ರಾಬರ್ಟ್ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು ತರುಣ್ ಸುಧೀರ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿದ್ದಾರೆ. ಚಿತ್ರದಲ್ಲಿ ದರ್ಶನ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ರವಿ ಕಿಶನ್, ನಟಿ ಆಶಾ ಭಟ್, ದೇವರಾಜ್ ಮತ್ತು ಪಿ.ರವಿ ಶಂಕರ್ ನಟಿಸಿದ್ದಾರೆ. ವಿ.ಹರಿಕೃಷ್ಣ ಮತ್ತು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸುಧಾಕರ್ ಎಸ್ ರಾಜ್ ಸಂಕಲನವನ್ನು ಕೆ ಎಂ ಪ್ರಕಾಶ್ ನಿರ್ವಹಿಸಿದ್ದಾರೆ.
ರಾಘವ್ ತನ್ನ ಮಗ ಅರ್ಜುನ್‌ನೊಂದಿಗೆ ಲಕ್ನೋದಲ್ಲಿ ವಾಸಿಸುತಿರುತ್ತಾರೆ. ಬ್ರಾಹ್ಮಣರ ಅಡುಗೆ ಘಟಕದಲ್ಲಿ ಮುಖ್ಯ ಅಡುಗೆಯವನಾಗಿರುತ್ತಾನೆ. ಅವನು ತನ್ನ ಮಗನ ಏಳ್ಗೇಗಾಗಿ ಶ್ರಮಿಸುತ್ತಿರಿತ್ತಾನೆ. ಈ ಉತ್ತಮ ಅಪ್ಪ ಮತ್ತು ಮಗನ ಮಧ್ಯ ಒಂಷ್ಟು ವಿರೋಧಿಗಳು ಇವರನ್ನ ಕೆಣಕಲು ಪ್ರಾರಂಭಿಸುತ್ತಾರೆ.ಆಗ ಮಗ ಅರ್ಜುನ್ ಅವರನ್ನು ಥಳಿಸುತ್ತಾನೆ. ಆಗ ರಾಘವ್ ತನ್ನ ನಿಜ ರೂಪ ತೋರಿಸುತ್ತಾನೆ.ಅವರು ಇತನ ಹಿನ್ನಲೆಯನ್ನು ಗುರುತಿಸಲು ಕರ್ನಾಟಕಕ್ಕೆ ಬರುತ್ತಾರೆ ಆಗ ಅಲ್ಲಿ ಒಂದು ವಿಸ್ಮಯ ನಡಿಯುತ್ತದೆ ಅದು ಯಾವುದು? ಎಂಬುದನ್ನು “ರಾಬರ್ಟ್” ನೋಡುವ ಮೂಲಕ ತಿಳಿಯುತ್ತದೆ.