ಜೀ ಕನ್ನಡ ಚಾನೆಲ್

ಜೀ ಕನ್ನಡದಲ್ಲಿ ಅಭೂತಪೂರ್ವ ವಾರಾಂತ್ಯದ ಮನರಂಜನೆ- ಸರಿಗಮಪ, ಕಾಮಿಡಿ ಕಿಲಾಡಿಗಳು ಹಾಗೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅಪೂರ್ವ “ಮಹಾಸಂಭ್ರಮ

ಜಾಹೀರಾತುಗಳು
Zee Mahasambrama
Zee Mahasambrama

ಕನ್ನಡದ ನಂ.1 ಕಿರುತೆರೆ ವಾಹಿನಿ ಜೀ ಕನ್ನಡ ಈ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ತನ್ನ ಜನಪ್ರಿಯ ರಿಯಾಲಿಟಿ ಶೋಗಳಾದ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಹಾಗೂ “ಕಾಮಿಡಿ ಕಿಲಾಡಿಗಳು” ಎರಡೂ ಕಾರ್ಯಕ್ರಮಗಳ “ಮಹಾಸಂಭ್ರಮ” ಪ್ರಸಾರವಾಗಲಿದೆ. ಲಾಕ್ ಡೌನ್ ಸಮಯದಲ್ಲಿ ಧಾರಾವಾಹಿಗಳ ಮರು ಪ್ರಸಾರದ ಸಮಸ್ಯೆಯಿಲ್ಲದೆ ಹೊಚ್ಚಹೊಸ ಕಂಟೆಂಟ್ ಪ್ರಸಾರವಾಗಲಿದೆ.

ಜೀ ಕನ್ನಡ ಪ್ರಾರಂಭದಿಂದಲೂ ತನ್ನ ಅಚ್ಚುಮೆಚ್ಚಿನ ವೀಕ್ಷಕರಿಗೆ ವಿಶೇಷ ಮನರಂಜನೆಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನ ಅದ್ಭುತ ನೃತ್ಯ, ಸರಿಗಮಪದ ಅದ್ಭುತ ಸಂಗೀತ ಕಾರ್ಯಕ್ರಮ ಹಾಗೂ ವಿನೋದಮಯ ಕಾಮಿಡಿ ಕಿಲಾಡಿಗಳು ವೀಕ್ಷಕರನ್ನು ರಂಜಿಸಿವೆ. ಪ್ರತಿವಾರ ವಿನೂತನ ಬಗೆಯ ಕಾರ್ಯಕ್ರಮಗಳನ್ನು ರೂಪಿಸುವ ಈ ವಾಹಿನಿಯು ಈ ಬಾರಿ ಮೂರು ಜನಪ್ರಿಯ ರಿಯಾಲಿಟಿ ಶೋಗಳ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿದೆ.

ಜಾಹೀರಾತುಗಳು

ಅನುಶ್ರೀ ನಿರೂಪಣೆಯ “ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್” ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದು ಜನಮನ್ನಣೆ ಪಡೆದಿದೆ. ಹಾಗೆಯೇ ನಟ ಮಾಸ್ಟರ್ ಆನಂದ್ ನಿರೂಪಣೆಯ “ಕಾಮಿಡಿ ಕಿಲಾಡಿಗಳು” ಇಡೀ ಕರ್ನಾಟಕವನ್ನು ಹಾಸ್ಯದಲ್ಲಿ ಮುಳುಗಿಸಿದೆ. ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆಯುತ್ತಿರುವ ಜನರಿಗೆ ಅಭೂತಪೂರ್ವ ಮನರಂಜನೆಯ ಭರವಸೆ ನೀಡಲಿದೆ. ಸರಿಗಮಪ ತನ್ನ ಪ್ರತಿ ಸೀಸನ್ ಗೂ ಜನಪ್ರಿಯತೆ ಹೆಚ್ಚಿಸಿಕೊಂಡು ಹಲವು ಜನಪ್ರಿಯ ಗಾಯಕರನ್ನು ಹುಟ್ಟು ಹಾಕಿದೆ. ಈ ಗಾಯಕರು ಜೀ ಕನ್ನಡ ವೀಕ್ಷಕರಿಗೆ ಮನರಂಜನೆಯ ಭರಪೂರ ನೀಡಲಿದೆ.

ವಾರಾಂತ್ಯದ ಭರಪೂರ ರಂಜನೆಗೆ ಅನುಶ್ರೀ, ಆನಂದ್ ನಿರೂಪಣೆ ಮೆರುಗು ಹೆಚ್ಚಿಸಲಿದೆ. ಈ ವಾರಾಂತ್ಯಕ್ಕೆ ನೀವು ಬೇರೆ ಯಾವುದೇ ಚಾನೆಲ್ ಹುಡುಕಾಟ ನಡೆಸದೆ ಜೀ ಕನ್ನಡ ಟ್ಯೂನ್ ಆಗಿರಿ ಹಾಗೂ ಮನರಂಜನೆಯನ್ನು ಹೊಂದಿರಿ.
ಈ ಎರಡೂ ಕಾರ್ಯಕ್ರಮಗಳನ್ನು ವೀಕ್ಷಿಸಲು ನಿಮ್ಮ ನೆಚ್ಚಿನ ಜೀ ಕನ್ನಡ ಹಾಗೂ ಜೀ ಕನ್ನಡ ಎಚ್.ಡಿ.ಗೆ ಟ್ಯೂನ್ ಆಗಿರಿ.

Recent Posts

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

10 hours ago

ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯಲ್ಲಿ ‘ವರಲಕ್ಷ್ಮಿ ಕಲ್ಯಾಣ’ , ಮಹಾ ತಿರುವುಗಳುಳ್ಳ ಸಂಚಿಕೆಗಳು ಇದೇ ಸೋಮ-ಶನಿ ಸಂಜೆ 6.30 ಕ್ಕೆ.

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯು…

3 days ago

ಶ್ರೀ ಬ್ರಾಹ್ಮೀ ಹೊಸ ಕಥೆಯ ಶ್ರಾವಣಿ ಸುಬ್ರಮಣ್ಯ ಜೀ಼ ಕನ್ನಡದಲ್ಲಿ ಶುಭಾರಂಭ ಮಾರ್ಚ್‌ 18ರಿಂದ ಮಹಾಮನೋರಂಜನೆಗೆ ಮುನ್ನುಡಿ

ಮನೋರಂಜನೆಯ ಮಾತು ಬಂದಾಗಲೆಲ್ಲ ಎಲ್ಲಾ ಮನೆಯ ಟಿವಿಯು ಟ್ಯೂನ್‌ ಆಗೋದೇ ಜೀ಼ ಕನ್ನಡಕ್ಕೆ. ಕರುನಾಡನ್ನ ದಶಕಗಳಿಂದ ಮನೋರಂಜಿಸುತ್ತ ಬಂದಿರುವ ಜೀ಼…

3 weeks ago

ಸೂರ್ಯವಂಶ – ಧಾರಾವಾಹಿ ಮಾರ್ಚ್ 11 ರಿಂದ ಸೋಮ-ಶನಿವಾರ ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಉದಯ ಟಿವಿ - ಸೂರ್ಯವಂಶ ಕನ್ನಡ ಟೆಲಿವಿಷನ್ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ…

4 weeks ago

ನಾರಿ ಕುಲಕ್ಕೆ ನಮಿಸಿದ ಜೀ಼ ಸ್ತ್ರೀ ಅವಾರ್ಡ್ – ಜೀ ಕನ್ನಡ ಚಾನೆಲ್

ಜೀ ಕನ್ನಡ ಚಾನೆಲ್ - ನಾರಿ ಕುಲಕ್ಕೆ ನಮಿಸಿದ ಜೀ಼ ಸ್ತ್ರೀ ಅವಾರ್ಡ್ ಹೆಮ್ಮೆಯ ಕನ್ನಡಿಗ, ಜೀ಼ ಕುಟುಂಬದಂತಹ ಪ್ರತಿಷ್ಟಿತ…

1 month ago

ಲಕ್ಷ್ಮಿ ಟಿಫನ್ ರೂಮ್ ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಕನಸುಗಳನ್ನು ಹೊತ್ತ ವರಲಕ್ಷ್ಮಿಯ ಕಥೆ , ಇದೇ ಸೋಮವಾರದಿಂದ ಸಂಜೆ 6.30 ಕ್ಕೆ…!

ಸ್ಟಾರ್ ಸುವರ್ಣ ಧಾರಾವಾಹಿ ಲಕ್ಷ್ಮಿ ಟಿಫನ್ ರೂಮ್ ಹೊಸ ಅಲೆಯ ವಿನೂತನ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ…

1 month ago