನ್ನ ಲಾಂಚ್ ಮಾಡಲು ತಯಾರಿ ನಡೆಸಿಕೊಂಡಿದೆ.ನೀಲ ಪ್ರೊಡಕ್ಷನ್ ಅವರ ನಿರ್ಮಾಣದ ರೇಣುಕ ಪ್ರಸಾದ್ ನಿರ್ದೇಶನವಿರುವ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯು ಹೊಸ ಕಥಾ ಹಂದರದೊಂದಿಗೆ ತೆರೆಗೆ ಬರಲ್ಲಿದ್ದು ,ಮನೆಯಲ್ಲಿ ಸಿರಿವಂತಿಕೆಯ ತುಂಬಿದ್ದರು ಅಪ್ಪನ ಪ್ರೀತಿಗಾಗಿ ಹಾತೊರೆಯುವ ಮಗಳು ಒಂದೆಡೆಯಾದರೆ ಮನೆಯಲ್ಲಿ ಬಡತನವಿದ್ದರು ಪ್ರೀತಿಯಲ್ಲಿ ಶ್ರೀಮಂತರಾಗಿರುವ ಮಧ್ಯಮ ವರ್ಗದ ಕುಟುಂಬದ ಕಥೆಯ ಜೊತೆ ಎರಡು ನವಿರಾದ ಹೃದಯಗಳ ನಡುವಿನ ಕಥೆಯನ್ನ ಈ ಮೂಲಕ ಹೇಳಲು ಹೊರಟಿದೆ.
ಹಿರಿಯ ಕಲಾವಿದರಾದ ಮೋಹನ್ ಮತ್ತು ಬಾಲರಾಜ್ ಇದೇ ಮೊದಲು ಬಾರಿಗೆ ಒಟ್ಟಾಗಿ ಪರದೆಯ ಮೇಲೇ ಕಾಣಿಸಿಕೊಳ್ಳಲ್ಲಿದ್ದು.ಇವರೊಂದಿಗೆ ಕನ್ನಡದ ಹಿರಿತೆರೆ ಮತ್ತು ಕಿರುತೆರೆಯ ಖ್ಯಾತ ಕಲಾವಿದೆಯೆರಾದ ಅಪೂರ್ವ ಮತ್ತು ಸ್ನೇಹ ಇವರು ಜೊತೆ ಯುವ ಕಲಾವಿದರು ಈ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲ್ಲಿದ್ದು ಮುಖ್ಯ ಭೂಮಿಕೆಯಲ್ಲಿ ಯುವ ನಟನಟಿಯಾರಾದ ಅಮೋಘ ಮತ್ತು ಆಸಿಯಾ ಫಿರೋದ ಶ್ರಾವಣಿ ಸುಬ್ರಹ್ಮಣ್ಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರಾವಣಿ ಸುಬ್ರಹ್ಮಣ್ಯರ ಈ ಹೊಸ ಕಥೆಯನ್ನ ಇದೇ ಮಾರ್ಚ್ 18 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ನಿಮ್ಮನೆಚ್ಚಿನ ಜೀ಼ ಕನ್ನಡದಲ್ಲಿ ನೋಡಬಹುದಾಗಿದೆ.
ಈ ಹೊಸ ಕಥೆಯ ನಡುವೆ ಕರುನಾಡಿನ ವೀಕ್ಷಕರನ್ನ ವರ್ಷಗಳ ಕಾಲ ಮನೋರಂಜಿಸಿದ್ದ ಜೀ಼ ಕನ್ನಡ ವಾಹಿನಿಯ ಎರಡು ಅಮೋಘ ಧಾರಾವಾಹಿಗಳಾದ ಪಾರು ಮತ್ತು ಹಿಟ್ಲರ್ ಕಲ್ಯಾಣ ಶುಭವಿದಾಯವನ್ನ ಹೇಳುವ ಮುಖಾಂತರ, ಮತ್ತೊಂದು ಮನೋರಂಜನೆ ಮಹಾಪರ್ವಕ್ಕೆ ನಾಂದಿ ಹಾಡಿದೆ.
ಈ ಎರಡು ಧಾರಾವಾಹಿಗಳು ಬಿಟ್ಟು ಹೋದ ಸ್ಥಳವನ್ನ ತುಂಬುವ ನಿಟ್ಟಿನಲ್ಲಿ ಈಗಾಗಲೇ ರಾತ್ರಿ 9 .೦೦ಕ್ಕೆ ನಿಮ್ಮನ್ನು ಮನೋರಂಜಿಸುತ್ತಿದ್ದ ಸತ್ಯ ಧಾರಾವಾಹಿಯು ಬದಲಾದ ಸಮಯವಾದ 6.೦0ಕ್ಕೆ ಪ್ರಸಾರವಾಗಲಿದ್ದು. 8.3೦ಕ್ಕೆ ಪ್ರಸಾರವಾಗುತ್ತಿದ್ದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಬದಲಾದ ಸಮಯವಾದ 6.3೦ಕ್ಕೆ ಪ್ರಸಾರವಾಗಲಿದೆ. ಇತ್ತೀಚೇಗಷ್ಟೆ ಪ್ರಸಾರ ಶುರುಮಾಡಿ ಜೀ಼ ಕನ್ನಡದ ನಂ.1 ಧಾರಾವಾಹಿ ಪಟ್ಟ ಅಲಂಕರಿಸಿರುವ ಲಕ್ಷ್ಮೀ ನಿವಾಸ ಧಾರಾವಾಹಿಯು, ಇನ್ನು ಮುಂದೆ ಪ್ರತಿದಿನ ರಾತ್ರಿ 8 ರಿಂದ 9 ಗಂಟೆಯ ತನಕದ ಸುದೀರ್ಘ ಸಂಚಿಕೆಯನ್ನ ಪ್ರಸಾರಮಾಡಲಿದೆ. ಈ ಎಲ್ಲಾ ಬದಲಾವಣೆಯ ನಡುವೆ ಸಮಯ ಬದಲಾದರು ಮನೋರಂಜನೆ ಬದಲಾಗದು ಎಂದ ಸಂದೇಶವನ್ನ ವಾಹಿನಿ ಈ ಮೂಲಕ ನೀಡಿದೆ.