ಸ್ಟಾರ್ ಸುವರ್ಣ ಧಾರಾವಾಹಿ ಲಕ್ಷ್ಮಿ ಟಿಫನ್ ರೂಮ್
ಹೊಸ ಅಲೆಯ ವಿನೂತನ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ “ಲಕ್ಷ್ಮಿ ಟಿಫನ್ ರೂಮ್” ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ.
ಕಥಾ ನಾಯಕಿ ವರಲಕ್ಷ್ಮಿ ನೇರ ನುಡಿಯನ್ನು ಹೊಂದಿರೋಳು, ಎಂತಹ ಸಂದರ್ಭದಲ್ಲೂ ಈಕೆ ನ್ಯಾಯದ ಪರ ನಿಲ್ಲುವ ಗಟ್ಟಿಗಿತ್ತಿ. ಐಎಎಸ್ ಮಾಡಬೇಕೆಂಬ ಕನಸನ್ನು ಕಂಡಿರುತ್ತಾಳೆ. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿ, ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಮನಸ್ಥಿತಿಯಿರುವ ಮನೆತನಕ್ಕೆ ಸೊಸೆಯಾಗಿ ಹೋಗುತ್ತಾಳೆ.
ಲಕ್ಷ್ಮಿ ಟಿಫನ್ ರೂಮ್
ಆ ಮನೆಯ ರೀತಿ ರಿವಾಜುಗಳು, ಕಟ್ಟುಪಾಡುಗಳನ್ನು ಭೇಧಿಸಿ ತನ್ನ ಗಂಡನ ಮನೆಯಲ್ಲಿರುವ ಎಲ್ಲಾ ಸವಾಲುಗಳನ್ನು ಎದುರಿಸಿ, ವರಲಕ್ಷ್ಮಿ ತನ್ನ ಐಎಎಸ್ ಕನಸನ್ನು ನನಸಾಗಿಸುತ್ತಾಳಾ ? ಈ ಮೂರುಗಂಟಿನ ಬಂಧ, ವರು ಕನಸುಗಳನ್ನು ಕಟ್ಟಿಹಾಕುತ್ತಾ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
ಹೆಣ್ಣೊಬ್ಬಳು ಕೂಡು ಕುಟುಂಬಕ್ಕೆ ಸೊಸೆಯಾಗಿ ಹೋದಾಗ ತನ್ನ ಕನಸನ್ನು ನನಸಾಗಿಸಲು ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕಾಗುತ್ತೆ ಎಂಬುದನ್ನು ಈ ಕಥೆಯಲ್ಲಿ ಅತ್ಯದ್ಭುತವಾಗಿ ತೋರಿಸಲಾಗಿದೆ.
ಸ್ಟಾರ್ ಸುವರ್ಣ ಧಾರಾವಾಹಿ
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ವಿಶೇಷ ಪಾತ್ರದಲ್ಲಿ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೊತೆಗೆ ಸುನೇತ್ರ ಪಂಡಿತ್, ಅನಂತವೇಲು, ವಚನ್, ಮಧುಮಿತಾ, ವಿಜಯಲತಾ, ಕಾವ್ಯ, ಪ್ರೀತಮ್ ಮಕ್ಕಿಹಾಳಿ, ಭಗತ್ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ಶುರುವಾಗ್ತಿದೆ ಪ್ರೀತಿ, ಆಕಾಂಕ್ಷೆಯನ್ನೊಳಗೊಂಡ ವರಲಕ್ಷ್ಮಿಯ ಕಥೆ “ಲಕ್ಷ್ಮಿ ಟಿಫನ್ ರೂಮ್” ಇದೇ ಸೋಮವಾರದಿಂದ ಸಂಜೆ 6.30 ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.