ಉದಯ ಟಿವಿ

ಜನನಿ – ಆಗಸ್ಟ್ 15 ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9 ಗಂಟೆಗೆ ನಿಮ್ಮ ನೆಚ್ಚಿನ ಉದಯ ಟಿ.ವಿಯಲ್ಲಿ

ಜಾಹೀರಾತುಗಳು

ಉದಯ ಟಿವಿಯ ಹೊಸ ಧಾರಾವಾಹಿ ಜನನಿ ಆಗಷ್ಟ್‌ 15 ರಿಂದ ಸೋಮವಾರದಿಂದ ಶನಿವಾರ ರಾತ್ರಿ 9ಕ್ಕೆ

Serial Janani Udaya TV
Serial Janani Udaya TV

ಉದಯ ವಾಹಿನಿಯ. , ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ರಾಧಿಕಾ, ದಂತಹ ಹಲವಾರು ವಿಭಿನ್ನ ಕೂತೂಹಲಕಾರಿ ಕಥೆಗಳನ್ನು ನೀಡಿದ ಉದಯ ವಾಹಿನಿ ಈಗ “ಜನನಿ” ಎಂಬ ಹೊಚ್ಚ ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ನೀಡಲಿದೆ. ಜನನಿ ಕೌಟುಂಬಿಕ ಆಧಾರಿತ  ಧಾರಾವಾಹಿ.  ಈ ಕಥೆಯಲ್ಲಿ ಬರುವ ಕಥಾನಾಯಕಿ  ಜನನಿಯ ತಂದೆ  ರಾತ್ರಿ ಹಗಲೆನ್ನದೆ ಬಹಳ ಕಷ್ಟ ಪಟ್ಟು ತನ್ನ ಮಗಳು ದೊಡ್ಡ ಸಾಧಕಿಯಗಬೇಕೆಂದು ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ . ವಿದ್ಯಾಭ್ಯಾಸ ಮುಗಿದ ತಕ್ಷಣವೇ ಕಾರಣಾಂತರಗಳಿಂದ ಅವಳ ಮದುವೆಯಾಗುತ್ತದೆ .

ಅವಳು ಬಹಳ ನಿರೀಕ್ಷೆಯಿಂದ ತನ್ನ ಗುರಿಯನ್ನು ಹೊತ್ತು ಮದುವೆ ಮಾಡಿಕೊಂಡು ಹೋಗುತ್ತಾಳೆ  . ಈ ಕಥೆಯಲ್ಲಿ ಒಂದು ಹೆಣ್ಣು  ತನ್ನಲ್ಲಿರುವ ಪ್ರತಿಭೆಯಿಂದ ತನ್ನ ಗುರಿಯನ್ನು ಮುಟ್ಟಲು ತನ್ನ ಮನೆಯಲ್ಲಿ ,  ಗಂಡನ  ಮನೆಯಲ್ಲಿ  ಹಾಗು ಈ ಸಮಾಜದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿ , ಹೋರಾಡಿ  ಸಾಧನೆ  ಮಾಡುವುದರ ಜೊತೆಗೆ ತನ್ನಂತಹ ಇತರ ಹೆಣ್ಣು ಮಕ್ಕಳಿಗೆ ಹೇಗೆ ಸ್ಫೂರ್ತಿ ಆಗುತ್ತಾಳೆ ಎಂಬುದರ ಮೂಲಕ ಒಂದು ಹೆಣ್ಣಿನ ಸಾಧನೆ ಅದರ ಹಿಂದೆ ಇರುವ ವೇದನೆ ಎಲ್ಲವನ್ನು ಬಹಳ ವಿವರವಾಗಿ ಕುತೂಹಲವಾಗಿ ವಿವರಿಸಲಾಗಿದೆ.

ಜಾಹೀರಾತುಗಳು

ಈ ಧಾರವಾಹಿ  ಚಿ.ಗುರುದತ್ ನಿರ್ಮಾಣ ಸಂಸ್ಥೆಯಾದ  ಶಾರದಾಸ್ ಸಿನಿಮಾಸ್ ಮೂಲಕ ಹೊನ್ನೇಶ್ ರಾಮಚಂದ್ರಯ್ಯ ಅವರ ನಿರ್ದೇಶನದಲ್ಲಿ  ಮೂಡಿ ಬರುತ್ತಿದೆ . ಕಥಾ ನಾಯಕಿಯಾಗಿ ವರ್ಷಿಕಾ  ಹಾಗು ನಾಯಕಿಯ ತಂದೆ – ತಾಯಿಯಾಗಿ  ಪ್ರದೀಪ್ ತಿಪಟೂರ್ ಮತ್ತು ದಿವ್ಯಾ ಗೋಪಾಲ್ ಹಾಗು ಕಥಾ ನಾಯಕನಾಗಿ ಹೊಸ ಪರಿಚಯ ಮಂಗಳೂರು ಪ್ರತಿಭೆ ಕಿರಣ್  ಹಾಗು ನಾಯಕನ ತಾಯಿಯಾಗಿ ಪುಷ್ಪ ಸ್ವಾಮಿ ಮತ್ತು ಮಾಂಗಲ್ಯ ಧಾರವಾಹಿ ಖ್ಯಾತಿಯ ಮುನಿ ಅವರು ನಾಯಕನ ಅಣ್ಣನಾಗಿ ಬಹು ಮುಖ್ಯ ಪಾತ್ರದಲ್ಲಿ  ನಟಿಸುತ್ತಿದ್ದಾರೆ ಮತ್ತು ಲಕ್ಷ್ಮಣ್ , ಅರುಣ್ , ಶ್ವೇತಾ , ರೂಪ , ಶಿಲ್ಪ ಅಯ್ಯರ್  ನಟಿಸುತ್ತಿರುವ  ಹೊಚ್ಚ ಹೊಸ ಧಾರವಾಹಿ ಜನನಿ ಆಗಸ್ಟ್ 15ದ ರಿಂದ ಸೋಮವಾರದಿಂದ  ಶನಿವಾರದವರೆಗೆ  ರಾತ್ರಿ 9 ಗಂಟೆಗೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ  .

Udaya TV

Recent Posts

ಜಾನಕಿ ಸಂಸಾರ, ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ಬರ್ತಿದೆ ಹೊಸ ಕಥೆ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

ಸ್ಟಾರ್ ಸುವರ್ಣ - ಜಾನಕಿ ಸಂಸಾರ ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ…

2 days ago

ಬೊಂಬಾಟ್ ಭೋಜನ’ದಲ್ಲಿ ಕಾರ್ಮಿಕರ ದಿನಾಚರಣೆ ಸ್ಪೆಷಲ್…ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..!

ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…

6 days ago

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

2 weeks ago

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…

2 weeks ago

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

3 weeks ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

4 weeks ago