ಉದಯ ಟಿವಿ

ಆನಂದರಾಗ – ವಿನೂತನ ಪ್ರೇಮರಾಗ ಉದಯಟಿವಿಯಲ್ಲಿ ಮಾರ್ಚ್‌ ೧೩ ರಿಂದ ಸೋಮವಾರದಿಂದ ಶನಿವಾರ ರಾತ್ರಿ ೭.೩೦ಕ್ಕೆ

ಜಾಹೀರಾತುಗಳು
Ananda Raga Serial Udaya TV
Ananda Raga Serial Udaya TV

ಪ್ರಸ್ತುತ ದಿನಗಳಲ್ಲಿ ಕಪ್ಪು-ಬಿಳುಪಿನ ಹೆಣ್ಣಿನ ಕಥೆಗಳು ಕಿರುತೆರೆಯಲ್ಲಿ ಸಹಜವಾಗಿದೆ. ಆದರೆ ಈಗ ಕಿರುತೆರೆ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕಪ್ಪು ಹುಡುಗನ ಮನಸ್ಥಿತಿ, ಅವನಿಗಾಗುವ ಅವಮಾನ, ಖಿನ್ನತೆಯಿಂದ ಹೊರಬರುವ ಕಥೆ ತರಲಿದೆ ಉದಯ ಟಿವಿ. ದಪ್ಪ ದೇಹ ಮತ್ತು ಕಪ್ಪು ಮೈಬಣ್ಣ ಹೊಂದಿರುವ ಕಥಾನಾಯಕ ತನ್ನ ಮುಗ್ದತೆಯಿಂದ ಜನರ ಮನಸ್ಸನ್ನು ಗೆದ್ದು ವೀಕ್ಷಕರ ಮನೆ ಮಗನಾಗಲು ಬರುತ್ತಿದ್ದಾನೆ. ಇನ್ನೊಂದೆಡೆ ಕಥಾನಾಯಕಿ ಅಪ್ಪನ ಗುರಿಯನ್ನು ತನ್ನ ಗುರಿಯನ್ನಾಗಿಸಿಕೊಂಡು ಐ.ಪಿ.ಎಸ್‌ ಆಗುವ ಕನಸ್ಸನ್ನು ಹೊತ್ತವಳು. ತನ್ನ ಮುಗುಳುನಗೆಯಿಂದಲೇ ಎಲ್ಲಾ ಸಮಸ್ಯೆ ಬಗೆಹರಿಸುವ ಚತುರೆ ಇವಳು. ಈ ಚಲುವೆಗೂ ಆ ಕಪ್ಪು ಚಲುವನಿಗೂ ಇರುವ ಋಣಾನುಬಂಧದ ಕಥೆಯನ್ನು ಹೇಳಲು ಉದಯ ಟಿವಿ ಮಾರ್ಚ್‌13ಕ್ಕೆ ಸಜ್ಜಾಗಿದೆ.

ಕಪ್ಪು ಮೈಬಣ್ಣ ಹಾಗು ದಪ್ಪ ದೇಹ ಹೊಂದಿರುವ ಕಥಾನಾಯಕ ಹೆಸರಿಗೆ ಮಾತ್ರ ಚೆಲುವರಾಜ್. ಇವನು ರೆಬಲ್‌ ಸ್ಟಾರ್‌ ಅಂಬರೀಷ್‌ ರವರ ಅಪ್ಪಟ ಅಭಿಮಾನಿ. ಮುಗ್ಧತೆ 100%, ವಿದ್ಯೆ 0% ಆದರೆ ಇವನು ನೀಡುವ ನಗುವಿನ ಕಚಗುಳಿ 200%. ಹೀಗಿರುವ ಚೆಲುವರಾಜ ಅನುಭವಿಸಿರುವ ಅವಮಾನಕ್ಕೆ ಲೆಕ್ಕವಿಲ್ಲ. ಒಂದಲ್ಲ ಒಂದು ದಿನ ಅಂಬರೀಷ್‌ ಅವರ ರೀತಿ ತಾನೂ ಹೀರೊ ಆಗಬಲ್ಲೆ ಎಂದು ಕನಸು ಕಂಡಿರುವಾತ. ಚೆಲುವನ ತಾಯಿ ವಸುಂಧರ. ಇವಳಿಗೆ ತನ್ನ ಮಗನ ಮೇಲೆ ತುಂಬಾ ಪ್ರೀತಿ. ಮಗನಿಗೆ ವಿದ್ಯೆ ಕಲಿಸಲು ಹರಸಾಹಸ ವೀಫಲವಾಗಿದ್ದರೂ ಸಮಾಜದಲ್ಲಿ ಮಗನಿಗೆ ಉತ್ತಮ ಸ್ಥಾನ ಕೊಡಿಸಲು ಪಣ ತೊಟ್ಟಿರುವ ಹೆಂಗರುಳು.

Ananda Raga Serial Udaya TV

ಇನ್ನು ಕಥಾನಾಯಕಿ ದುರ್ಗಾ, ಪರಮೇಶ್ವರಿಯಷ್ಟೇ ಸುಂದರಿ ಮತ್ತು ಧೈರ್ಯವಂತೆ. ಅಪ್ಪ-ಅಮ್ಮನ ಮುದ್ದಿನ ಮಗಳು. ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ ಎಂಬ ನಂಬಿಕೆ ದುರ್ಗಾಳದ್ದು. ತನ್ನ ತಂಗಿ ಭಾವನಾಳ ಭಾವನೆಗಳಿಗೆ ಮಾತು ಇವಳದ್ದೆ. ಅಪ್ಪನ ಕನಸಿನಂತೆ ಐ.ಪಿ.ಎಸ್‌ ಆಗೋದೆ ಇವಳ ಗುರಿ. ದುರ್ಗಾ ಮತ್ತು ಚೆಲುವನ ನಡುವೆ ಅರಳುವ ವಿಭಿನ್ನವಾದ ಪ್ರೇಮರಾಗವೇ ಆನಂದರಾಗ.

ಜಾಹೀರಾತುಗಳು

ವಿನೂತನ ಪ್ರೇಮರಾಗದಲ್ಲಿ ದುರ್ಗಾಳಾಗಿ ದೀಪಾ ಹಿರೇಮಠ್‌ ಹಾಗು ಚೆಲುವರಾಜ ಆಗಿ ರಂಗಭೂಮಿ ಮಂಜುರವರು ಆನಂದರಾಗದ ಘಮ ಬೀರಲಿದ್ದಾರೆ. ಕಥಾನಾಯಕಿಯ ತಂದೆಯಾಗಿ ಖ್ಯಾತ ಕಳನಾಯಕ ಕೀರ್ತಿರಾಜ್‌ ಪಾತ್ರವಹಿಸಿದರೆ, ತಾಯಿಯಾಗಿ ಪ್ರತಿಭಾನ್ವಿತ ನಟಿ ಉಷಾ ಭಂಡಾರಿಯವರು ಕಾಣಿಸಿಕೊಳ್ಳಲಿದ್ದಾರೆ. ಕಥಾನಾಯಕನ ತಾಯಿಯಾಗಿ‌ ಹೆಸರಾಂತ ನಟಿ ವೀಣಾ ಸುಂದರ್ ನಟಿಸುತ್ತಿದ್ದಾರೆ ಹಾಗೂ ಮತ್ತಷ್ಟು ನುರಿತ ಕಲಾವಿದರ ಬಳಗ ಈ ತಂಡದಲ್ಲಿದೆ. ಆನಂದರಾಗದ ನಿರ್ಮಾಣದ ಹೊಣೆಯನ್ನು ವಿಷನ್‌ ಟೈಮ್ಸ್‌ ನಿಭಾಯಿಸುತ್ತಿದೆ. ಎಸ್.ಗೋವಿಂದ್‌ರವರು ನಿರ್ದೇಶನದ ಹೊಣೆ ಹೊತ್ತಿದ್ದಾರೆ ನಿಪುಣ ತಂತ್ರಜ್ಞರ ಕೈಚಳಕ ಈ ಧಾರಾವಾಹಿಗೆ ಮತ್ತಷ್ಡು ಸಹಕಾರಿಯಾಗಲಿದೆ.

ಹಲವಾರು ಅತ್ಯುತ್ತಮ ಧಾರಾವಾಹಿಗಳನ್ನು ವೀಕ್ಷಕರಿಗೆ ಉಣಬಡಿಸಿದ ಉದಯ ಟಿವಿಯಲ್ಲಿ ಇದೇ ಮಾರ್ಚ್‌ 13ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 7:30 ಕ್ಕೆ “ಆನಂದರಾಗ” ಧಾರಾವಾಹಿ ಪ್ರಸಾರವಾಗಲಿದೆ.

Recent Posts

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

2 days ago

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…

2 days ago

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

2 weeks ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

3 weeks ago

ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯಲ್ಲಿ ‘ವರಲಕ್ಷ್ಮಿ ಕಲ್ಯಾಣ’ , ಮಹಾ ತಿರುವುಗಳುಳ್ಳ ಸಂಚಿಕೆಗಳು ಇದೇ ಸೋಮ-ಶನಿ ಸಂಜೆ 6.30 ಕ್ಕೆ.

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯು…

3 weeks ago

ಶ್ರೀ ಬ್ರಾಹ್ಮೀ ಹೊಸ ಕಥೆಯ ಶ್ರಾವಣಿ ಸುಬ್ರಮಣ್ಯ ಜೀ಼ ಕನ್ನಡದಲ್ಲಿ ಶುಭಾರಂಭ ಮಾರ್ಚ್‌ 18ರಿಂದ ಮಹಾಮನೋರಂಜನೆಗೆ ಮುನ್ನುಡಿ

ಮನೋರಂಜನೆಯ ಮಾತು ಬಂದಾಗಲೆಲ್ಲ ಎಲ್ಲಾ ಮನೆಯ ಟಿವಿಯು ಟ್ಯೂನ್‌ ಆಗೋದೇ ಜೀ಼ ಕನ್ನಡಕ್ಕೆ. ಕರುನಾಡನ್ನ ದಶಕಗಳಿಂದ ಮನೋರಂಜಿಸುತ್ತ ಬಂದಿರುವ ಜೀ಼…

1 month ago