ಇದೇ ಜನವರಿ 15 ರಂದು ಸಂಜೆ 6 ಗಂಟೆಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಿಮ್ಮ ಸ್ಟಾರ್ ಸುವರ್ಣದಲ್ಲಿ ಬರ್ತಿದೆ ಜಗಮೆಚ್ಚಿದ “ಕಾಂತಾರ”..!

ಜಾಹೀರಾತುಗಳು
Kantara Movie Premier
Kantara Movie Premier

2022ರಲ್ಲಿ ಇಡೀ ದೇಶವೇ ಸ್ಯಾಂಡಲ್ವುಡ್ ನತ್ತ ತಿರುಗಿನೋಡುವಂತೆ ಮಾಡಿ, ಇತಿಹಾಸ ಸೃಷ್ಟಿಸಿದ ಕನ್ನಡದ ಹೆಮ್ಮೆಯ ಸಿನಿಮಾ “ಕಾಂತಾರ” ಇದೀಗ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ.

ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಿದ್ದು ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮನಸೆಲ್ಲಾ ನೀನೇ, ಕಥೆಯೊಂದು ಶುರುವಾಗಿದೆ, ಹೊಂಗನಸು, ಸುವರ್ಣ ಸೂಪರ್ ಸ್ಟಾರ್ ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಅಷ್ಟೇ ಅಲ್ಲದೆ ವಾಹಿನಿಯಲ್ಲಿರುವ ಜೇಮ್ಸ್, ಲಕ್ಕಿಮ್ಯಾನ್, RRR ನಂತಹ ಸೂಪರ್ ಹಿಟ್ ಸಿನಿಮಾಗಳ ಸಾಲಿಗೆ ಇದೀಗ ‘ಕಾಂತಾರ’ ಎಂಬ ದಂತಕಥೆಯೊಂದು ಸೇರ್ಪಡೆಯಾಗಲಿದೆ.

ಇದು ಕರ್ನಾಟಕದ ತುಳುನಾಡಿನ ಪ್ರಾಂತ್ಯದಲ್ಲಿ ನಡೆಯುವ ದೈವಾರಾಧನೆ, ಭೂತಕೋಲ, ಕಂಬಳ, ಕೋಳಿ ಅಂಕ, ಇತ್ಯಾದಿ ಸಂಭ್ರಮಗಳ ಹಿನ್ನೆಲೆಯಲ್ಲಿ ನಡೆಯುವ ಕಥೆ. ಹೈವೋಲ್ಟೇಜ್‌ ದೃಶ್ಯಗಳಿಂದ ಆರಂಭವಾಗುವ ಸಿನಿಮಾವು ನೋಡು ನೋಡುತ್ತಿದ್ದಂತೆ ವೀಕ್ಷಕರಿಗೆ ಮಂತ್ರಮುಗ್ಧಗೊಳಿಸುವಂತೆ ಮಾಡುತ್ತದೆ.

ಜಾಹೀರಾತುಗಳು

ಮಾನವನಲ್ಲಿರುವ ದ್ವೇಷ, ದುರಾಸೆ, ಕ್ರೌರ್ಯ, ಬಲಿ ನೀಡುವ, ಬಲಿ ಬೇಡುವ ಕತೆಯನ್ನು ಹೇಳಲು ನಿರ್ದೇಶಕ ಬಳಸಿರುವ ವಾತಾವರಣ, ಕೊನೆಯಲ್ಲಿ ಜರುಗುವ ಅನೂಹ್ಯ ಘಟನೆಯಿಂದ ಸಾಮಾನ್ಯ ಕಥೆಯಾಗಿದ್ದ ಇದಕ್ಕೆ ದೈವತ್ವ ಪ್ರಾಪ್ತವಾಗುತ್ತದೆ.

ಕನ್ನಡದ ಕಿರೀಟ ‘ಕಾಂತಾರ’ ಸಿನಿಮಾದ ಮುಖ್ಯಭೂಮಿಕೆಯಲ್ಲಿ ರಿಷಬ್‌ ಶೆಟ್ಟಿ ಹಾಗು ಸಪ್ತಮಿ ಗೌಡ ನಟಿಸಿದ್ದು, ದೀಪಕ್ ರೈ, ಗುರು ಸನಿಲ್‌, ಪ್ರಕಾಶ್‌ ತುಮಿನಾಡು, ರಂಜನ್‌, ಕಿಶೋರ್‌, ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿ, ಮಾನಸಿ ಸುಧೀರ್‌ ಸೇರಿದಂತೆ ಇನ್ನು ಅನೇಕರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ಕನ್ನಡಿಗರು ಹೊತ್ತು ಕೊಂಡಾಡಿದ ಹೆಮ್ಮೆಯ ಕಥೆ “ಕಾಂತಾರ” ಜನವರಿ 15 ರಂದು ಸಂಜೆ 6 ಗಂಟೆಗೆ ನಿಮ್ಮ ನೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಲಿದೆ. ಕನ್ನಡ ಕಿರುತೆರೆಯಲ್ಲಿ ದೈವ ದರ್ಶನವನ್ನು ಕಣ್ತುಂಬಿಕೊಳ್ಳಲು ತಯಾರಾಗಿ.

Leave a Comment