ಸಾವಿರದ ಗಡಿ ದಾಟಿದ “ಬೊಂಬಾಟ್” ಶೋ – ಸ್ಟಾರ್ ಸುವರ್ಣ

ಜಾಹೀರಾತುಗಳು
Bombat Bhojana 1000 Episodes
Bombat Bhojana 1000 Episodes

ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಪಾತ್ರಕ್ಕೆ ಮಸಾಲೆ ಹಾಕಿ ನಗುವನ್ನು ಹಂಚಿದ ಶ್ರೀ ಸಿಹಿಕಹಿ ಚಂದ್ರುರವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಬೊಂಬಾಟ್ ಭೋಜನ” ಕಾರ್ಯಕ್ರಮದಲ್ಲಿ ಪಾತ್ರೆಗೆ ಮಸಾಲೆ ಹಾಕಿ ಭೋಜನ ಪ್ರಿಯರಿಗೆ ರಸದೌತಣವನ್ನು ಬಡಿಸುತ್ತ ಅಮೋಘ 1000 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

ಬೊಂಬಾಟ್ ಭೋಜನದ ಮೂರನೇ ಆವೃತ್ತಿ ಇದಾಗಿದ್ದು, ಈ ಆವೃತ್ತಿಯು ಸಾಕಷ್ಟು ವೈಶಿಷ್ಟ್ಯತೆಗಳಿಂದ ತುಂಬಿದೆ. ನಮ್ಮೂರ ಊಟ, ಮನೆ ಊಟ, ಸವಿ ಊಟ, ಕೈ ರುಚಿ, ಅಂಗೈಯಲ್ಲಿ ಆರೋಗ್ಯ, ಅಂದ ಚೆಂದ ಹಾಗೂ ಅತಿಥಿ ದೇವೋಭವ ಎಂಬ ವಿಭಾಗಗಳನ್ನು ಹೊಂದಿದ್ದು ಮನೆ ಮಂದಿಯ ಮನಗೆದ್ದು ಮನೆ ಮಾತಾಗಿದೆ.

ಜಾಹೀರಾತುಗಳು
1000 Episodes of Bombat Bhojana
1000 Episodes of Bombat Bhojana

ಹೀಗೆ ಹತ್ತು ಹಲವು ವಿಶೇಷತೆಗಳಿಂದ ಕೂಡಿರುವ “ಬೊಂಬಾಟ್ ಭೋಜನ ಶೋ” 1000 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿದ್ದು ಸಾವಿರದ ಸಂಚಿಕೆಯಲ್ಲಿ ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ರವರು ಭಾಗಿಯಾಗಲಿದ್ದಾರೆ. ತಪ್ಪದೇ ವೀಕ್ಷಿಸಿ ಇದೇ ಮಂಗಳವಾರ ಮಧ್ಯಾಹ್ನ 12 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ.

Leave a Comment