ಅವನು ಮತ್ತೆ ಶ್ರಾವಣಿ”ಯಲ್ಲಿ ವಿವಾಹ ಅಧ್ಯಾಯ.. ಮಹಾ ತಿರುವುಗಳುಳ್ಳ ಸಂಚಿಕೆಗಳು ಸೋಮ-ಶನಿ ರಾತ್ರಿ 10 ಗಂಟೆಗೆ..!

ಜಾಹೀರಾತುಗಳು

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ ‘ಅವನು ಮತ್ತೆ ಶ್ರಾವಣಿ’ ಎಂಬ ವಿಭಿನ್ನ ಪ್ರೇಮಕತೆ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ

Avanu Mathe Shravani
Avanu Mathe Shravani

ಬದುಕಿನಲ್ಲಿ ನಡೆದಿದ್ದ ಕಹಿ ಘಟನೆಗಳಿಂದಾಗಿ ಕಥಾನಾಯಕಿ ಶ್ರಾವಣಿ ವಿದೇಶದಲ್ಲಿರ್ತಾಳೆ, ಆದರೆ 4 ವರ್ಷಗಳ ಬಳಿಕ ಶ್ರಾವಣಿ ತನ್ನ ದೊಡ್ಡಪ್ಪನ ಮಗಳ ಮದುವೆಯ ಸಲುವಾಗಿ ವಿದೇಶದಿಂದ ಮರಳುತ್ತಾಳೆ. ಆಗ ಶ್ರಾವಣಿಗೆ ತಾನು ಪ್ರೀತಿಸಿ ಮದುವೆಯಾಗಿ ವಿಚ್ಚೇದನ ಪಡೆದ ಅಭಿಮನ್ಯು, ತನ್ನ ತಂಗಿಯನ್ನು ಮದುವೆಯಾಗಲಿರುವ ಹುಡುಗ ಎಂಬ ಸತ್ಯ ಅರಿವಿಗೆ ಬರುತ್ತದೆ. ಮುದ್ದಾಗಿ ಸಾಕಿದ್ದ ‘ಚೀಕು’ ಎಂಬ ನಾಯಿಯಿಂದಾಗಿ ವರ್ಷಗಳ ಬಳಿಕ ಇವರಿಬ್ಬರು ಮುಖಾಮುಖಿಯಾಗ್ತಾರೆ, ಜಗಳನೂ ಆಡುತ್ತಾರೆ.

ಅಭಿಮನ್ಯು ತನ್ನ ತಂಗಿಗೆ ಸರಿಯಾದ ಜೋಡಿ ಅಲ್ಲ ಎಂಬ ಕಾರಣದಿಂದ ಈ ಮದುವೆಯನ್ನು ಹೇಗಾದ್ರು ತಪ್ಪಿಸಬೇಕೆಂದು ಶ್ರಾವಣಿ ತುಂಬಾ ಪ್ರಯತ್ನಿಸುತ್ತಾಳೆ ಆದರೆ ವಿಫಲಳಾಗ್ತಾಳೆ. ಅಚಾನಕ್ ಆಗಿ ಹಳೆ ವಿಷಯಗಳು ಶ್ರಾವಣಿಯ ಅತ್ತಿಗೆ ಬಿಂದುಗೆ ತಿಳಿಯುತ್ತದೆ ಆಕೆಯು ಶ್ರಾವಣಿಯ ಜೊತೆ ಕೈಜೋಡಿಸುತ್ತಾಳೆ.

ಜಾಹೀರಾತುಗಳು
Lakshmi Tiffin Room Kannada TV Serial
Lakshmi Tiffin Room Kannada TV Serial

ಪರಿಸ್ಥಿತಿ ಹೀಗಿದ್ದರೂ ನಿಶಿತಾ-ಅಭಿಮನ್ಯು ಮದುವೆಯ ಘಳಿಗೆ ಸಮೀಪಿಸಿದೆ. ಈ ಮದುವೆ ನಡೆಯುತ್ತಾ? ವಿಧಿ ಇಲ್ಲದೆ ತಂಗಿಗೆ ಮದುವೆ ಮಾಡಿಸಿ ಶ್ರಾವಣಿ ವಿದೇಶಕ್ಕೆ ಹೊರಟು ಹೋಗುತ್ತಾಳ? ಅಭಿ- ಶ್ರಾವಣಿ ಒಂದಾಗುವಂತೆ ಮಾಡುತ್ತಿರುವ ಚೀಕುವಿನ ಪ್ರಯತ್ನ ಫಲಿಸುತ್ತಾ? ಅಭಿ-ಶ್ರಾವಣಿಯ ಎರಡಕ್ಷರದ ಪ್ರೀತಿಗೆ ಸಿಗುತ್ತಾ ಎರಡನೇ ಅವಕಾಶ? ಎಂಬ ಪ್ರಶ್ನೆಗಳ ಉತ್ತರಕ್ಕೆ ತಪ್ಪದೇ ವೀಕ್ಷಿಸಿ ರೋಚಕ ಸಂಚಿಕೆಗಳನ್ನೊಳಗೊಂಡ ‘ಅವನು ಮತ್ತೆ ಶ್ರಾವಣಿ’ ವಿವಾಹ ಅಧ್ಯಾಯ.. ಸೋಮ-ಶನಿವಾರ ರಾತ್ರಿ 10 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ.

Star Suvarna Serials Online
Star Suvarna Channel

Leave a Comment