ನಿನ್ನಿಂದಲೇ – ಸೋಮವಾರದಿಂದ ಶನಿವಾರ ಮಧ್ಯಾಹ್ನ ೨.೩೦ಕ್ಕೆ – ಉದಯ ಟಿ.ವಿ

ಜಾಹೀರಾತುಗಳು
Ninnindale Serial Udaya TV
Ninnindale Serial Udaya TV

ಪ್ರಖ್ಯಾತ ನಟ , ರಾಜೇಶ ನಟರಂಗ ನಿರ್ಮಾಣದಲ್ಲಿ ತಯಾರಾಗುತ್ತಿದೆ ನಿನ್ನಿಂದಲೇ ಧಾರಾವಾಹಿ. ಇದೊಂದು ಪ್ರೇಮ ಕಥೆ. ಸುಮಧುರ ಸ್ನೇಹಕ್ಕೆ ಪ್ರೀತಿಯ ಕರೆಯೋಲೆ ಈ ನಿನ್ನಿಂದಲೇ. ಧ್ವನಿ ಕ್ರಿಯೇ಼ಷನ್ಸ್‌ ಲಾಂಚನದಲ್ಲಿ ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕುತಿರೋ ರಾಜೇಶ , ಈ ಪ್ರೇಮ ಕಥೆಯಲ್ಲಿ ಸಾಕಷ್ಟು ಕೌಟುಂಬಿಕ ಆಂಶಗಳನ್ನ ಸೇರಿಸಿದ್ದಾರೆ.

ರಾಜಲಕ್ಷ್ಮಿಯ ದೊಡ್ಡ ಕುಟುಂಬ , ಅಳಿಯನ ಮನೆಯವರ ಜೊತೆಗೆ ಆದ ಮನಸ್ತಾಪದಿಂದ , ಎರಡು ಕುಟುಂಬ ದೂರವಿರುತ್ತೆ . ಈ ಸಂಬಂದಗಳನ್ನ ಒಂದು ಮಾಡೋಕೆ ಇರೋ ದಾರಿ ತನ್ನ ಮೊಮ್ಮಕಳಾದ ಅನನ್ಯ ಮತ್ತು ವರು಼ಣ್‌ನ ಮದುವೆ. ನಾಯಕಿಯಾಗಿರೊ ಅನನ್ಯಾಳಿಗೆ ನಾಯಕ ವರುಣ್‌ ಅಂದ್ರೆ ಪಂಚಪ್ರಾಣ , ಈ ಪವಿತ್ರ ಸ್ನೇಹದಲ್ಲಿ ಪ್ರೀತಿಯ ಅಲೆ ಹೊಮ್ಮಲಿದೆಯಾ? ಎಂಬುದು ಈ ಧಾರಾವಾಹಿಯ ಸಾರಾಂಶ. ಶರತ್‌ ಪರ್ವತವಾಣಿಯವರ ಕಥೆಗೆ , ವಿನೋದ್‌ ಸಂಭಾಷಣೆ ಬರೆಯುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿಯನ್ನ ದಿಲೀಪ್‌ ಹೊತ್ತಿದ್ದಾರೆ.

ಜಾಹೀರಾತುಗಳು

ನಾಯಕಿಯಾಗಿ ಚಿತ್ರಶ್ರಿ ಮತ್ತು ನಾಯಕನ ಪಾತ್ರದಲ್ಲಿ ದೀಪಕ್‌ ಬಣ್ಣ ಹಚ್ಚುತ್ತಿದ್ದಾರೆ., ಇವರ ಜೊತೆಗೆ ನಟಿ ಜಯಶ್ರಿ , ಲಲಿತಾಂಜಲಿ , ನಮಿತಾ ದೇಸಾಯಿ , ಪ್ರಶಾಂತ್‌ , ನಂದೀಶ , ಶೋಭಿತಾ ಮುಖ್ಯ ಪಾತ್ರಗಳನ್ನ ವಹಿಸಿದ್ದಾರೆ. ನಿನ್ನಿಂದಲೇ ಹಾಡಿಗೆ ಸಾಹಿತ್ಯ ಬರೆದಿರುವುದು ಸಾಹಿತಿ ಜಯಂತ್‌ ಕಾಯ್ಕಿಣಿ. ಸಂಗೀತ ಸಂಯೋಜನೆ ಮಾಡಿರಿವುದು ವಸಂತ್‌ ದನಿಯಾಗಿರೋದು ಮಾನಸ ಹೊಲ್ಲಾ. ನಿನ್ನಿಂದಲೇ ಇದೇ ೨೩ರಿಂದ ಸೊಮವಾರದಿಂದ ಶನಿವಾರ ಮದ್ಯಾಹ್ನ ೨.೩೦ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗಲಿದೆ.

Leave a Comment