ಆಸೆ , ರಮೇಶ್ ಅರವಿಂದ್ ನಿರ್ಮಾಣದಲ್ಲಿ ಶುರುವಾಗ್ತಿದೆ ಹೊಚ್ಚ ಹೊಸ ಧಾರಾವಾಹಿ , ಇದೇ ಸೋಮವಾರದಿಂದ ರಾತ್ರಿ 7.30ಕ್ಕೆ!

ಜಾಹೀರಾತುಗಳು

ಸ್ಟಾರ್ ಸುವರ್ಣ – ಆಸೆ

Suvarna Serial Aase
Suvarna Serial Aase

ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ನೂತನವಾದ ಮನಮುಟ್ಟುವ ಮನರಂಜನೆಯ ಧಾರಾವಾಹಿಗಳನ್ನು ನೀಡುತ್ತಲೇ ಬರುತ್ತಿದೆ, ಇದೀಗ ಈ ಪಟ್ಟಿಗೆ ಸೇರ್ಪಡೆಯಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ “ಆಸೆ”. ನಟ ರಮೇಶ್ ಅರವಿಂದ್ ರವರು ನಿರ್ಮಿಸುತ್ತಿರುವ ಸಾಮಾನ್ಯ ಜನರ ಅಸಾಮಾನ್ಯ ಕಥೆಯಿದು. ಚಿಕ್ಕವನಿದ್ದಾಗ ಗೊತ್ತಿಲ್ಲದೇ ನಡೆದ ಘಟನೆಯಿಂದಾಗಿ ತಾಯಿಯಿಂದ ಪ್ರತಿದಿನ, ಪ್ರತಿಕ್ಷಣ ದೂಷಿಸಲ್ಪಡುತ್ತಿರುವ ಕಥಾನಾಯಕ ಸೂರ್ಯ, ಈತನ ಮಾತು ಸ್ವಲ್ಪ ಒರಟು ಆದರೆ ಮೃದುವಾದ ಮನಸು.

ಜೀವನದಲ್ಲಿ ನೊಂದು-ಬೆಂದು ಆಕಾಂಕ್ಷೆಯನ್ನೇ ಕಳೆದುಕೊಂಡಿರುವ ಸೂರ್ಯ ತಂದೆಯ ಮುದ್ದಿನ ಮಗ. ಮತ್ತೊಂದು ಕಡೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರು ಮುಖದಲ್ಲಿ ಸದಾ ಮಂದಹಾಸವನ್ನು ಹೊಂದಿರೋ ಮೀನಾ ಈ ಕತೆಯ ನಾಯಕಿ. ಮನೆಯ ಕಷ್ಟಕ್ಕಾಗಿ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಹೆತ್ತವರಿಗೆ ಸಹಕರಿಸುತ್ತಿರೋ ಮುಗ್ದ ಮನಸಿನ ಕಣ್ಮಣಿ. ತಮ್ಮ-ತಂಗಿಯರ ವಿದ್ಯಾಭ್ಯಾಸಕ್ಕಾಗಿ ಶ್ರಮಿಸುತ್ತಿರುವ ತಾಯಿಯ ಎರಡನೇ ರೂಪ ಈ ಮೀನಾ .

ಆಸೆ

ಒಂದ್ಕಡೆ ಜೀವನದಲ್ಲಿ ಗುರಿ, ಆಸೆಯೇ ಇಲ್ಲದಿರೋ ಹುಡುಗ ಸೂರ್ಯ, ಇನ್ನೊಂದ್ಕಡೆ ಮನೆಯವರ ಖುಷಿಗಾಗಿ ತುಂಬಾ ಆಸೆಯನ್ನು ಇಟ್ಟುಕೊಂಡಿರೋ ಮೀನಾ. ತದ್ವಿರುದ್ದವಾಗಿರುವ ಮೀನಾ ಹಾಗು ಸೂರ್ಯನ ಬದುಕು ಎದುರು ಬದುರಾದ್ರೆ ಮುಂದೇನಾಗುತ್ತೆ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ. ಈ ಧಾರಾವಾಹಿಯಲ್ಲಿ ನಟ, ರಂಗಭೂಮಿ ಕಲಾವಿದರಾದ ಮಂಡ್ಯ ರಮೇಶ್ ಅವರು ಮುಖ್ಯ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಜೊತೆಗೆ ನಿನಾದ್, ಪ್ರಿಯಾಂಕಾ, ಸ್ನೇಹಾ, ನಾಗೇಂದ್ರ ಶಾ, ಪ್ರಗತಿ, ನಂದೀಶ್, ಲಕ್ಷ್ಮಿ ಚಂದ್ರಶೇಖರ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ಕಲಾವಿದರು ಈ ಅಭಿನಯಿಸುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಶೀರ್ಷಿಕೆ ಗೀತೆಯಂತೂ ನೋಡುಗರ ಮನಗೆದ್ದು ಪ್ರಶಂಸೆಗೆ

ಜಾಹೀರಾತುಗಳು
Aase Serial Suvarna TV
Aase Serial Suvarna TV

ಪಾತ್ರವಾಗಿದೆ.

ಸ್ಟಾರ್ ಸುವರ್ಣ

ಇದೇ ಸೋಮವಾರದಿಂದ ರಾತ್ರಿ 7.30 ಕ್ಕೆ ಶುರುವಾಗ್ತಿದೆ ಸಾಮಾನ್ಯ ಜನರ ಅಸಾಮಾನ್ಯ ಕಥೆ “ಆಸೆ ” ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ. ಬದಲಾದ ಸಮಯದಲ್ಲಿ ಬರ್ತಿದೆ ನಿಮ್ಮ ನೆಚ್ಚಿನ ಧಾರಾವಾಹಿ ‘ಕಾವೇರಿ ಕನ್ನಡ ಮೀಡಿಯಂ’ ಇದೇ ಸೋಮವಾರದಿಂದ ರಾತ್ರಿ 10.30 ಕ್ಕೆ ತಪ್ಪದೇ ವೀಕ್ಷಿಸಿ.

Leave a Comment