ಜೀ಼ ಕನ್ನಡದಲ್ಲಿ ಯುಗಾದಿ ಪ್ರಯುಕ್ತ “ಜೀ಼ ಕುಟುಂಬ ಉತ್ಸವ” ಮಹಾಪ್ರೋಮೋ ಬಿಡುಗಡೆ. ಜೀ಼ ಶಕ್ತಿಯರಿಗೆ ಸನ್ಮಾನ

ಜಾಹೀರಾತುಗಳು
Zee Kutumba Utsava
Zee Kutumba Utsava

ಕನ್ನಡದ ಅತ್ಯಂತ ಜನಪ್ರಿಯ ವಾಹಿನಿ ಜೀ಼ ಕನ್ನಡ, ಯುಗಾದಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಲು ವಿಶೇಷ ಕಾರ್ಯಕ್ರಮ “ಜೀ಼ ಕುಟುಂಬ ಉತ್ಸವ” ವನ್ನು ಪ್ರಸಾರ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಜೀ಼ ಕನ್ನಡ ವಾಹಿನಿಯ ಎಲ್ಲಾ ಧಾರಾವಾಹಿಗಳ ಕಲಾವಿದರು ತಮ್ಮ ಮಾತು, ಹಾಸ್ಯ, ನೃತ್ಯ, ಮತ್ತು ಆಟಗಳ ಮೂಲಕ ವೀಕ್ಷಕರಿಗೆ ಮನರಂಜನೆಯನ್ನು ಉಣಬಡಿಸಲಿದ್ದಾರೆ. ವಿಭಿನ್ನ, ವಿನೂತನ, ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಜೀ಼ ಕನ್ನಡ ವಾಹಿನಿ, ಈ ಜೀ಼ ಕುಟುಂಬ ಉತ್ಸವದಲ್ಲೂ ಹಲವು ವಿಶೇಷತೆಗಳನ್ನ ಮೆರೆದಿದೆ.

ಕನ್ನಡ ಕಿರುತೆರೆಯಲ್ಲೇ ಮೊಟ್ಟ ಮೊದಲ ಬಾರಿಗೆ ಒಂದು ಸಾಹಸಕ್ಕೆ ಕೈ ಹಾಕಿದೆ ಅದೇ ಮಹಾಪ್ರೋಮೋ ಪ್ರಸಾರ. ಮಹಾಪ್ರೋಮೋ – ಸಾಮಾನ್ಯವಾಗಿ ಧಾರಾವಾಹಿಗಳ ಕತೆಯಲ್ಲಿ ನಾಳೆ ಏನಾಗಬಹುದು ಎಂದು, ಹಿಂದಿನ ದಿನದ ಪ್ರೋಮೋಗಳ ಮೂಲಕ ನೋಡತ್ತಿದ್ದ ವೀಕ್ಷಕರಿಗೆ, ಕತೆಯಲ್ಲಿ ಒಂದು ತಿಂಗಳು ಅಥವಾ ಅದಕ್ಕೂ ಮುಂದೆ, ಕತೆಯ ತಿರುವು ಯಾವ ದಿಕ್ಕಿಗೆ ಸಾಗುತ್ತದೆ ಎಂಬ ವೀಕ್ಷಕರ ಕೂತೂಹಲಕ್ಕೆ ಉತ್ತರ ನೀಡುವ ಪ್ರೋಮೋನೇ ಈ ಮಹಾ ಪ್ರೋಮೋ. ಈ ಧೈರ್ಯ, ಪ್ರಯತ್ನ ಕನ್ನಡ ಕಿರುತೆರೆಯಲ್ಲಿ ಮೊದಲು.ಇದರ ಜೊತೆಗೆ 35 ವರ್ಷಕ್ಕೂ ಹೆಚ್ಚು ಕಾಲ ಚಂದನವನದಲ್ಲಿ ಸೇವೆ ಸಲ್ಲಿಸಿ, ಹಲವು ನಟ ನಟಿಯರಿಗೆ ಸ್ಪೂರ್ತಿಯಾಗಿ, ಈಗ ಜೀ಼ ಕನ್ನಡದ ಧಾರಾವಾಹಿಗಳಲ್ಲೂ ಮಿಂಚುತ್ತಿರುವ ಹಿರಿಯ ನಟಿಯರಾದ

ಜಾಹೀರಾತುಗಳು

ಪದ್ಮಾ ವಾಸಂತಿ, ಸುಧಾರಾಣಿ, ವಿನಯಾ ಪ್ರಸಾದ್, ವಿಜಯಲಕ್ಷ್ಮೀ ಸಿಂಗ್ ಮತ್ತು ಈಗ ಹೊಸದಾಗಿ ಜೀ಼ ಕುಟುಂಬಕ್ಕೆ ಸೇರ್ಪಡೆಯಾಗುತ್ತಿರುವ ಉಮಾಶ್ರೀ ಅವರನ್ನ “ಜೀ಼ ಶಕ್ತಿ” ಎಂದು ಪರಿಗಣಿಸಿ ಗೌರವಿಸಿದ್ದಾರೆ.ಅಷ್ಟೇ ಅಲ್ಲದೇ, ಜೀ಼ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ʼಹಿಟ್ಲರ್‌ ಕಲ್ಯಾಣʼ ಹಾಗು ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಧಾರಾವಾಹಿಯ ಮಾಹಿತಿಯನ್ನು ನೀಡುತ್ತಾರೆ. ಈ ಎಲ್ಲಾ ಭರಪೂರ ಮನರಂಜನೆ ಇದೇ ಶನಿವಾರ ಮತ್ತು ಭಾನುವಾರ ಸಂಜೆ 7.30 ರಿಂದ 10.30 ರ ವರೆಗೆ ಜೀ಼ ಕನ್ನಡದಲ್ಲಿ ಪ್ರಸಾರವಾಗಲಿದೆ.

Leave a Comment