ಛೋಟಾ ಚಾಂಪಿಯನ್, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 7 – ಜೀ ಕನ್ನಡ ಚಾನೆಲ್ ಕಾರ್ಯಕ್ರಮಗಳು

ಜಾಹೀರಾತುಗಳು
DKD Season 7
Chota Champion and Dance Karnataka Dance Season 7

ವಿಭಿನ್ನ, ವಿಶಿಷ್ಟ ರಿಯಾಲಿಟಿ ಶೋಗಳ ಮೂಲಕ ಹೊಸ ಮೈಲಿಗಲ್ಲುಗಳನ್ನು ಸೃಷ್ಟಿಸುತ್ತಾ ಬಂದಿರುವ ಜ಼ೀ ಕನ್ನಡ ವಾಹಿನಿಯು ಕನ್ನಡ ಕಿರುತೆರೆ ಲೋಕದಲ್ಲಿ ಅಗ್ರಸ್ಥಾನಿಯಾಗಿ ನಿಂತಿದೆ. ಸಾಮಾಜಿಕ ಬದ್ಧತೆಯ ಜೊತೆಗೆ ಮನರಂಜನೆಯನ್ನು ಉಣ ಬಡಿಸುತ್ತಾ ಕನ್ನಡಿಗರ ಮೆಚ್ಚುಗೆ ಗಳಿಸಿದೆ.

ಇದೀಗ ಜ಼ೀ ಕನ್ನಡ ವಾಹಿನಿಯು ಈ ವೀಕೆಂಡ್‌ನಲ್ಲಿ ಎರಡು ಅದ್ಭುತ ಶೋಗಳನ್ನು ಒಟ್ಟಿಗೆ ಲಾಂಚ್‌ ಮಾಡಲು ಸಜ್ಜಾಗಿದೆ. ಮಕ್ಕಳ ಜೊತೆ ಮಕ್ಕಳಾಗಿ ಸಂಭ್ರಮಿಸುವ ʼಛೋಟಾ ಚಾಂಪಿಯನ್‌ʼ ಹಾಗು ಕುಣಿಯೋ ಕಾಲ್ಗಳಿಗೆ ಗೆಜ್ಜೆ ಕಟ್ಟೋ ಡ್ಯಾನ್ಸಿಂಗ್‌ ಶೋ ʼಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 7ʼ ಈ ವೀಕೆಂಡ್‌ನಿಂದ ನಿಮ್ಮ ಮನೆ-ಮನಗಳಿಗೆ ಲಗ್ಗೆ ಇಡಲಿವೆ. ಸಾಮಾನ್ಯರನ್ನು ಸೆಲೆಬ್ರೆಟಿ ಮಾಡುವ ಈ ಜೋಡಿ ಕಾರ್ಯಕ್ರಮಗಳು ಮನೆ ಮಂದಿಗೆಲ್ಲಾ ಡಬ್ಬಲ್ ಮನರಂಜನೆ ನೀಡಲಿವೆ.
ಮುದ್ದು ಮಕ್ಕಳ ಕ್ಯೂಟ್ನೆಸ್. ತರಲೆ-ತುಂಟಾಟಗಳನ್ನು ಸಂಭ್ರಮಿಸುವ ಛೋಟಾ ಚಾಂಪಿಯನ್‌ ಕಾರ್ಯಕ್ರಮವು ಇದೇ ಶನಿವಾರ ಹಾಗು ಭಾನುವಾರದಿಂದ ಸಂಜೆ 6ಕ್ಕೆ ಪ್ರಸಾರವಾಗಲಿದೆ. ಕುರಿ ಪ್ರತಾಪ್‌ ಹಾಗು ಶ್ವೇತಾ ಚೆಂಗಪ್ಪ ಈ ಕಾರ್ಯಕ್ರಮದ ನಿರೂಪಕರಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಮಸ್ತ್‌ ಮನರಂಜನೆ ನೀಡಲಿದ್ದಾರೆ. ಮಕ್ಕಳ ಲೋಕದಲ್ಲಿ ಮಕ್ಕಳಾಗಿ ಸಂಭ್ರಮಿಸಲು ನೀವು ರೆಡಿಯಾಗಿ.

ಜಾಹೀರಾತುಗಳು

ಇದರ ಜೊತೆಗೆ ಕುಣಿಯೋ ಕಾಲ್ಗಳಿಗೆ ಗೆಜ್ಜೆ ಕಟ್ಟಿ ಸಾಮಾನ್ಯ ಪ್ರತಿಭೆಯನ್ನ ಸೆಲೆಬ್ರೆಟಿ ಮಾಡುವ ಅತೀ ದೊಡ್ಡ ಡ್ಯಾನ್ಸ್‌ ಶೋ ʼಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌ 7ʼ ಇದೇ ಶನಿವಾರ ಹಾಗು ಭಾನುವಾರದಿಂದ ರಾತ್ರಿ 7:30 ಕ್ಕೆ ಪ್ರಸಾರವಾಗಲಿದೆ.
ಕರ್ನಾಟಕದ 31 ಜಿಲ್ಲೆಗಳಲ್ಲಿ ಲಕ್ಷಾಂತರ ಪ್ರತಿಭೆಗಳನ್ನು ಆಡಿಷನ್‌ ಮಾಡಿ ಅವರಲ್ಲಿ ದಿ ಬೆಸ್ಟ್‌ ಟ್ಯಾಲೆಂಟ್ ಗಳನ್ನ ಈ ಶೋ ಮೂಲಕ ಕರುನಾಡಿಗೆ ಪರಿಚಯಿಸಲು ಸಜ್ಜಾಗಿದೆ. ಈ ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್‌ ಅವರು ಮಹಾಗುರು ಸ್ಥಾನವನ್ನ ಅಲಂಕರಿಸಿದರೆ. ತೀರ್ಪುಗಾರರಾಗಿ ಕ್ರೇಜ಼ಿಕ್ವೀನ್‌ ರಕ್ಷಿತಾ, ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ, ಮ್ಯಾಜಿಕಲ್‌ ಕಂಪೋಸರ್‌ ಅರ್ಜುನ್‌ ಜನ್ಯ ಹಾಗು ನೃತ್ಯ ಸಂಯೋಜಕ ಚಿನ್ನಿ ಪ್ರಕಾಶ್‌ರವರು ಇರಲಿದ್ದಾರೆ. ಇನ್ನು ಅನುಶ್ರೀಯವರು ಈ ಶೋನ ನಿರೂಪಕಿಯಾಗಿ ಸ್ಪರ್ಧಿಗಳಿಗೆ ಜೋಷ್‌ ತುಂಬಲಿದ್ದಾರೆ.

ಈ ವೀಕೆಂಡ್‌ನಿಂದ ಸಂಜೆ 6ರಿಂದ 10:30 ರವರೆಗೆ ಮಕ್ಕಳ ಮುಗ್ಧತೆಯನ್ನು ಮುದ್ದಿಸುವ ʼಛೋಟಾ ಚಾಂಪಿಯನ್ʼ ಕುಳಿತಲ್ಲೇ ನಿಮ್ಮನ್ನು ಕುಣಿಸುವ ʼDKD ಸೀಸನ್‌ 7ʼ ಹಾಗು ಸಾಧಕರ ಜೀವನವನ್ನ ಸಂಭ್ರಮಿಸುವ ʼವೀಕೆಂಡ್‌ ವಿಥ್‌ ರಮೇಶ್‌ ಸೀಸನ್‌ 5ʼ ನಿಮಗೆ ಅನ್‌ಲಿಮಿಟೆಡ್‌ ಮನರಂಜನೆ ನೀಡಲಿವೆ.

Recent Posts

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

3 hours ago

ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯಲ್ಲಿ ‘ವರಲಕ್ಷ್ಮಿ ಕಲ್ಯಾಣ’ , ಮಹಾ ತಿರುವುಗಳುಳ್ಳ ಸಂಚಿಕೆಗಳು ಇದೇ ಸೋಮ-ಶನಿ ಸಂಜೆ 6.30 ಕ್ಕೆ.

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯು…

3 days ago

ಶ್ರೀ ಬ್ರಾಹ್ಮೀ ಹೊಸ ಕಥೆಯ ಶ್ರಾವಣಿ ಸುಬ್ರಮಣ್ಯ ಜೀ಼ ಕನ್ನಡದಲ್ಲಿ ಶುಭಾರಂಭ ಮಾರ್ಚ್‌ 18ರಿಂದ ಮಹಾಮನೋರಂಜನೆಗೆ ಮುನ್ನುಡಿ

ಮನೋರಂಜನೆಯ ಮಾತು ಬಂದಾಗಲೆಲ್ಲ ಎಲ್ಲಾ ಮನೆಯ ಟಿವಿಯು ಟ್ಯೂನ್‌ ಆಗೋದೇ ಜೀ಼ ಕನ್ನಡಕ್ಕೆ. ಕರುನಾಡನ್ನ ದಶಕಗಳಿಂದ ಮನೋರಂಜಿಸುತ್ತ ಬಂದಿರುವ ಜೀ಼…

3 weeks ago

ಸೂರ್ಯವಂಶ – ಧಾರಾವಾಹಿ ಮಾರ್ಚ್ 11 ರಿಂದ ಸೋಮ-ಶನಿವಾರ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಉದಯ ಟಿವಿ - ಸೂರ್ಯವಂಶ ಕನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ…

4 weeks ago

ನಾರಿ ಕುಲಕ್ಕೆ ನಮಿಸಿದ ಜೀ಼ ಸ್ತ್ರೀ ಅವಾರ್ಡ್ – ಜೀ ಕನ್ನಡ ಚಾನೆಲ್

ಜೀ ಕನ್ನಡ ಚಾನೆಲ್ - ನಾರಿ ಕುಲಕ್ಕೆ ನಮಿಸಿದ ಜೀ಼ ಸ್ತ್ರೀ ಅವಾರ್ಡ್ ಹೆಮ್ಮೆಯ ಕನ್ನಡಿಗ, ಜೀ಼ ಕುಟುಂಬದಂತಹ ಪ್ರತಿಷ್ಟಿತ…

1 month ago

ಲಕ್ಷ್ಮಿ ಟಿಫನ್ ರೂಮ್ ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಕನಸುಗಳನ್ನು ಹೊತ್ತ ವರಲಕ್ಷ್ಮಿಯ ಕಥೆ , ಇದೇ ಸೋಮವಾರದಿಂದ ಸಂಜೆ 6.30 ಕ್ಕೆ…!

ಸ್ಟಾರ್ ಸುವರ್ಣ ಧಾರಾವಾಹಿ ಲಕ್ಷ್ಮಿ ಟಿಫನ್ ರೂಮ್ ಹೊಸ ಅಲೆಯ ವಿನೂತನ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ…

1 month ago