ಸ್ಟಾರ್ ಸುವರ್ಣ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಬರ್ತಿದೆ ಹೊಚ್ಚ ಹೊಸ ಧಾರಾವಾಹಿ “ನಮ್ಮ ಲಚ್ಚಿ”..ಇದೇ ಫೆಬ್ರವರಿ 6 ರಿಂದ ರಾತ್ರಿ 8 ಗಂಟೆಗೆ..!

ಜಾಹೀರಾತುಗಳು
Namma Lacchi Suvarna TV
Namma Lachchi Suvarna TV

ಕನ್ನಡಿಗರಿಗೆ ಹೊಸತನದೊಂದಿಗೆ ವಿಭಿನ್ನ ರೀತಿಯ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೀಗ ಮತ್ತೊಂದು ಹೊಸ ಕಥೆಯೊಂದು ಶುರುವಾಗುತ್ತಿದೆ ಅದೇ “ನಮ್ಮ ಲಚ್ಚಿ”. ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮನಸೆಲ್ಲಾ ನೀನೇ, ಕಥೆಯೊಂದು ಶುರುವಾಗಿದೆ, ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ, ಜೇನುಗೂಡು ಹಾಗೂ ಹೊಂಗನಸು ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮನೆಯ ಮಾತಾಗಿದೆ. ಈ ಸಾಲಿಗೆ ಇದೀಗ ‘ನಮ್ಮ ಲಚ್ಚಿ’ ಎಂಬ ಹೊಸ ಕಥೆಯೊಂದು ಸೇರ್ಪಡೆಯಾಗಲಿದೆ.

ಹಳ್ಳಿಯಲ್ಲಿ ಬೆಳೆದಿರೋ ಪುಟ್ಟ ಮಗುವಿಗೆ ಸಂಗೀತ ಅಂದ್ರೆ ಪಂಚ ಪ್ರಾಣ, ಆದರೆ ತಾಯಿ ಅದನ್ನು ವಿರೋಧಿಸುತ್ತಾಳೆ. ತಂದೆ ಯಾರೆಂದು ತಿಳಿಯದ ಈ ಮಗುವಿಗೆ ಅಪ್ಪನನ್ನು ಹುಡುಕುವ ಹಂಬಲ. ಹಿಂದೆ ನಡೆದಿರುವ ಕೆಲವೊಂದು ಘಟನೆಗಳಿಂದ ಈ ಮಗುವಿನ ತಂದೆ ತಾಯಿ ದೂರವಾಗಿರುತ್ತಾರೆ. ಹೆತ್ತ ತಂದೆ ದೂರವಾಗಿದ್ರು ಆತನ ಗಾಯನ ಕಲೆ ರಕ್ತಗತವಾಗಿ ಬಂದಿರುತ್ತೆ ಈ ಮರಿ ಕೋಗಿಲೆಗೆ. ಸಂಗೀತ ಮಾಂತ್ರಿಕ ಸಂಗಮ್ ಸಾತ್ನೂರ್ ನ ಅತೀ ದೊಡ್ಡ ಅಭಿಮಾನಿಯಾಗಿರುವ ಈ ಮರಿ ಕೋಗಿಲೆಗೆ, ಆತನೇ ತನ್ನ ತಂದೆ ಎಂಬ ಕಟು ಸತ್ಯ ಹೇಗೆ ತಿಳಿಯುತ್ತೆ ಎಂಬುದೇ ‘ನಮ್ಮ ಲಚ್ಚಿ’ ಧಾರಾವಾಹಿಯ ಕಥಾ ಹಂದರ.

ಜಾಹೀರಾತುಗಳು

ಇನ್ನು ಈ ಧಾರಾವಾಹಿಯು ಒಂದು ಸುಂದರವಾದ ತಾರಾಬಳಗವನ್ನು ಹೊಂದಿದ್ದು ವಿಜಯ್ ಸೂರ್ಯ, ನೇಹಾ ಗೌಡ, ಹಾಗು ಲಚ್ಚಿಯಾಗಿ ಸಂಘವಿ, ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಹೊಚ್ಚ ಹೊಸ ಧಾರಾವಾಹಿ “ನಮ್ಮ ಲಚ್ಚಿ” ಇದೇ ಫೆಬ್ರವರಿ 6 ರಿಂದ ರಾತ್ರಿ 8 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

Recent Posts

ಜಾನಕಿ ಸಂಸಾರ, ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ಬರ್ತಿದೆ ಹೊಸ ಕಥೆ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

ಸ್ಟಾರ್ ಸುವರ್ಣ - ಜಾನಕಿ ಸಂಸಾರ ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ…

4 days ago

ಬೊಂಬಾಟ್ ಭೋಜನ’ದಲ್ಲಿ ಕಾರ್ಮಿಕರ ದಿನಾಚರಣೆ ಸ್ಪೆಷಲ್…ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..!

ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…

1 week ago

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

2 weeks ago

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…

2 weeks ago

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

3 weeks ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

1 month ago