“ಮಾಸ್ಟರ್” 2021 ರ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದಾರೆ. ಈ ಚಲನ ಚಿತ್ರಕ್ಕೆ ರತ್ನ ಕುಮಾರ್, ಪೊನ್ ಪಾರ್ಥಿಬನ್ ಮತ್ತು ಕನಗರಾಜ್ ಅವರ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಈ ಚಿತ್ರವನ್ನು ಕ್ಸೇವಿಯರ್ ಬ್ರಿಟ್ಟೋ ಅವರ ಮೊದಲ ನಿರ್ಮಾಣ ಸಂಸ್ಥೆಯಾದ XB ಫಿಲ್ಮ್ ಕ್ರಿಯೇಟರ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ಮುಖ್ಯಪಾತ್ರದಲ್ಲಿ ಮಾಳವಿಕ ಮೋಹನನ್, ಅರ್ಜುನ್ ದಾಸ್, ಆಂಡ್ರಿಯಾ ಜೆರೆಮಿಯಾ ಮತ್ತು ಶಾಂತನು ಭಾಗ್ಯರಾಜ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಲನಚಿತ್ರದಲ್ಲಿ ಜೆಡಿ (ವಿಜಯ್) ಮುಖ್ಯ ಕಥಾ ವಸ್ತುವಾಗಿದ್ದಾರೆ. ಜೆಡಿ ಒಬ್ಬ ಪ್ರೋಫೇಸರ್ ಹಾಗೆ ಕುಡುಕ. ೩ ತಿಂಗಳಿಗೆ ಜೈಲಿಗೆ ಹೋಗಿ ಬೋಧನಾ ಕೆಲಸವನ್ನು ಮಾಡುವ ಪ್ರಸಂಗಬರುತ್ತದೆ.ಆಗ ನಾಯಕ ಅಲ್ಲಿ ಹೋಗಿ ಏನು ಮಾಡುತ್ತಾನೆ? ಎಂಬುದೆ ಕಥೆ.ಈ ಎಲ್ಲ ಕಥೆಯ ಹಿಂದೆ ಭವಾನಿ (ಸೇತುಪತಿ)ಯ ಕುತಂತ್ರ ಇರುತ್ತದೆ. ಅವುಗಳಿಂದ ಜೆಡಿ ಹೇಗೆ ನೀಭಾಯಿಸುತ್ತಾನೆ ಎಂಬುದನ್ನು ಮಾಸ್ಟರ್ ನೋಡುವ ಮೂಲಕ ತಿಳಿದುಕೊಳ್ಳಬಹುದು.