ಮೇ ೨೯ರಿಂದ ಉದಯಟಿವಿಯಲ್ಲಿ ಮಹಾತಿರವುಗಳ ಹಬ್ಬ “ಉದಯ ದಶಮಿ” ಕನ್ಯಾದಾನದಲ್ಲಿ ನಟಿ ಸುಧಾರಾಣಿ ಅತಿಥಿ

ಜಾಹೀರಾತುಗಳು
Sudharani is a guest at Kanyaadaana
Sudharani is a guest at Kanyaadaana

ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಉದಯ ಟಿವಿ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಗೌರಿಪುರದ ಗಯ್ಯಾಳಿಗಳು, ಕನ್ಯಾದಾನ, ಅಣ್ಣತಂಗಿ, ಆನಂದರಾಗ, ಸುಂದರಿ, ರಾಧಿಕಾ, ಜನನಿ, ನಯನತಾರಾ, ಸೇವಂತಿ ಧಾರಾವಾಹಿಗಳ ಮೂಲಕ ಮನರಂಜನೆಯಲ್ಲಿ ನೈಜತೆಗೆ ಒತ್ತು ನೀಡುತ್ತಿದೆ.

ಇದೀಗ ಉದಯ ಟಿವಿಯ ಎಲ್ಲಾ ಧಾರಾವಾಹಿಗಳು ಒಟ್ಟಿಗೇ ಮಹಾತಿರುವುಗಳೊಂದಿಗೆ ವೀಕ್ಷಕರ ಮುಂದೆ ಬರುತ್ತಿವೆ. ಮೇ ೨೯ ರಿಂದ ಶುರುವಾಗುವ ʻಉದಯ ದಶಮಿʼ ಈ ಮಹಾತಿರುವುಗಳ ಹಬ್ಬ. ಇದು ಸಂಬಂಧಗಳ ಸಂಭ್ರಮವೂ ಹೌದು. ಹೆಣ್ಣು ಒಂದು ಕುಟುಂಬದಲ್ಲಿ ಮಗಳಾಗಿ, ಸೋದರಿಯಾಗಿ, ಗೆಳತಿಯಾಗಿ, ಸೊಸೆಯಾಗಿ, ಪತ್ನಿಯಾಗಿ, ಮಾರ್ಗರ್ಶಕಿಯಾಗಿ ವಿಭಿನ್ನ ಪಾತ್ರಗಳನ್ನು, ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಉದಯ ಧಾರಾವಾಹಿಗಳ ನಾಯಕಿಯರು ಅವರವರ ನೆಲೆಯಲ್ಲಿ ಗುರುತಿಸಲ್ಪಟ್ಟಿದ್ದಾರೆ.

ʻಉದಯ ದಶಮಿʼಯ ಆ ಎರಡು ವಾರ ಉದಯ ಧಾರಾವಾಹಿಗಳಲ್ಲಿ ಅನೇಕ ವಿಶೇಷತೆಗಳು ವೀಕ್ಷಕರಿಗಾಗಿ ಕಾದಿವೆ. ಸಂಜೆ ೬:೩೦ ಕ್ಕೆ ʻಕನ್ಯಾದಾನʼ ಧಾರಾವಾಹಿಯಲ್ಲಿ ಐವರು ಹೆಣ್ಣುಮಕ್ಕಳು ತಂದೆಯ ಮನೆಯಲ್ಲಿ ಒಟ್ಟಿಗೆ ಸೇರಿ ದೇವರ ಉತ್ಸವ ಕರೆಸಿ ಕಷ್ಟ ಪರಿಹಾರ ಪೂಜೆ ಮಾಡಿಸುತ್ತಿದ್ದಾರೆ. ಮದುವೆ ನಂತರವೂ ಜವಾಬ್ದಾರಿಯಿಂದ ನುಣುಚಿಕೊಳ್ಳದ ಅಪ್ಪನ ಬಗ್ಗೆ ಕಾಳಜಿ ತೋರುವ ʼಮಗಳʼ ಸ್ಥಾನದಲ್ಲಿ ಐವರೂ ನಿಲ್ಲುತ್ತಿದ್ದಾರೆ. ಪೂರ್ವಭಾವಿ ದೃಶ್ಯಾವಳಿಗಳಲ್ಲಿಚಿತ್ರರಂಗದ ಖ್ಯಾತ ನಟಿ ಸುಧಾರಾಣಿಯವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಾಹೀರಾತುಗಳು

ಕಿಡಿಗೇಡಿಯೊಬ್ಬನಿಂದ ಬೇಸತ್ತ ಹೆಣ್ಣುಮಗಳು ದೀಪು ಬಾಳಲ್ಲಿ ಬದಲಾವಣೆ ತರುವ ಪಾತ್ರವನ್ನು ಸುಧಾರಾಣಿ ನಿರ್ವಹಿಸಲಿದ್ದಾರೆ. ಪತ್ನಿ ದೀಪುವನ್ನು ಅನುಮಾನಿಸುವ ಗಂಡ ವಿಜಯ್, ಅದಕ್ಕೆ ಸರಿಯಾಗಿ ದೀಪು ಹಿಂದೆ ಬಿದ್ದು ಹಿಂಸಿಸುವ ಸೂರ್ಯ. ತನ್ನ ಬಾಳನ್ನು ದೀಪು ಹೇಗೆ ಸರಿ ಮಾಡಿಕೊಳ್ಳುತ್ತಾಳೆ? ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡ ಸುಧಾರಾಣಿಯವರು ಯಾವ ರೀತಿ ದೀಪು ಬದುಕನ್ನು ಸರಿ ಮಾಡುತ್ತಾರೆ ಎನ್ನುವ ಕುತೂಹಲ ಭರಿತ ಸಂಚಿಕೆಯನ್ನು ಉದಯ ವಾಹಿನಿ ವೀಕ್ಷಕರ ಮುಂದೆ ತರಲಿದೆ.

ನಾಲ್ಕು ಜನ ಹೆಣ್ಣುಕ್ಕಳು ಮತ್ತು ಅಳಿಯಂದಿರನ್ನು ಮನೆಗೆ ಆಹ್ವಾನಿಸಿ ದೇವರನ್ನು ಕರೆಯುವ ಶಾಸ್ತ್ರ ಮಾಡುವ ತಂದೆ ಅಶ್ವಥ್ ಮನೆಯಲ್ಲಿನ ಸಂಭ್ರಮ ಭಾವನಾತ್ಮಕವಾಗಿ ಅಷ್ಟೇ ಅಲ್ಲ ಕಲರ್‌ಫುಲ್ ದೃಶ್ಯಗಳೊಂದಿಗೆ ವೀಕ್ಷಕರನ್ನು ಸೆಳೆಯುವುದರಲ್ಲಿ ಸಂಶಯವಿಲ್ಲ.

“ನೂರಾರು ಸಿನಿಮಾಗಳಲ್ಲಿ ನಾಯಕಿಯಾಗಿ ನೊಂದ ಪಾತ್ರಗಳಿಗೆ ಸ್ಪಂದಿಸುವುದು ಒಂದು ರೀತಿಯ ಅನುಭವ. ನಿಜ ಜೀವನದಲ್ಲಿ ಸುಧಾರಾಣಿಯಾಗಿ ನೋವಲ್ಲಿ ಬೆಂದ ಜೀವಗಳಿಗೆ ಸಾಂತ್ವಾನ ಹೇಳುವ ರೀತಿ ಅನನ್ಯ ಅನುಭವ. ಇಂಥ ಒಂದು ವಿಶೇಷವಾದ ಪಾತ್ರದಲ್ಲಿ ನ ʻಕನ್ಯಾದಾನʼದಲ್ಲಿ ನಿಮ್ಮ ಮನೆ ಮಗಳಾಗಿ ಬರುತ್ತಾ ಇದ್ದೇನೆ. ನೋಡಿ ಹರಸಿ ಹಾರೈಸಿʼʼ ಎಂದು ಸುಧಾರಾಣಿ ಹೇಳಿದ್ದಾರೆ.
ಕನ್ಯಾದಾನ ಧಾರಾವಾಹಿಯ ಈ ರೋಚಕ ತಿರುವು ಇದೇ ೨೯ ರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ ೬:೩೦ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Leave a Comment