ಬೊಂಬಾಟ್ ಭೋಜನ ಸೀಸನ್ 4 , ಸಂಕ್ರಾಂತಿ ಹಬ್ಬದಂದು ಇನ್ನಷ್ಟು ಹೊಸತನದೊಂದಿಗೆ ಶುರುವಾಗ್ತಿದೆ ಇದೇ ಸೋಮವಾರದಿಂದ ಮಧ್ಯಾಹ್ನ 12 ಗಂಟೆಗೆ..!

ಜಾಹೀರಾತುಗಳು

ಸ್ಟಾರ್ ಸುವರ್ಣ – ಬೊಂಬಾಟ್ ಭೋಜನ ಸೀಸನ್ 4

Bombat Bhojana 4
Bombat Bhojana 4

ಕನ್ನಡ ಕಿರುತೆರೆ ಇತಿಹಾಸದಲ್ಲೇ 1000 ಸಂಚಿಕೆಗಳನ್ನು ದಾಟಿ ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಷೋ “ಬೊಂಬಾಟ್ ಭೋಜನ”. ಈಗಾಗಲೇ 3 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಇದೀಗ 4ನೇ ಆವೃತ್ತಿಯೊಂದಿಗೆ ಬರಲು ಸಜ್ಜಾಗಿದೆ.

ಇನ್ನು ಈ ಬಾರಿಯ ‘ಬೊಂಬಾಟ್ ಭೋಜನ ಸೀಸನ್ 4’ ಅನೇಕ ವಿಶೇಷತೆಗಳೊಂದಿಗೆ ನಿಮ್ಮ ಮುಂದೆ ಬರ್ತಿದೆ. ಈ ಸೀಸನ್ ಅಲ್ಲಿ ಏನೆಲ್ಲಾ ಇರುತ್ತೆ ಎಂದು ಹೇಳೋದಾದ್ರೆ

1. ನಿಮ್ಮ ಅಡುಗೆ : ಜನಸಾಮಾನ್ಯರು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸುವುದು.

2. ಆರೋಗ್ಯವೇ ಭಾಗ್ಯ : ಡಾ|| ಗೌರಿ ಸುಬ್ರಮಣ್ಯ ರವರು ಜನರಿಗೆ ಉಪಯುಕ್ತವಾದ ಮನೆಮದ್ದನ್ನು ಇಲ್ಲಿ ತಿಳಿಸುತ್ತಾರೆ.

3. ಮನೆ ಊಟ : ಒಬ್ಬರ ಮನೆಗೆ ಸರ್ಪ್ರೈಸ್ ಎಂಟ್ರಿ ಕೊಟ್ಟು, ಅವರು ತಯಾರಿಸಿರುವ ಅಡುಗೆಯ ರುಚಿಯನ್ನು ಸವಿದು ಅವರೊಂದಿಗೆ ಮಾತುಕತೆ ನಡೆಸುವುದು.

4. ನಮ್ಮೂರ ಊಟ : ಕರ್ನಾಟಕದಾದ್ಯಂತ ಚಲಿಸಿ, ಜನಪ್ರಿಯತೆಗಳಿಸಿರುವ ವರ್ಷಗಳ ಇತಿಹಾಸವಿರುವ ಹೋಟೆಲ್ ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ತಿನಿಸುಗಳನ್ನು ಜನರಿಗೆ ತಿಳಿಸುವುದು.

ಜಾಹೀರಾತುಗಳು

5. ಸವಿಯೂಟ : ಬೇರೆ ಬೇರೆ ಜಿಲ್ಲೆಗಳಲ್ಲಿರುವ ಲೇಡೀಸ್ ಕ್ಲಬ್ ಗಳಿಗೆ ಹೋಗಿ ಅಲ್ಲಿನ ಜನರೊಂದಿಗೆ ಬೆರೆತು, ಅಡುಗೆ ಮಾಂತ್ರಿಕ ಸಿಹಿ ಕಹಿ ಚಂದ್ರು ರವರು ವಿಭಿನ್ನ ಅಡುಗೆ ಡಿಶ್ ಗಳನ್ನು ತಯಾರಿಸುತ್ತಾರೆ.

6. ಟಿಫನ್ ಕ್ಯಾರಿಯರ್ : ಬೆಳಗ್ಗೆ ಆಫೀಸ್, ಸ್ಕೂಲ್ ಗೆ ಹೋಗೋರಿಗೆ ಡಬ್ಬಿಗೆ ಕಟ್ಟಿಕೊಡಬಹುದಾದ ಬಲು ಸುಲಭವಾಗಿರುವ ತಿನಿಸುಗಳನ್ನು ಹೇಳಲಾಗುತ್ತದೆ

7. ತಿಂಡಿ-ತಿನಿಸು : ಸಂಜೆಯ ಚಹಾಕ್ಕೆ ಸವಿಯಬಹುದಾದ ಹೊಸ ಬಗೆಯ ಕುರುಕ್ ತಿಂಡಿಗಳನ್ನು ಹೇಳಲಾಗುವುದು.

8. ಮುಖ್ಯ ಅಥಿತಿ : ‘ಬೊಂಬಾಟ್ ಭೋಜನ’ ಸೆಟ್ ಗೆ ಜನಪ್ರಿಯ ಕಲಾವಿದರನ್ನು, ಸಿನಿಮಾ ತಾರೆಯರನ್ನು ಕರೆಸಿ ಅವರಿಗಿಷ್ಟವಾದ ಅಡುಗೆಯನ್ನು ಮಾಡಿಕೊಡುವುದು.

ಹೀಗೆ ಅನೇಕ ಹೊಸ ಹೊಸ ಅಡುಗೆ ವಿಭಾಗಗಳನ್ನು ಈ ಬಾರಿಯ ‘ಬೊಂಬಾಟ್ ಭೋಜನ ಸೀಸನ್ 4’ ಹೊಂದಿದೆ.

Bombat Bhojana Season 4
Bombat Bhojana Season 4

ನಳಮಹಾರಾಜ ಸಿಹಿ ಕಹಿ ಚಂದ್ರು ರವರ ನೇತೃತ್ವದಲ್ಲಿ ಶುರುವಾಗುತ್ತಿರುವ ‘ಬೊಂಬಾಟ್ ಭೋಜನ ಸೀಸನ್ 4’ ಇದೇ ಸೋಮವಾರದಿಂದ ಮಧ್ಯಾಹ್ನ 12 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ತಪ್ಪದೇ ವೀಕ್ಷಿಸಿ

Leave a Comment