ಪ್ರೇಕ್ಷಕರ ಮನರಂಜನೆಗಾಗಿ ಸದಾಕಾಲ ಹೊಸತನವನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ನವರಸ ನಾಯಕ ಜಗ್ಗೇಶ್ ಅಭಿನಯದ “ರಾಘವೇಂದ್ರ ಸ್ಟೋರ್ಸ್” ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ.
ರಾಘವೇಂದ್ರ ಸ್ಟೋರ್ಸ್ ಹೆಸರಿಗೆ ತಕ್ಕಂತೆ ಇದರಲ್ಲಿ ವಿವಿಧ ರೀತಿಯ ಪದಾರ್ಥಗಳನ್ನು ಹೊಂದಿದೆ. ಹಾಸ್ಯ, ತುಂಟತನ, ಶೃಂಗಾರ, ವೇದನೆ ಸೇರಿ ನವರಸಗಳ ಮಿಶ್ರಣವಿಲ್ಲಿದೆ. ತಂದೆ ಗುಂಡ ಭಟ್ಟರ ರಾಘವೇಂದ್ರ ಸ್ಟೋರ್ಸ್ ನಲ್ಲಿ ಅಡುಗೆ ಭಟ್ಟ ಕಂ ಸಪ್ಲೆಯರ್ ಆಗಿರುವ ಬ್ರಹ್ಮಚಾರಿ ಹಯವದನನ ಮದುವೆಯ ಕಥೆಯಿದು. ಅಡುಗೆಯನ್ನು ಉದ್ಯೋಗವಾಗಿಸಿಕೊಂಡಿರುವವರಿಗೆ ಕಾಡುವ ಮದುವೆಯ ಸಮಸ್ಯೆಯ ಎಳೆಯನ್ನೊಳಗೊಂಡ ಈ ಸಿನಿಮಾವು ನೋಡುಗರಿಗೆ ಮನತಣಿಸುವಂತೆ ನಗಿಸುವ ಹಾಸ್ಯ ಭರಿತ ಸನ್ನಿವೇಶಗಳನ್ನು ಹೊಂದಿದೆ.
ಇನ್ನು ಈ ಸಿನಿಮಾದಲ್ಲಿ ಸವರಸ ನಾಯಕ ಜಗ್ಗೇಶ್ ಸೇರಿದಂತೆ ಶ್ವೇತಾ ಶ್ರೀವಾತ್ಸವ್, ರವಿಶಂಕರ್, ಅಚ್ಯುತ್ ಕುಮಾರ್, ದತ್ತಣ್ಣ, ಮಿತ್ರ ಸೇರಿದಂತೆ ಇನ್ನು ಅನೇಕ ಕಲಾವಿದರು ನಟಿಸಿದ್ದಾರೆ. ಅಷ್ಟೇ ಅಲ್ಲದೆ ಈ ವರ್ಷದ ಬೆಸ್ಟ್ ಕಾಮಿಡಿ ಸಿನಿಮಾ ಇದಾಗಿದೆ. ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಂಡಿರುವ ಹೊಂಬಾಳೆ ಫಿಲಂಸ್ ನಿರ್ಮಿಸಿರುವ ‘ರಾಘವೇಂದ್ರ ಸ್ಟೋರ್ಸ್’ ಸಿನಿಮಾವು ಇದೇ ಮೊದಲಬಾರಿಗೆ ಕಿರುತೆರೆಯ ಮೂಲಕ ನಿಮ್ಮ ಮನೆಯಂಗಳಕ್ಕೆ ಬರಲಿದೆ.
ಕಾಮಿಡಿ ಡೈಲಾಗ್ ಗಳಿಂದ ಕಚಗುಳಿಯನ್ನಿಡಲು ಜೊತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಸಾರಲು ಬರ್ತಿದೆ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ “ರಾಘವೇಂದ್ರ ಸ್ಟೋರ್ಸ್” ಇದೇ ಭಾನುವಾರ ಜುಲೈ 23 ರಂದು ಸಂಜೆ 6.30 ಕ್ಕೆ ನಿಮ್ಮ ನೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.