ಸ್ಟಾರ್ ಸುವರ್ಣ

ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ “ಅರಗಿಣಿ-2” | ಡಿಸೆಂಬರ್ 12ರಿಂದ ಮಧ್ಯಾಹ್ನ 2.30ಕ್ಕೆ |

ಜಾಹೀರಾತುಗಳು
Aragini 2 Serial Star Suvarna
Aragini 2 Serial Star Suvarna

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಪ್ರೇಕ್ಷಕರಿಗೆ ವಿಭಿನ್ನ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದುಮಣಿಗಳು, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮರಳಿಮನಸಾಗಿದೆ, ಮನಸೆಲ್ಲಾನೀನೇ, ಬೆಟ್ಟದ ಹೂ, ಜೇನುಗೂಡು ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ “ಅರಗಿಣಿ-2” ಎಂಬ ಶೀರ್ಷಿಕೆಯಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗುತ್ತಿದೆ.

ಇದು ಕೋಪ, ದ್ವೇಷದಿಂದ ಶುರುವಾಗಿ ಪ್ರೀತಿಯ ಮಳೆ ಸುರಿಸೋ ಮನ ಮುಟ್ಟುವ ಪ್ರೇಮಕತೆಯೇ “ಅರಗಿಣಿ-2”.ತಂದೆ ತಾಯಿ ಇಲ್ಲದ ಆಗರ್ಭ ಶ್ರೀಮಂತ ವಿಕ್ರಮಾಧಿತ್ಯ, ಅಕ್ಕ ಅಂದ್ರೆ ಈತನಿಗೆ ಪಂಚಪ್ರಾಣ, ಅಕ್ಕನಿಗಾಗಿ ಏನನ್ನು ಬೇಕಿದ್ರೂ ತ್ಯಾಗ ಮಾಡಲು ಸಿದ್ಧನಿರುವ ಮುದ್ದಿನ ತಮ್ಮ. ಯಾವಾಗಲು ಸಿಡುಕುಮೂತಿ ಹಾಕೊಳ್ಳೋ ಈತ ಕೆಲಸದಲ್ಲಿ ಪಕ್ಕ ಪರ್ಫೆಕ್ಟ್. ಚಿಕ್ಕಂದಿನಲ್ಲಿ ನಡೆದ ಕೆಲವು ಘಟನೆಗಳಿಗೆ ಪ್ರತ್ಯುತ್ತರ ನೀಡಲು ಹಠ ತೊಟ್ಟು, ಗುರಿ ಮುಟ್ಟಿದ ಛಲಗಾರ ಈ ಕಥಾನಾಯಕ ವಿಕ್ರಮಾಧಿತ್ಯ.

ಜಾಹೀರಾತುಗಳು

ಇನ್ನು ಕಥಾನಾಯಕಿ ಪದ್ಮಾವತಿ. ಬಡ ಕುಟುಂಬದಿಂದ ಬಂದಿರೋ ಈಕೆ ಶುದ್ಧ ತರ್ಲೆ, ಮುದ್ದಾಗಿ ತನ್ನ ಪೆದ್ದುತನದಿಂದ ಮನೆಮಂದಿಯನ್ನೆಲ್ಲ ನಗಿಸೋ ನಗುಮೊಗದ ಕಣ್ಮಣಿ. ಪದ್ಮಾವತಿಗೆ ಅಮ್ಮ-ಅಪ್ಪ ಹಾಗು ಅಕ್ಕ ಅಂದ್ರೆ ಪಂಚಪ್ರಾಣ. ಮನೆಯ ಜವಬ್ದಾರಿ ಹೊತ್ತುಕೊಂಡಿರೋ ಈಕೆ ಉದ್ಯೋಗಕ್ಕಾಗಿ ಪರಿತಪಿಸುತ್ತಿರುತ್ತಾಳೆ. ಎಷ್ಟೇ ಕಷ್ಟಗಳು ಎದುರಾದಾಗಲೂ ನಗು ಮುಖದಿಂದಲೇ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳೋ ಮುಗ್ದ ಹುಡುಗಿ ಪದ್ಮಾವತಿ.

ಆದರೆ ವಿಕ್ರಮಾದಿತ್ಯನಿಗೆ ಬಡ ಹುಡುಗಿ ಪದ್ಮಾವತಿ ಮೇಲೆ ಅಕಸ್ಮಾತ್ ಆಗಿ ಹುಟ್ಟಿಕೊಂಡ ದ್ವೇಷ, ಹಾಗೂ ಎರಡು ಸಂಸಾರದ ನಡುವೆ ಆಂತರಿಕ ಸಮಸ್ಯೆಗಳು. ಜೊತೆಗೆ ದ್ವೇಷದಲ್ಲಿ ಪ್ರೇಮ ಮೂಡುವ ಸನ್ನಿವೇಶಗಳ ಭಾವಾಶೇಷವೇ ಈ ಧಾರಾವಾಹಿಯ ಕಥಾಹಂದರ. ಹೊಚ್ಚ ಹೊಸ ಧಾರಾವಾಹಿ “ಅರಗಿಣಿ-2” ಇದೇ ಡಿಸೆಂಬರ್ 12ರಿಂದ ಮಧ್ಯಾಹ್ನ 2.30ಕ್ಕೆ ನಿಮ್ಮ ನೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.

Recent Posts

ಜೀ ಕನ್ನಡದಲ್ಲಿ ‘ಬ್ರಹ್ಮಗಂಟು’ ಇದೇ ಜೂನ್ 17 ರಿಂದ ರಾತ್ರಿ 10 ಗಂಟೆಗೆ! ಋಣಕೂ ಗುಣಕೂ ಅಂದದ ನಂಟು!

ಧಾರಾವಾಹಿ ಬ್ರಹ್ಮಗಂಟು - ಜೀ ಕನ್ನಡ ಚಾನೆಲ್ ಹೊಸತನಕ್ಕೆ ಇನ್ನೊಂದು ಹೆಸರು ಜೀ಼ ಕನ್ನಡ. ಈಗ ತನ್ನ ವೀಕ್ಷಕರಿಗಾಗಿ ಹೊಸ…

14 hours ago

ಬರ್ತಿದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ “ಯುವ” ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶ… ಇದೇ ಭಾನುವಾರ ರಾತ್ರಿ 7 ಗಂಟೆಗೆ

ಸ್ಟಾರ್ ಸುವರ್ಣ - ಯುವ ಕನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ…

2 days ago

ದುಷ್ಟ ಶಕ್ತಿಗಳ ಸಂಹಾರದ ಪಯಣದಲ್ಲಿ ಬಾಲ್ಯದಿಂದ ತಾರುಣ್ಯದ ಕಡೆಗೆ ರೇಣುಕಾ-ಯಲ್ಲಮ್ಮ….ಇದೇ ಸೋಮವಾರದಿಂದ ರಾತ್ರಿ 8.30 ಕ್ಕೆ..!

ಸ್ಟಾರ್ ಸುವರ್ಣ - ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವೀಕ್ಷಕರಿಗೆ ಪುರಾಣ,…

3 weeks ago

ಬರ್ತಿದೆ ಬ್ರ್ಯಾಂಡ್ ನ್ಯೂ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’.. ಮೇ 19 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ…!

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಗಳ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ 'Huu ಅಂತೀಯಾ...Uhuu…

1 month ago

ಶೀಮದ್‌ ರಾಮಾಯಣ , ಉದಯ ಟಿವಿಯಲ್ಲಿ ಮೇ 20 ರಿಂದ ಸೋಮವಾರ-ಶನಿವಾರ ಸಂಜೆ 6 ಗಂಟೆಗೆ

ಉದಯ ಟಿವಿ ಶೀಮದ್‌ ರಾಮಾಯಣ ಕನ್ನಡ ಟೆಲಿವಿಷನ್‌ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ…

1 month ago

ಸುವರ್ಣ ಗೃಹಮಂತ್ರಿ ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ

ಸ್ಟಾರ್ ಸುವರ್ಣ - ಸುವರ್ಣ ಗೃಹಮಂತ್ರಿ ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು…

1 month ago