ನಿಮ್ಮ ಮನೆ ಮನದಂಗಳಕ್ಕೆ ಬರ್ತಿದೆ ಕರುನಾಡಿನ ಶಕ್ತಿ ದೇವತೆ “ರೇಣುಕಾ-ಯಲ್ಲಮ್ಮನ” ಮಹಾಚರಿತೆ…! ಜನವರಿ 23 ರಿಂದ ರಾತ್ರಿ 8.30 ಕ್ಕೆ.

ಜಾಹೀರಾತುಗಳು
Udho Udho Sri Renuka Yallamma
Udho Udho Sri Renuka Yallamma

ಕನ್ನಡ ಕಿರುತೆರೆ ವೀಕ್ಷಕರಿಗೆ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಹರ ಹರ ಮಹಾದೇವ, ಮಹಾಭಾರತ, ರಾಧಾಕೃಷ್ಣ ಹಾಗು ಸೀತೆಯ ರಾಮ ಧಾರಾವಾಹಿಗಳಂತಹ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಧಾರಾವಾಹಿಗಳನ್ನು ನೀಡಿರುವ ಸ್ಟಾರ್‌ ಸುವರ್ಣ ವಾಹಿನಿಯು ಇದೀಗ ಹೊಸ ವರ್ಷದ ಪ್ರಯುಕ್ತ ಪ್ರೇಕ್ಷಕರಿಗೆ ಕನ್ನಡ ಮಣ್ಣಿನ ಸೊಗಡಿನ ಕಥೆಯನ್ನೊಂದು ಪ್ರಸ್ತುತಪಡಿಸುತ್ತಿದೆ ಅದೇ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ”.

ಶತಮಾನಗಳ ಹಿಂದೆ ಒಮ್ಮೆ ಸುದರ್ಶನ ಚಕ್ರವು ಅಹಂಕಾರದಿಂದ ಮೆರೆದಾಗ, ಭೂಲೋಕದಲ್ಲಿ ಮಾನವನ ರೂಪದಲ್ಲಿ ಜನ್ಮ ತಾಳುವಂತೆ ಭಗವಂತ ಶ್ರೀ ವಿಷ್ಣುವು ಶಾಪ ನೀಡಿ, ನನ್ನಿಂದಾನೆ ನಿನ್ನ ಅಂತ್ಯವಾಗುವುದು ಎಂದು ಹೇಳುತ್ತಾನೆ, ಅಲ್ಲಿಂದ ಈ ಕಥೆ ಪ್ರಾರಂಭವಾಗುತ್ತದೆ.

ಹೀಗೆ ಭೂಲೋಕದಲ್ಲಿ ಕಾರ್ತವೀರ್ಯಾರ್ಜುನನ ರೂಪದಲ್ಲಿ ಸುದರ್ಶನ ಚಕ್ರವು ಜನ್ಮ ತಾಳುತ್ತದೆ. ಹಾಗೂ ಶ್ರೀ ವಿಷ್ಣುವು ಮಾನವ ರೂಪದಲ್ಲಿ ಜನ್ಮತಾಳಲು ಆತನ ತಾಯಿಯಾಗಿ ಪಾರ್ವತಿಯು ರೇಣು ಮಹಾರಾಜನ ಮಗಳಾಗಿ ಜನ್ಮತಾಳುತ್ತಾಳೆ. ರೇಣುಕಾ ಕ್ಷತ್ರಿಯ ಗುಣಗಳನ್ನು ಕಲಿಯುತ್ತ ಬೆಳೆದರೆ, ಯಲ್ಲಮ್ಮನಿಗೆ ಅದು ರಕ್ತಗತವಾಗಿ ಬಂದಿರುತ್ತದೆ. ರೇಣುಕಾ ಅರಮನೆಯ ಗೋಡೆಗಳ ಮಧ್ಯೆ ಬೆಳೆದರೆ, ಯಲ್ಲಮ್ಮ ಪ್ರಕೃತಿಯ ಮಡಿಲಲ್ಲಿ ಬೆಳೆದಿರುತ್ತಾಳೆ. ಲೋಕ ಕಲ್ಯಾಣಕ್ಕಾಗಿ ಹಾಗೂ ದುಷ್ಟ ಸಂಹಾರಕ್ಕಾಗಿ ಒಂದೇ ಆತ್ಮದ ಎರಡು ಶಕ್ತಿಗಳು ಒಂದಾಗಿ ಬಂದು ಮುಂಬರುವ ಕಷ್ಟ ಕೋಟಲೆಗಳನ್ನು ನಿವಾರಿಸುವುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

ಜಾಹೀರಾತುಗಳು

ಹಲವು ಮೊದಲುಗಳಿಗೆ ಸಾಕ್ಷಿಯಾಗಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಕನ್ನಡ ನೆಲದ ಸ್ವಂತ ಕಥೆಯನ್ನು ಕನ್ನಡಿಗರ ಮನೆಗಳಿಗೆ ತಲುಪಿಸಲು ಸಜ್ಜಾಗಿದೆ. ಈಗಾಗಲೇ ಧಾರಾವಾಹಿಯ ಚಿತ್ರೀಕರಣ ಶುರುವಾಗಿದ್ದು ರೇಣುಕಾ ಹಾಗು ಯಲ್ಲಮ್ಮನ ಬಾಲ್ಯದ ಕತೆಯನ್ನು ಚಿತ್ರೀಕರಿಸಲಾಗುತ್ತಿದೆ. ಅಮೋಘ ಸೆಟ್‌ ಮತ್ತು ಗ್ರಾಫಿಕ್ಸ್‌ನಿಂದ ಧಾರಾವಾಹಿಯ ಪ್ರೋಮೋಗಳು ಪ್ರಸಾರವಾಗುತ್ತಿದ್ದು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲದೆ ಈ ಧಾರಾವಾಹಿಯು ಅದ್ಭುತವಾಗಿರೋ ತಾರಾಬಳಗವನ್ನು ಹೊಂದಿದೆ.

ಹೊಸ ವರ್ಷದ ಈ ಸುಸಂದರ್ಭದಲ್ಲಿ ನಿಮ್ಮನ್ನೆಲ್ಲಾ ಆಶೀರ್ವದಿಸಲು ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ನಿಮ್ಮ ಮನೆ ಮನದಂಗಳಕ್ಕೆ ಬರ್ತಿದೆ ಕರುನಾಡಿನ ಶಕ್ತಿ ದೇವತೆಯ ಮಹಾಕಥೆ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಇದೇ ಜನವರಿ 23 ರಿಂದ ರಾತ್ರಿ 8.30 ಕ್ಕೆ ತಪ್ಪದೇ ವೀಕ್ಷಿಸಿ.

Leave a Comment