ಜನನಿ – ಆಗಸ್ಟ್ 15 ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ

ಜಾಹೀರಾತುಗಳು

ಉದಯ ಟಿವಿಯ ಹೊಸ ಧಾರಾವಾಹಿ ಜನನಿ ಆಗಷ್ಟ್‌ 15 ರಿಂದ ಸೋಮವಾರದಿಂದ ಶನಿವಾರ ರಾತ್ರಿ 9ಕ್ಕೆ

Serial Janani Udaya TV
Serial Janani Udaya TV

ಉದಯ ವಾಹಿನಿಯ. , ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ರಾಧಿಕಾ, ದಂತಹ ಹಲವಾರು ವಿಭಿನ್ನ ಕೂತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿ ಈಗ “ಜನನಿ” ಎಂಬ ಹೊಚ್ಚ ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ನೀಡಲಿದೆ. ಜನನಿ ಕೌಟುಂಬಿಕ ಆಧಾರಿತ ಧಾರಾವಾಹಿ. ಈ ಕಥೆಯಲ್ಲಿ ಬರುವ ಕಥಾನಾಯಕಿ ಜನನಿಯ ತಂದೆ ರಾತ್ರಿ ಹಗಲೆನ್ನದೆ ಬಹಳ ಕಷ್ಟ ಪಟ್ಟು ತನ್ನ ಮಗಳು ದೊಡ್ಡ ಸಾಧಕಿಯಗಬೇಕೆಂದು ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ . ವಿದ್ಯಾಭ್ಯಾಸ ಮುಗಿದ ತಕ್ಷಣವೇ ಕಾರಣಾಂತರಗಳಿಂದ ಅವಳ ಮದುವೆಯಾಗುತ್ತದೆ .

ಅವಳು ಬಹಳ ನಿರೀಕ್ಷೆಯಿಂದ ತನ್ನ ಗುರಿಯನ್ನು ಹೊತ್ತು ಮದುವೆ ಮಾಡಿಕೊಂಡು ಹೋಗುತ್ತಾಳೆ . ಈ ಕಥೆಯಲ್ಲಿ ಒಂದು ಹೆಣ್ಣು ತನ್ನಲ್ಲಿರುವ ಪ್ರತಿಭೆಯಿಂದ ತನ್ನ ಗುರಿಯನ್ನು ಮುಟ್ಟಲು ತನ್ನ ಮನೆಯಲ್ಲಿ , ಗಂಡನ ಮನೆಯಲ್ಲಿ ಹಾಗು ಈ ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿ , ಹೋರಾಡಿ ಸಾಧನೆ ಮಾಡುವುದರ ಜೊತೆಗೆ ತನ್ನಂತಹ ಇತರ ಹೆಣ್ಣು ಮಕ್ಕಳಿಗೆ ಹೇಗೆ ಸ್ಫೂರ್ತಿ ಆಗುತ್ತಾಳೆ ಎಂಬುದರ ಮೂಲಕ ಒಂದು ಹೆಣ್ಣಿನ ಸಾಧನೆ ಅದರ ಹಿಂದೆ ಇರುವ ವೇದನೆ ಎಲ್ಲವನ್ನು ಬಹಳ ವಿವರವಾಗಿ ಕುತೂಹಲವಾಗಿ ವಿವರಿಸಲಾಗಿದೆ.

ಜಾಹೀರಾತುಗಳು

ಈ ಧಾರವಾಹಿ ಚಿ.ಗುರುದತ್ ನಿರ್ಮಾಣ ಸಂಸ್ಥೆಯಾದ ಶಾರದಾಸ್ ಸಿನಿಮಾಸ್ ಮೂಲಕ ಹೊನ್ನೇಶ್ ರಾಮಚಂದ್ರಯ್ಯ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ . ಕಥಾ ನಾಯಕಿಯಾಗಿ ವರ್ಷಿಕಾ ಹಾಗು ನಾಯಕಿಯ ತಂದೆ – ತಾಯಿಯಾಗಿ ಪ್ರದೀಪ್ ತಿಪಟೂರ್ ಮತ್ತು ದಿವ್ಯಾ ಗೋಪಾಲ್ ಹಾಗು ಕಥಾ ನಾಯಕನಾಗಿ ಹೊಸ ಪರಿಚಯ ಮಂಗಳೂರು ಪ್ರತಿಭೆ ಕಿರಣ್ ಹಾಗು ನಾಯಕನ ತಾಯಿಯಾಗಿ ಪುಷ್ಪ ಸ್ವಾಮಿ ಮತ್ತು ಮಾಂಗಲ್ಯ ಧಾರವಾಹಿ ಖ್ಯಾತಿಯ ಮುನಿ ಅವರು ನಾಯಕನ ಅಣ್ಣನಾಗಿ ಬಹು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಲಕ್ಷ್ಮಣ್ , ಅರುಣ್ , ಶ್ವೇತಾ , ರೂಪ , ಶಿಲ್ಪ ಅಯ್ಯರ್ ನಟಿಸುತ್ತಿರುವ ಹೊಚ್ಚ ಹೊಸ ಧಾರವಾಹಿ ಜನನಿ ಆಗಸ್ಟ್ 15ದ ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ .

Udaya TV
Udaya TV

Leave a Comment