ನೀನಾದೆ ನಾ – ಸ್ಟಾರ್ ಸುವರ್ಣ ಪ್ರಸ್ತುತ ಪಡಿಸುತ್ತಿದೆ ಹೊಚ್ಚ ಹೊಸ ಧಾರಾವಾಹಿ ಇದೇ ಮೇ 16 ಮಂಗಳವಾರದಿಂದ ರಾತ್ರಿ 9.30 ಕ್ಕೆ..!

ಜಾಹೀರಾತುಗಳು
Neenade Naa Serial
Neenade Na Serial Suvarna

ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಹೊಸತನದೊಂದಿಗೆ ವಿಭಿನ್ನ ಕಥಾ ಹಂದರವುಳ್ಳ ಧಾರಾವಾಹಿಗಳನ್ನು ನೀಡುತ್ತಾ ಬರುತ್ತಿದೆ. ಇತ್ತೀಚೆಗಷ್ಟೇ ಶುರುವಾದ ‘ನಮ್ಮ ಲಚ್ಚಿ’ ಹಾಗೂ ‘ರಾಣಿ’ ಧಾರಾವಾಹಿಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದೀಗ “ನೀನಾದೆ ನಾ” ಎಂಬ ಹೊಸ ಧಾರಾವಾಹಿಯನ್ನು ಪ್ರಸಾರಮಾಡಲು ಸಜ್ಜಾಗಿದೆ.

ದೇವರ ಆಟ ಬಲ್ಲವರಾರು ಎಂಬ ಮಾತಿದೆ. ಈ ಕತೆನೂ ಒಂತರ ಹಾಗೇನೇ ಅಪರಿಚಿತ ಹೃದಯಗಳ ಅನಿರೀಕ್ಷಿತ ಪ್ರೇಮಯಾನವೇ ‘ನೀನಾದೆ ನಾ’.

ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ರು ಕೂಡ ಸಂಸ್ಕಾರ-ಸಂಸ್ಕೃತಿ, ಆಚಾರ-ವಿಚಾರಗಳನ್ನು ಪರಿಪಾಲಿಸುವಲ್ಲಿ ಸದಾ ಮುಂದೆ ಈ ಕಥಾ ನಾಯಕಿ ‘ವೇದಾ’. ಅಜ್ಜಿಯ ಪ್ರೀತಿಯ ಮೊಮ್ಮಗಳು ‘ವೇದಾ’ ನೇರ ನಡೆಯನ್ನು ಹೊಂದಿರುತ್ತಾಳೆ. ಈಕೆಗೆ ಮನೆಯವರ ಸಮ್ಮುಖದಲ್ಲಿ, ಹುಟ್ಟಿ ಬೆಳೆದ ಊರಲ್ಲಿ, ಮನೆಯವರು ನೋಡಿದ ಹುಡುಗನೊಂದಿಗೆ ಮದುವೆಯಾಗಬೇಕು ಎಂಬ ಅಸೆ ಇರುತ್ತೆ ಆದರೆ ಮುಂದೆ ನಡೆಯೋದು ಮಾತ್ರ ವಿಧಿಲಿಖಿತ.

ಇನ್ನು ಕಥಾ ನಾಯಕ ವಿಕ್ರಮ್. ಗುಂಡಾಗಿರಿ ಮಾಡಿಕೊಂಡು, ತನ್ನ ಬಾಸ್ ಹೇಳಿದನ್ನು ಚಾಚು ತಪ್ಪದೆ ಮಾಡೋ ಈತನಿಗೆ , ಆಚಾರ-ವಿಚಾರ ಸಂಸ್ಕಾರವಂತೂ ಇಲ್ವೇ ಇಲ್ಲ, ಪದವಿ ಪಡೆದಿದ್ರು ಕೂಡ ಈತ ಹೀಗಿರೋದ್ರಿಂದ ಅಪ್ಪನಿಗೂ ಇವನ ಮೇಲೆ ಸಿಕ್ಕಾಪಟ್ಟೆ ಕೋಪವಿರುತ್ತೆ.

ಜಾಹೀರಾತುಗಳು
Neenade Na Serial Suvarna
Neenade Na Serial Suvarna

ಅಚಾನಕ್ ಆಗಿ ಒಂದು ದಿನ ದೇವರ ಸನ್ನಿಧಾನದಲ್ಲಿ ವಿಧಿಯಾಟದಂತೆ ವಿಕ್ರಮ್- ವೇದಾಳಿಗೆ ತಾಳಿ ಕಟ್ಟುತ್ತಾನೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ವೇದ ರೌಡಿಯಂತಿರುವ ವಿಕ್ರಮ್ ನನ್ನು ಗಂಡ ಎಂದು ಒಪ್ಪಿಕೊಳ್ತಾಳ ? ವಿದ್ಯಾವಂತಳಾಗಿರುವ ವೇದಾಳ ಮುಂದಿನ ನಡೆ ಏನು ? ವಿರುದ್ಧ ಮನಸುಗಳು ಹೇಗೆ ಒಂದಾಗುತ್ತೆ ಎಂಬುದೇ “ನೀನಾದೆ ನಾ” ಧಾರಾವಾಹಿಯ ಮುಖ್ಯ ಕಥಾ ಹಂದರ.

‘ನೀನಾದೆ ನಾ’ ಧಾರಾವಾಹಿಯು ಅದ್ಬುತ ತಾರಾಬಳಗವನ್ನು ಹೊಂದಿದ್ದು, ನಾಯಕನ ಪಾತ್ರದಲ್ಲಿ ದಿಲೀಪ್ ಶೆಟ್ಟಿ, ನಾಯಕಿಯಾಗಿ ಖುಷಿ ಅಭಿನಯಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಗೆ ಖ್ಯಾತ ನಟ ರಮೇಶ್ ಅರವಿಂದ್ ರವರು ‘ವಂದನ ಮೀಡಿಯಾ’ ಎಂಬ ಸಂಸ್ಥೆಯಡಿ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.

ಹದಿನೈದು ವರ್ಷಗಳಿಂದ ಹೊಸತನಕ್ಕೆ ಮೊದಲ ಆಧ್ಯತೆ ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗ್ತಿದೆ ವಿಭಿನ್ನ ಪ್ರೇಮಕತೆ “ನೀನಾದೆ ನಾ” ಇದೇ ಮೇ 16 ಮಂಗಳವಾರದಿಂದ ರಾತ್ರಿ 9.30 ಕ್ಕೆ ತಪ್ಪದೇ ವೀಕ್ಷಿಸಿ.

Leave a Comment