200 ಸಂಚಿಕೆಗಳ ಸಂಭ್ರಮದಲ್ಲಿ ಭೂಮಿಗೆ ಬಂದ ಭಗವಂತ ! – ಜೀ ಕನ್ನಡ ಚಾನೆಲ್

ಜಾಹೀರಾತುಗಳು

ಜೀ ಕನ್ನಡ ಚಾನೆಲ್ ಭೂಮಿಗೆ ಬಂದ ಭಗವಂತ

Bhoomige Bandha Bhagavantha
Bhoomige Bandha Bhagavantha

ವಿಭಿನ್ನ , ವಿಶೇಷ ಮನರಂಜನಾ ಪ್ರಯೋಗಗಳಿಗೆ ಸದಾ ಮುಂಚೂಣಿಯಲ್ಲಿರುವ ಕನ್ನಡದ ನಂಬರ್ 1 ವಾಹಿನಿ ಜೀ ಕನ್ನಡ ಹೆಮ್ಮೆಯಿಂದ ಅರ್ಪಿಸಿದ ಧಾರಾವಾಹಿ ಭೂಮಿಗೆ ಬಂದ ಭಗವಂತ . ಸೋಮವಾರದಿಂದ ಶುಕ್ರವಾರ ರಾತ್ರಿ 10 ಗಂಟೆಗೆ ಪ್ರಸಾರವಾಗುವ ಈ ಧಾರಾವಾಹಿ ಮಧ್ಯಮ ವರ್ಗದ ಜನರ ಬದುಕಿನ ಕಥೆಗಳನ್ನು ಹೇಳುತ್ತಲೇ ಜೀವನದ ಮೌಲ್ಯಗಳನ್ನು ಭಗವಂತನ ಮೂಲಕ ನೋಡುಗರಿಗೆ ತಿಳಿಸುತ್ತ ಕಿರುತೆರೆ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ .

ಸಾರ್ಥಕ 200 ಸಂಚಿಕೆಗಳನ್ನು ಪೂರೈಸುತ್ತಿರುವ ಈ ಧಾರಾವಾಹಿಯ ನಿರ್ಮಾಣದ ಜವಾಬ್ದಾರಿಯನ್ನು ತಾಂಡವ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆ ಹೊತ್ತಿದ್ದರೆ ಆರೂರು ಜಗದೀಶ್ ಪ್ರಧಾನ ನಿರ್ದೇಶಕರಾಗಿದ್ದಾರೆ ಮತ್ತು ಕುಮಾರ್ ಕೆರಗೋಡು ಸಂಚಿಕೆ ನಿರ್ದೇಶಕರಾಗಿದ್ದಾರೆ .

ಜಾಹೀರಾತುಗಳು

ಜೀ ಕನ್ನಡ ಚಾನೆಲ್

ಇನ್ನು ನಟ , ನಿರ್ದೇಶಕ ನವೀನ್ ಕೃಷ್ಣ , ನಟಿ ಕೃತ್ತಿಕಾ ರವೀಂದ್ರ , ಹಿರಿಯ ನಟರಾದ ಉಮೇಶ್ ಎಂ ಎಸ್ , ಭಗವಂತನ ಪಾತ್ರಧಾರಿಯಾಗಿ ಕಾರ್ತಿಕ್ ಸಾಮಗ , ಅಂಕಿತಾ ಜಯರಾಮ್ , ಅನುರಾಗ್ , ಶೋಧನ್ ಬಸ್ರೂರ್ , ಅಶ್ವಿನಿ ಸೇರಿದಂತೆ ಬಹುತಾರಾಗಣ ಈ ಧಾರಾವಾಹಿಯಲ್ಲಿದೆ.

Bhoomige Banda Bhagavantha Success
Bhoomige Banda Bhagavantha Success

ಮತ್ತೊಂದು ವಿಶೇಷವೆಂದರೆ , ಇದು ಮಕ್ಕಳಿಂದ ವಯೋವೃದ್ಧರವರೆಗೂ ತಲುಪಿದ್ದು ಧಾರಾವಾಹಿಗೆ ಮತ್ತು ತಂಡಕ್ಕೆ ಹೆಮ್ಮೆಯ ಸಂಗತಿ ಎನ್ನುತ್ತದೆ ವಾಹಿನಿ.

Leave a Comment