ಸುವರ್ಣ ಸಂಕಲ್ಪ‌, ಯಶಸ್ವಿ 1000 ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ ಸ್ಟಾರ್ ಸುವರ್ಣದ ದೈನಂದಿನ ಕಾರ್ಯಕ್ರಮ

ಜಾಹೀರಾತುಗಳು

ಕಾರ್ಯಕ್ರಮವು ಪ್ರತಿದಿನ ಬೆಳಗ್ಗೆ 7.30 ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತದೆ – ಸುವರ್ಣ ಸಂಕಲ್ಪ

ಸುವರ್ಣ ಸಂಕಲ್ಪ‌
Suvarna Sankalp 1000 Episodes

ಕರ್ನಾಟಕದ ಜನತೆಗೆ ಪ್ರತಿದಿನ ಮುಂಜಾನೆ ದೇವರ ದರ್ಶನದ ಜೊತೆಗೆ ಜೀವನದ ಹಾದಿ‌ಯನ್ನು ಮಾರ್ಗದರ್ಶಿಸಿ, ಅಭಿಮಾನಿ‌ ವೀಕ್ಷಕರಿಗೆ ಭಾರತದಲ್ಲಿರುವ ಹೆಸರಾಂತ ದೈವಸಾನಿದ್ಯವನ್ನು ತೋರಿಸುತ್ತಿರುವುದು ಸ್ಟಾರ್ ಸುವರ್ಣ ವಾಹಿನಿಯ ‘ಸುವರ್ಣ ಸಂಕಲ್ಪ’ ಕಾರ್ಯಕ್ರಮ.

ಕರ್ನಾಟಕ ಮಾತ್ರವಲ್ಲದೆ ಭಾರತದ ಹೆಸರಾಂತ ಭಕ್ತತಾಣಗಳಾದ ಮಥುರಾ, ಅಯೋಧ್ಯಾ, ರಾಮೇಶ್ವರಂ, ಶ್ರೀಲಂಕಾ, ಕಾಶಿ, ಮಂತ್ರಾಲಯ ಸೇರಿದಂತೆ ಇನ್ನೂ ಹಲವು ದೈವತಾಣಗಳ ಇತಿಹಾಸ, ಅಲ್ಲಿನ ವಿಶೇಷ, ಹಾಗು ಮಹತ್ವವನ್ನು ಕನ್ನಡಿಗರಿಗೆ ತೋರಿಸಿ ಪ್ರೇಕ್ಷಕರ ಮನಗೆದ್ದಿದೆ. ಕರ್ನಾಟಕದ ಜನರಿಗೆ ಭಾರತದಾದ್ಯಂತ ಮಹತ್ವವುಳ್ಳ ದೇವಸ್ಥಾನಗಳನ್ನು ಕಣ್ತುಂಬಿಕೊಳ್ಳಲು ಅಣುವು ಮಾಡಿಕೊಟ್ಟ ಮೊಟ್ಟ ಮೊದಲ ಕಾರ್ಯಕ್ರಮ ‘ಸುವರ್ಣ ಸಂಕಲ್ಪ’.

ಜಾಹೀರಾತುಗಳು

ಸ್ಟಾರ್ ಸುವರ್ಣ

ಇನ್ನು ಈ ಕಾರ್ಯಕ್ರಮದಲ್ಲಿ ದೇವಸ್ಥಾನಗಳ ಪರಿಚಯ ಮಾತ್ರವಲ್ಲದೆ ಯೋಗ, ಮುದ್ರೆ ಹಾಗು ಸಂಜೀವಿನಿ ಸಂಕಲ್ಪ ಭಾಗಗಳು ಕೂಡ ಬಹಳಷ್ಟು ಜನಪ್ರಿಯತೆ ಗಳಿಸಿದೆ. ಇದೀಗ ‘ಸುವರ್ಣ ಸಂಕಲ್ಪ’ ಕಾರ್ಯಕ್ರಮವು 1000 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿರುವ ಕಾರಣ ಈ ಕಾರ್ಯಕ್ರಮದ ರುವಾರಿಯಾಗಿರುವ ಡಾ||ಗೋಪಾಲಕೃಷ್ಣ ಶರ್ಮಾ ಗುರೂಜಿ ಅವರ ನೇತೃತ್ವದಲ್ಲಿ ಗುರುಗಳಾದ ಭಾರತದ ಶ್ರೇಷ್ಠ ಜ್ಯೋತಿಷ್ಯ ಗಣಿತಜ್ಞರಾದ ಹಾಗು ‘ಉಡುಪಿ ಶ್ರೀ ಕೃಷ್ಣ ಪಂಚಾಂಗ’ದ ಗಣಕರಾದ ಸಾಲಿಗ್ರಾಮದ ‘ವಿದ್ವಾನ್ ಶ್ರೀ ಶ್ರೀನಿವಾಸ್ ಅಡಿಗ’ ರವರಿಗೆ ಅಭಿವಂದನಾಪೂರ್ವಕವಾಗಿ ಗೌರವ ಸನ್ಮಾನವನ್ನು ಮಾಡಲಾಯಿತು.

“ಸುವರ್ಣ ಸಂಕಲ್ಪ” ಕಾರ್ಯಕ್ರಮವು ಪ್ರತಿದಿನ ಬೆಳಗ್ಗೆ 7.30 ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತದೆ. ಈ ಭಕ್ತಿಮಯ‌ ಕಾರ್ಯಕ್ರಮ ಸಾಟಿ ಇಲ್ಲದ ಸಾವಿರ ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ದಾಖಲೆ ಸೃಷ್ಟಿಮಾಡಿದೆ.

Leave a Comment