ಕಸ್ತೂರಿ, ಶುರುವಾಗ್ತಿದೆ ಹೊಸ ಧಾರಾವಾಹಿ ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ !

ಜಾಹೀರಾತುಗಳು

ಸ್ಟಾರ್ ಸುವರ್ಣ ಧಾರಾವಾಹಿ ಕಸ್ತೂರಿ

Kasthuri Serial Star Suvarna
Kasthuri Serial Star Suvarna

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸತನದ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಇದೀಗ ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಧಾರಾವಾಹಿ “ಕಸ್ತೂರಿ “.

ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ ಈ ಧಾರಾವಾಹಿ ಇದೀಗ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ರಂಜಿತ್ ಎಂಬ ವ್ಯಕ್ತಿ ರಾಜಕೀಯದ ವೃತ್ತಿಯಲ್ಲಿ ಮುನ್ನುಗ್ಗಲು ತಾನು ಪ್ರೀತಿಸಿ ಮದುವೆಯಾಗಿದ್ದ ಹುಡುಗಿಗೆ ಮೋಸ ಮಾಡಿ, ಕೊಲ್ಲಲು ಪ್ರಯತ್ನಿಸುತ್ತಾನೆ, ಆದರೆ ಅದೃಷ್ಟವಶಾತ್ ಆ ಹುಡುಗಿ ಬದುಕಿರುತ್ತಾಳೆ ಜೊತೆಗೆ ಒಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಆ ಮಗುವೇ ಕಸ್ತೂರಿ, ಮುಂದೆ ತನ್ನ ತಾಯಿಗಾದ ಅನ್ಯಾಯಕ್ಕೆ ಕಸ್ತೂರಿ ಹೇಗೆ ನ್ಯಾಯ ಒದಗಿಸುತ್ತಾಳೆ ? ಎಂಬುದೇ ಈ ಧಾರಾವಾಹಿಯ ಮುಖ್ಯ ಕಥೆ.

ಜಾಹೀರಾತುಗಳು

ಕಸ್ತೂರಿ ಧಾರಾವಾಹಿ

Kasturi Serial Kannada
Kasturi Serial Kannada

ಐಶ್ವರ್ಯ ಪಿಸ್ಸೆ ಹಾಗು ನಾಗಾರ್ಜುನ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಕಸ್ತೂರಿ” ಧಾರಾವಾಹಿ ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗಲಿದೆ. ಬದಲಾದ ಸಮಯದಲ್ಲಿ ಬರ್ತಿದೆ “ನಾಗಪಂಚಮಿ” ಇದೇ ಸೋಮವಾರದಿಂದ ಬೆಳಗ್ಗೆ 11 ಗಂಟೆಗೆ.

Leave a Comment